logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲ್ಯಾಣ ಕರ್ನಾಟಕದ ಹಿತಕ್ಕಾಗಿ ಅವಿರತ ಹೋರಾಟ ಅಗತ್ಯಬಿದ್ದರೆ ಪ್ರಾಣತ್ಯಾಗಕ್ಕೂ ಸಿದ್ದ: ಬಸವರಾಜ ಪಡುಕೋಟೆ

ಯಾದಗಿರಿ: ಕಲ್ಯಾಣ ಕರ್ನಾಟಕದ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ನುಡಿದರು.

ನಗರದ ಎಸ್‌ಡಿಎನ್ ಹೊಟೆಲ್ ಆವರಣದಲ್ಲಿ ಜರುಗಿದ ನಮ್ಮ ಕರ್ನಾಟಕ ಸೇನೆ ಕಲ್ಯಾಣ ಕರ್ನಾಟಕ ಮಟ್ಟದ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರö್ಯ ಬಂದು 75 ವರ್ಷಗಳಾಗುತ್ತಿದ್ದರೂ ನಮ್ಮ ಭಾಗ ಹಿಂದುಳಿದಿದ್ದು ಸರ್ವಾಂಗೀಣ ಏಳ್ಗೆಗಾಗಿ ಸಂಘಟನೆ ವಿಸ್ತೃತ ಹೋರಾಟ ನಡೆಸಲಿದೆ. ಅಗತ್ಯ ಬಿದ್ದರೆ ಪ್ರಾಣ ಒತ್ತೆ ಇಟ್ಟು ನುಗ್ಗುತ್ತೇವೆ. ಪ್ರಾಣಾರ್ಪಣೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದರು.

ಪ್ರಾಕೃತಿಕವಾಗಿ ಸಂಪದ್ಭರಿತವಾಗಿದ್ದರೂ ಸಾಮಾಜಿಕ, ಆರ್ಥಿಕ ರಾಜಕೀಯವಾಗಿ, ಸರ್ವರಂಗದ ಅಭಿವೃದ್ಧಿಯ ದೃಷ್ಟಿಯಿಂದ ತೀರ ಹಿಂದುಳಿದಿರುವ ಈ ಭಾಗದ ಏಳ್ಗೆಗೆ ನಕಸೇ ದೊಡ್ಡ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಲ್ಯಾಣ ಕರ್ನಾಟಕ ಮಟ್ಟದ ಸಮಾವೇಶ ಯಾದಗಿರಿಯಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದರು.

ಸಭೆ ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ ಕನ್ನಡ ಪರ ಸಂಘಟನೆಗಳ ಪಾತ್ರ ಅಪಾರವಾಗಿದೆ. ರಾಜಕೀಯ ಪಕ್ಷಗಳು ಹೋರಾಟ ಮಾಡಿದರೆ ಅದು ಕೇವಲ ಟೀಕೆಗೆ ಮಾಡಿದ ವಿರೋಧಕ್ಕಾಗಿ ವಿರೋಧ ಮಾಡಿದ್ದಾರೆ ಎನ್ನಲಾಗುತ್ತದೆ. ಸಂಘಟನೆಯವರು ನ್ಯಾಯ ಹಾಗೂ ಸತ್ಯದ ಪರ ಹೋರಾಟ ನಡೆಸಿದಲ್ಲಿ ಯಾವುದೇ ಸರ್ಕಾರ ಮಣಿಯಲಿದೆ ಎಂದು ನುಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಹಣಮೇಗೌಡ ಬೀರನಕಲ್ ಮಾತನಾಡಿ ಸಂಘಟನೆಗಳು ಬಲಿಷ್ಠವಾದಷ್ಟು ಅಧಿಕಾರಿಗಳು ಶಿಸ್ತು ರೂಢಿಸಿಕೊಳ್ಳುತ್ತಾರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾದ್ಯಕ್ಷ ಶ್ರೀಧರ ಸಾಹುಕಾರ ಮಾತನಾಡಿ, ಕನ್ನಡ ಪರ ಸಂಘಟನೆಗಳ ಹೋರಾಟ ಮಾದರಿಯಾಗಿದ್ದು, ಇಂದು ಕನ್ನಡ ರಕ್ಷಣೆ ಕಾರ್ಯ ಈ ಸಂಘಟನೆಗಳಿAದ ಆಗುತ್ತಿದೆ ಇದರಲ್ಲಿ ನಕಸೇ ಕಾರ್ಯ ಜಿಲ್ಲೆಯಲ್ಲಿ ಮಾದರಿಯಾಗಿದೆ. ಅಲ್ಪ ಕಾಲದಲ್ಲೇ ಹಿರಿದಾದ ಸಾಧನೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಗರನಾಡು ಸೇವಾ ಪ್ರತಿಷ್ಠಾನ ಅದ್ಯಕ್ಷ ಸುರಪುರದ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, 40 ವರ್ಷಗಳಿಂದ ಕನ್ನಡ ಪರ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಸವರಾಜ ಪಡುಕೊಟೆ ಅವರ ಹೋರಾಟ ಸಾಧನೆ ಅಪೂರ್ವವಾಗಿದ್ದು, ಇನ್ನು ಹೆಚ್ಚಿನ ಕೊಡುಗೆ ಕೊಡಬಲ್ಲರು ಎಂದು ಆಶಯ ನುಡಿಗಳು ಆಡಿದರು.

ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪೂರ ಪ್ರಾಸ್ತಾವಿಕ ಮಾತನಾಡಿ, ಸಂಘಟನೆ ಬಲಪಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಅನಿಲ್ ಹೆಡಗಿಮುದ್ರಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಮೇಲೆ ನಕಸೇ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಜಾಕನಳ್ಳಿ, ಶ್ರೀಮತಿ ಲಕ್ಷಿö್ಮÃ, ದೇಸಾಯಿಗೌಡ, ಕಲ್ಬುರ್ಗಿ ಜಿಲ್ಲಾಧ್ಯಕ್ಷ ಪುನಿತ್ ಕವಡೆ, ರಾಯಚೂರು ಜಿಲ್ಲಾಧ್ಯಕ್ಷ ಕೊಂಡಪ್ಪ, ಬೀದರ ಜಿಲ್ಲಾಧ್ಯಕ್ಷ ಗಣೇಶ, ಕೊಪ್ಪಳ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ರಮೇಶ, ಯಾದಗಿರಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀದೇವಿ ಕಟ್ಟಿಮನಿ ಇದ್ದರು.

ಇದೇ ವೇಳೆ ಕಲ್ಯಾಣ ಕರ್ನಾಟಕ ಅಧ್ಯಕ್ಷರಾಗಿ ಸುಧೀಂದ್ರ ಇಜೇರಿ, ಉಪಾದ್ಯಕ್ಷರಾಗಿ ರಂಗಯ್ಯ ಮುಸ್ತಾಜಿರ್, ಬೀದರ ಜಿಲ್ಲಾ ಉಪಾಧ್ಯಕ್ಷರಾಗಿ ಸುರೇಶ ಇವರಿಗೆ ಆಯ್ಕೆ ಮಾಡಲಾಯಿತು.

ಯಾದಗಿರಿ ಜಿಲ್ಲೆಗೆ ಅಮರದೀಪ (ಗೌರವಾಧ್ಯಕ್ಷ), ಭೀಮು ಪೂಜಾರಿ (ಪ್ರ. ಕಾರ್ಯದರ್ಶಿ), ಚೆನ್ನಬಸವ ಕನಕ, ಲಿಂಗಣ್ಣ ವಾರದ (ಉಪಾಧ್ಯಕ್ಷರು), ಅಂಬ್ರೇಷ್ ತೆಲುಗುರು (ಪ್ರ.ಸಂಚಾಲಕ), ಗೋವಿಂದ ರಾಠೋಡ (ಸಹ ಕಾರ್ಯದರ್ಶಿ), ಗುರುಮಠಕಲ್ ತಾಲ್ಲೂಕಿಗೆ ಅಬ್ದುಲ್ ರಿಯಾಜ್ ಸಾಹುಕಾರ (ಅಧ್ಯಕ್ಷ), ಹಣಮಂತ ಪೂಜಾರಿ ತಾತಳಗೇರಾ (ಉಪಾಧ್ಯಕ್ಷ) ನೇಮಕ ಮಾಡಲಾಯಿತು.

ಸನ್ಮಾನ: ಇದೇ ವೇಳೆ ನಗರದ ಇಬ್ಬರು ವೈದ್ಯರಿಗೆ ಅವರ ಸೇವೆ ಪರಿಗಣಿಸಿ ವೈದ್ಯರಾದ ಮಕ್ಕಳ ತಜ್ಞ ಡಾ|| ಎಂ.ವಿ. ಶಿವಪ್ರಸಾದ ಮೇತ್ರಿ, ಆಯುಷ ವೈದ್ ಡಾ|| ಪ್ರಕಾಶ ರಾಜಾಪೂರ ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಡಗೇರಿ ತಾ. ಅದ್ಯಕ್ಷ ಮಲ್ಲು ಕಲ್ಮನಿ, ಶಹಾಪೂರ ಅಧ್ಯಕ್ಷ ಸಿದ್ದು ಪಟ್ಟೇದಾರ, ಹುಣಸಗಿ ಅಧ್ಯಕ್ಷ ಭೀಮಣ್ಣಗೌಡ, ಸುರಪುರ ಅದ್ಯಕ್ಷ ವೆಂಕಟೇಶ ಪ್ಯಾಪ್ಲಿ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾದರು.

ಕನಸೇ ಜಿಲ್ಲಾದ್ಯಕ್ಷ ವಿಶ್ವಾರಾಧ್ಯ ದಿಮ್ಮೆ ನೇತೃತ್ವ ವಹಿಸಿದ್ದರು. ಬಸರಡ್ಡಿ ಅಭಿಷ್ಯಾಳ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

----------

ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಯಾವುದೇ ಸಭೆ ಸಮಾರಂಭ ಸಮಾವೇಶ ಯಾದಗಿರಿಯಲ್ಲಿ ಆಯೋಜಿಸಲು ಸೂಚಿಸಿದಲ್ಲಿ ಅದನ್ನು ಯಶಸ್ವಿಗೊಳಿಸಲು ಜಿಲ್ಲಾ ಘಟಕ ಕಂಕಣಬದ್ದವಾಗಿ ಕೆಲಸ ಮಾಡಿ ಯಶಸ್ವಿಗೆ ಶ್ರಮಿಸುತ್ತೇವೆ



-ವಿಶ್ವಾರಾಧ್ಯ ದಿಮ್ಮೆ

ಜಿಲ್ಲಾಧ್ಯಕ್ಷರು

ನಕಸೇ

19
1903 views

Comment