logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ನವ ಸಂಕಲ್ಪ ನವ ಸಿಂಧನೂರು ಘೋಷ ವಾಕ್ಯದಡಿ ವಿಧಾನ ಪರಿಷತ್ ಶಾಸಕ ಶ್ರೀ ಬಸನಗೌಡ ಬಾದರ್ಲಿ ಅವರ ಕೋರಿಕೆ ಮೇರೆಗೆ ಸಿಂಧನೂರು ತಾಲೂಕಿನ ಅಂಭಾಮ ಠದಲ್ಲಿ ವಸತಿ ಕಾಲೇಜು ಸ್ಥಾಪನೆಗೆ ಅಸ್ತು.

ಸಿಂಧನೂರು: ಮಾರ್ಚ್:06

ಆಯವ್ಯಯ 2026-27 ರಲ್ಲಿ ಬಸನಗೌಡ ಬಾದರ್ಲಿ ಶಾಸಕರು ವಿದಾನಪರಿಷತ್ತು ಇವರ ಮನವಿ ಯ ಮೇರೆಗೆ ಮುಖ್ಯ ಮಂತ್ರಿ ಗಳಾದ ಸಿದ್ಧರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕೆಳಗೆ ಪ್ರಸ್ತಾಪಿಸಿದ ಅಂಶಗಳನ್ನು ಬಜೆಟನಲ್ಲಿ ಸೇರಿಸಲಾಗಿದೆ.

1. ಸಿಂಧನೂರು ತಾಲೂಕಿನ ಅಂ ಬಾಮಠದಲ್ಲಿ ವಸತಿಯುಕ್ತ ಪ್ರಥ ಮ ದರ್ಜೆ ಕಾಲೇಜನ್ನು ರೂ 18 ಕೋಟಿ ವೆಚ್ಚದಲ್ಲಿ ಸ್ಥಾಪಿಸುವು ದು.

2. ಸಿಂಧನೂರು ತಾಲೂಕಿನ ಪರಿ ಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿ ನೆಲೆಗಳಿಗೆ ಅಗ ತ್ಯ ಮೂಲಭೂತ ಸೌಕರ್ಯಗಳ ನ್ನು ಒದಗಿಸಲು ಅನುದಾನ ಮೀ ಸಲಿಡಿಸಲಾಗಿದೆ.

3. ತುಂಗಭದ್ರಾ ಜಲಾಶಯದಲ್ಲಿ ನ ಹೂಳಿನ ಶೇಖರಣೆಯಿಂದ ನೀರಿನ ಸಂಗ್ರಹಣ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕೊಪ್ಪ ಳ ಜಿಲ್ಲೆಯ ನವಲಿ ಎಂಬಲ್ಲಿ ಸಮಾನಾಂತರ ಜಲಾಶಯ ನಿ ರ್ಮಾಣ ಸೇರಿದಂತೆ ಇದರ ಪರ್ಯಾಯ ಮಾರ್ಗೋಪಾಯ ಗಳನ್ನು ಕೈಗೊಳ್ಳಲು ಅನುದಾನ ಮೀಸಲಿರಿಸುವುದು.

4. ರಾಯಚೂರು ಜಿಲ್ಲೆಯಲ್ಲಿನ ಮಾದಕ ವಸ್ತುಗಳ ಕಳ್ಳ ಸಾಗಾಣಿ ಕೆ ಹಾಗೂ ಮಾರಾಟವನ್ನು ಸಂ ಪೂರ್ಣವಾಗಿ ನಿಯಂತ್ರಿಸಲು ಮಾದಕ ದ್ರವದ ಕಾರ್ಯಪಡೆ (ANTF) ಘಟಕವನ್ನು ಅಗತ್ಯ ಅನುದಾನವನ್ನು ಬಲಪಡಿಸು ವುದು.

5. ರಾಯಚೂರು ಜಿಲ್ಲೆಯ ಕಲ್ಮ ಲಾ ಸಿಂಧನೂರ ರಸ್ತೆಯ ಉಳಿದ ಸುಮಾರು 17-18 ಕಿಲೋ ಮೀ ಟರ್ ಕಾಮಗಾರಿಯನ್ನು ಮುಕ್ತಾ ಯಗೊಳಿಸಲು ಅನುದಾನ ಮೀ ಸಲಿರಿಸುವುದು.

6. ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಹಾಗೂ ಪ್ರಜಾಪ್ರ ಭುತ್ವ ಮೌಲ್ಯಗಳನ್ನು ವೃದ್ಧಿಸಲು ಕಾಲೇಜು ಮತ್ತು ವಿಶ್ವವಿದ್ಯಾಲ ಯ ಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸಂಬಂಧ ಅಗತ್ಯ ನೆರವು ನೀಡುವುದು. ಸಿಂಧನೂರು ತಾಲೂಕಿನ ಅಭಿ ವೃದ್ದಿಗೆ 2026-27ನೇ ಸಾಲಿನಲ್ಲಿ ಅಗತ್ಯ ಅನುದಾನವನ್ನು ನೀಡಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಸಿಂಧನೂ ರು ಜನತೆಯ ಪರವಾಗಿ ಧನ್ಯ ವಾದಗಳು ಎಂದು ಶಾಸಕರಾದ ಬಸನಗೌಡ ಬಾದರ್ಲಿ,ವಿಧಾನ ಪರಿಷತ್ತು,ಬೆಂಗಳೂರು ಇವರು

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ದರು.



ವರದಿ ಎಸ್ ಎನ್ ವೀರೇಶ

ಸಿಂಧನೂರು



12
152 views

Comment