logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಯಚೂರು ಜಿಲ್ಲೆಯ ಜನರ ನಿರೀಕ್ಷೆಗಳನ್ನು ನಿರ್ಲಕ್ಷಿಸಿದ 2026-27 ರಾಜ್ಯ ಬಜೆಟ್ – ಖಂಡನೀಯ



ಸಿಂಧನೂರು. ಮಾರ್ಚ್:06



ರಾಯಚೂರು ಜಿಲ್ಲೆಯ ಜನರ ನಿರೀಕ್ಷೆಗಳನ್ನು ನಿರ್ಲಕ್ಷಿಸಿದ 20 26-27 ರಾಜ್ಯ ಬಜೆಟ್ – ಹಟ್ಟಿ ಚಿನ್ನದ ಗಣಿ ವಿಸ್ತರಣೆ, ನವಲಿ ಸಮಾನಾಂತರ ಜಲಾಶಯ, ಜವ ಳಗೇರ CSF ನಲ್ಲಿ ವಿಶ್ವವಿದ್ಯಾ ಲಯ ಘೋಷಣೆ ಮಾಡದಿರು ವುದು ಮತ್ತು ಆಸಾಂಖ್ಯಾತ ಅಸಂಘಟಿತ ಕಾರ್ಮಿಕರನ್ನು ಕಡೆಗಣಿಸಿದ್ದು ಖಂಡನೀಯ!



ಮಾನ್ಯ ಮುಖ್ಯಮಂತ್ರಿಗಳು ಮಂ ಡಿಸಿದ ಇಂದಿನ ಬಜೆಟ್ ರಾಯ ಚೂರಲ್ಲಿ ಕೃತಕ ಬುದ್ದಿಮತ್ತೆ(ಎಐ) ಸ್ಥಾಪನೆ, ರಾಯಚೂರು ಮಹಾ ನಗರ ಪಾಲಿಕೆ ಅಭಿವೃದ್ಧಿ, ಇಎಸ್ ಐ ಆಸ್ಪತ್ರೆ ಮೇಲ್ದರ್ಜೆಗೆ, ಟ್ರಾಮಾ ಸೆಂಟರ್ ನಿರ್ಮಾಣ, ಅಂಬಾಮಠದಲ್ಲಿ ವಸತಿ ಯುಕ್ತ, ಪ್ರಥಮ ದರ್ಜೆ ಕಾಲೇಜು, ಮಸ್ಕಿಗೆ ಕ್ರೀಡಾಂಗಣ, ಪಾಮನಕಲ್ಲೂರ, ಸಾಲಗುಂದ, ಜಾಲವಾಡಗಿ, ಮಾನವಿ, ಯರದಿಹಾಳ ಏತ ನೀರಾವರಿ ಹಾಗೂ ಮುಖ್ಯವಾಗಿ ಜನರ ಜೀವನಾಡಿ, ತುಂಗಭದ್ರ 33 ಕ್ರಷ್ಟ ಗೇಟ್ ಹೊಸ ನಿರ್ಮಾ ಣ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಸ್ವಾಗತವಾದುದು.



ಆದರೆ, ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ರಾಜ್ಯದ ದುಡಿಯುವ ಜನತೆ, ರೈತರು ಮತ್ತು ನಿರುದ್ಯೋ ಗ ಯುವಕರ ಆಶೆ-ಆಕಾಂಕ್ಷೆ ಗಳ ನ್ನು ಪೂರೈಸುವಲ್ಲಿ ವಿಫಲವಾಗಿ ದೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ ತೀವ್ರ ವಾಗಿ ಖಂಡಿಸುತ್ತದೆ.



ವಿಶೇಷವಾಗಿ ರಾಯಚೂರುಜಿಲ್ಲೆ ಯ ಜನರು ಹಲವು ವರ್ಷಗಳಿಂ ದ ಆಗ್ರಹಿಸುತ್ತಿರುವ ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಬಜೆಟ್ ಸಂಪೂರ್ಣ ಮೌನವಾಗಿ ರುವುದು ಸರ್ಕಾರದ ಜನವಿರೋ ಧಿ ಧೋರಣೆಯನ್ನು ಬಯಲಿಗೆ ಳೆಯುತ್ತದೆ. ಸಾವಿರಾರು ನಿರು ದ್ಯೋಗಿಗಳಿಗೆ ಉದ್ಯೋಗಾವ ಕಾಶಗಳನ್ನು ಸೃಷ್ಟಿಸಬಲ್ಲ ಹಟ್ಟಿ ಚಿನ್ನದ ಗಣಿ ವಿಸ್ತರಣೆ ಯೋಜನೆ ಕುರಿತು ಯಾವುದೇ ಘೋಷಣೆ ಇಲ್ಲದಿರುವುದು ಅತ್ಯಂತ ದುಃಖ ಕರ. ಈ ಯೋಜನೆ ವಿಸ್ತರಣೆ ಗೊಂಡಿದ್ದರೆ ರಾಯಚೂರು ಜಿಲ್ಲೆ ಯ ಸಾವಿರಾರು ಯುವಕರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗಬಹುದಿತ್ತು.



ಅದೇ ರೀತಿ ಕೃಷಿ ಮತ್ತು ಕುಡಿ ಯುವ ನೀರಿನ ಸಮಸ್ಯೆ ಪರಿಹಾ ರಕ್ಕೆ ಅತ್ಯಂತ ಅಗತ್ಯವಾಗಿರುವ ನವಲಿ ಸಮಾನಾಂತರ ಜಲಾಶ ಯ ನಿರ್ಮಾಣ ಯೋಜನೆಗೂ ಬಜೆಟ್‌ನಲ್ಲಿ ಹಣ ಮೀಸಲಿಡದಿ ರುವುದು ಜಿಲ್ಲೆಯ ರೈತರಿಗೆ ಮಾಡಿದ ದೊಡ್ಡ ಅನ್ಯಾಯವಾ ಗಿದೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಭವಿಷ್ಯದ ನೀರಿನ ಭದ್ರತೆಗಾಗಿ ಈ ಯೋಜನೆಅತ್ಯಂ ತ ಅಗತ್ಯವಾಗಿದೆ.



ಇನ್ನೊಂದೆಡೆ ರಾಯಚೂರು ಜಿಲ್ಲೆ ಯ ಜವಳಗೇರ ಪ್ರದೇಶದಲ್ಲಿರು ವ ಸುಮಾರು 7000 ಎಕರೆ CSF ಭೂಮಿ ಸುಮಾರು ವರ್ಷಗಳಿಂ ದ ಪಾಳು ಬಿದ್ದಿದೆ.ಈ ಭೂಮಿಯ ಲ್ಲಿ ಒಂದು ದೊಡ್ಡ ರಾಜ್ಯ ವಿಶ್ವವಿ ದ್ಯಾಲಯ ಸ್ಥಾಪನೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉತ್ತ ಮ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಬಹುದಾಗಿತ್ತು. ಆದರೆ ಸರ್ಕಾರ ಅದಕ್ಕೂ ಯಾವುದೇ ಘೋಷಣೆ ಮಾಡದಿರುವುದು ಶಿಕ್ಷಣ ಮತ್ತು ಪ್ರಾದೇಶಿಕ ಅಭಿ ವೃದ್ಧಿ ಬಗ್ಗೆ ಸರ್ಕಾರದ ನಿರ್ಲ ಕ್ಷ್ಯ ವನ್ನು ತೋರಿಸುತ್ತದೆ.



ರಾಯಚೂರು ಜಿಲ್ಲೆಯ ಅಭಿವೃ ದ್ಧಿಗೆ ಅಗತ್ಯವಿರುವ ಅಸಂಘಟಿತ ಕಾರ್ಮಿಕರನ್ನು ಖಾಯಂ ಗೊಳಿ ಸದೇ ಕಡೆಗಣಿಸಿರುವುದು ಸೇರಿ ದಂತೆ ಪ್ರಮುಖ ಯೋಜನೆಗಳ ನ್ನು ಕಡೆಗಣಿಸುವುದು ಸರ್ಕಾರದ ಅಭಿವೃದ್ಧಿ ಘೋಷಣೆಗಳ ನಿಜಸ್ವ ರೂಪವನ್ನು ಬಯಲಿಗೆಳೆಯುತ್ತ ದೆ.

ಆದ್ದರಿಂದ ಸರ್ಕಾರ ತಕ್ಷಣವೇ

ಹಟ್ಟಿ ಚಿನ್ನದ ಗಣಿ ವಿಸ್ತರಣೆ ಯೋಜನೆಗೆ ಅನುಮೋದನೆ ನೀಡಬೇಕು,ನವಲಿ ಸಮಾನಾಂ ತರ ಜಲಾಶಯ ನಿರ್ಮಾಣಕ್ಕೆ ಅಗತ್ಯ ಹಣ ಮೀಸಲಿಡಬೇಕು. ಹಾಗೆಯೇ ಜವಳಗೇರಿ CSF ಭೂಮಿಯಲ್ಲಿ ರಾಜ್ಯ ವಿಶ್ವವಿದ್ಯಾ ಲಯ ಸ್ಥಾಪನೆ ಘೋಷಿಸಬೇಕು. ಹಾಗೂ ಅಸಂಘಟಿತ ಕಾರ್ಮಿಕ ರನ್ನು ಖಾಯಂ ಮಾಡಬೇಕು.



ಈ ಮೇಲಿನ ಪ್ರಮುಖ ಜನರ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ನೇತೃತ್ವದಲ್ಲಿ ರೈತರು, ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟಗಳನ್ನು ಆರಂಭಿಸಲಾಗುವುದು ಎಂದು ಸಿಪಿಐ (ಎಂ ಎ ಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ್, ಸಿಂಧ ನೂರು ಹಾಗೂ ಎಂ.ಡಿ. ಅಮೀರ್ ಅಲಿ
ಜಿಲ್ಲಾ ಕಾರ್ಯದರ್ಶಿ ಸಿಪಿಐ (ಎಂಎಲ್ )ರೆಡ್ ಸ್ಟಾರ್ ಇವರು ಎಚ್ಚರಿಸಿದರು.



ವರದಿ: ಎಸ್. ಎನ್. ವೀರೇಶ

ಸಿಂಧನೂರು

32
5682 views

Comment