ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ – 2026 : ಭಾಷಣ ಸ್ಪರ್ಧೆಗೆ ಆಹ್ವಾನ
ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ – 2026 : ಭಾಷಣ ಸ್ಪರ್ಧೆಗೆ ಆಹ್ವಾನ
ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆಯಲ್ಲಿ ಜಿಲ್ಲಾ ಯುವ ಸಂಸತ್ ಉತ್ಸವ–2026 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಕೇಂದ್ರ, ದಾವಣಗೆರೆ ಹಾಗೂ ಕಾಲೇಜಿನ ಎನ್‌ಎಸ್ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ “ವಿಕಸಿತ್ ಭಾರತ್ ಯೂತ್ ಪಾರ್ಲಿಮೆಂಟ್–2026” ಶೀರ್ಷಿಕೆಯಡಿ ಈ ವರ್ಷದ ರಾಷ್ಟ್ರೀಯ ಯುವ ಸಂಸತ್ ಉತ್ಸವ ದೇಶಾದ್ಯಂತ ನಡೆಯುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಸವರಾಜ್ ಸಿ ತಹಸೀಲ್ದಾರ್ ತಿಳಿಸಿದ್ದಾರೆ.
18 ರಿಂದ 25 ವರ್ಷದೊಳಗಿನ ಜಿಲ್ಲೆಯ ಯುವಜನತೆಗೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಮೂರು ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ವಿಕಸಿತ್ ಭಾರತದ ಕುರಿತು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಇದು ಉತ್ತಮ ವೇದಿಕೆಯಾಗಿದೆ.
ದಿನಾಂಕ 5-3-2026 ರ ಗುರುವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರತಿಸ್ಪರ್ಧಿಯು “ತುರ್ತು ಪರಿಸ್ಥಿತಿಗೆ 50 ವರ್ಷ : ಭಾರತೀಯ ಪ್ರಜಾಪ್ರಭುತ್ವ ಕಲಿತ ಪಾಠಗಳು” ಎಂಬ ವಿಷಯದ ಮೇಲೆ ಮೂರು ನಿಮಿಷಗಳ ಭಾಷಣ ಮಾಡಬೇಕಾಗಿದೆ.
ಮೈ ಭಾರತ್ ಪೋರ್ಟಲ್‌ನಲ್ಲಿ ಜಿಲ್ಲೆಯ ಪದವಿ ಕಾಲೇಜುಗಳ ಎನ್‌ಎಸ್ಎಸ್ ಸ್ವಯಂಸೇವಕರು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುತ್ತಾರೆ. ಆಸಕ್ತ ಯುವಕ/ಯುವತಿಯರು ಅಂದೇ ಸ್ಥಳದಲ್ಲಿಯೇ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯ ವ್ಯಾಪ್ತಿಯ ಪದವಿ, ದೈಹಿಕ ಶಿಕ್ಷಣ, ಇಂಜಿನಿಯರಿಂಗ್, ಡಿಪ್ಲೋಮಾ, ಕಾನೂನು, ಐಟಿಐ, ನರ್ಸಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲರು ಕಿವಿಮಾತು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಎನ್‌ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಲೋಕೇಶನಾಯ್ಕ ಹಾಗೂ ಮಂಜುನಾಥ ಅವರನ್ನು ಸಂಪರ್ಕಿಸಬಹುದಾಗಿದೆ.