ಇಂದಿನ ಸುದ್ದಿ
ಯುದ್ಧ ಇನ್ನೂ ನಿಂತಿಲ್ಲ, ಇರಾನ್ ಸೇನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಭೀಕರ ಯುದ್ಧ ಸಾರಿದ್ದು, ದೊಡ್ಡದಾಗಿ ದಾಳಿ ನಡೆಸುತ್ತಿವೆ. ಇಂತಹ ಸಮಯದಲ್ಲೇ ಅಮೆರಿಕದ ಮುಂದಿನ ನಡೆ ಏನು? ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತ ಯುದ್ಧ ನಿಂತು ಹೋಗುತ್ತಾ?
ಎನ್ನುವ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಅಮೆರಿಕ ಅಧ್ಯಕ್ಷರು ಇರಾನ್ ಸೇನೆಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಯುದ್ಧ ಇನ್ನೂ ನಿಂತಿಲ್ಲ ಎಂಬ ಭಾರಿ ದೊಡ್ಡ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಸೇನಾ ಕಾರ್ಯಾಚರಣೆ ಭಾಗವಾಗಿ ಇರಾನ್ ವಿರುದ್ಧ ಮತ್ತೆ ದಾಳಿ ನಡೆಸುವ ಮುನ್ಸೂಚನೆ ಕೂಡ ರವಾನಿಸಿದ್ದಾರೆ.
ಅಮೆರಿಕ ನಡೆಸಿದ ದಾಳಿಗೆ ಇರಾನ್ ನಲುಗಿ ಹೋಗಿದ್ದು, ಇರಾನ್ ರಾಜಧಾನಿ ತೆಹ್ರಾನ್ ಈಗಾಗಲೇ ಸಂಕಷ್ಟದ ಸರಮಾಲೆ ಎದುರಿಸುತ್ತಿದೆ. ನೋಡ ನೋಡುತ್ತಲೇ ಸುಮಾರು 800 ಜನರು ಇರಾನ್ನಲ್ಲಿ ಜೀವ ಕಳೆದುಕೊಂಡಿದ್ದು, ನೂರಾರು ಜನರು ಯುದ್ಧದ ಪರಿಣಾಮ ಆಸ್ಪತ್ರೆಗಳಲ್ಲಿ ಒದ್ದಾಡುತ್ತಿದ್ದಾರೆ. ಇಷ್ಟಾದರೂ ಇರಾನ್ ಮಾತ್ರ ಯುದ್ಧದಲ್ಲಿ ಶರಣಾಗಿ ಶಾಂತಿ ಒಪ್ಫಂದ ಮಾಡಿಕೊಳ್ಳಲು ತಯಾರಿಲ್ಲ. ಬದಲಾಗಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಮತ್ತೆ ಮತ್ತೆ ಸೇಡಿನ ಮಾತು ಆಡುತ್ತಿದೆ ಇರಾನ್, ಈ ಹಿನ್ನೆಲೆ ಈಗಾಗಲೇ ಕುವೈತ್, ಯುಎಇ, ಕತಾರ್ ಸೇರಿ ಹಲವು ಅರಬ್ ದೇಶಗಳ ಮೇಲೆ ದಾಳಿ ಮಾಡಿದೆ ಇರಾನ್ ಸೇನೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗುಡುಗಿದ್ದಾರೆ