ಹೊನ್ನೂರು ದುಗ್ಗಹಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ತಿಗೆ ಗ್ರಾಮಸ್ಥರ ಅಗ್ರಹ.
ಯಳಂದೂರು: ಸಮೀಪದ ಹೊನ್ನೂರು ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಪಕ್ಕದಲಿರುವ ಇರುವ ಸೇತುವೆ ಹಲವಾರು ವರ್ಷಗಳಿಂದ ದುರಸ್ಥಿಯಾಗದೆ ಇರುವುದಕ್ಕೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿ ವರ್ಗ ಇದುವರೆಗೂ ಒಮ್ಮೆಯೂ ತಿರುಗಿ ನೋಡಿಲ್ಲ ಈ ಸೇತುವೆ ಹೊನ್ನೂರಿನಿಂದ ದುಗ್ಗಹಟ್ಟಿ, ಅಂಬಳೆ ಮತ್ತು ಯಳಂದೂರುಗೆ ಹಾದು ಹೋಗುವ ರಸ್ತೆಯಾಗಿದ್ದು ರೈತರು ಹಾಗೂ ಸಾರ್ವಜನಿಕರು ತಿರುಗಾಡುವ ಪ್ರಮುಖ ಸೇತುವೆಯಾಗಿರುತ್ತದೆ.
ಈ ಭಾಗದಲ್ಲಿ ಹೊಡಾಡುವ ರೈತರಿಗೆ ತುಂಬಾ ವೇದನೆ ಪಡುತ್ತಿದ್ದಾರೆ, ರೈತರು ಬೆಳೆದ ಬೆಳೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೆಳೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಿಸುವ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ ಎಂದರೆ ತಪ್ಪಾಗಲಾರದು.
ಕೂಡಲೇ ಸಂಬಂಧ ಪಟ್ಟ ಸ್ಥಳೀಯಚುನಾಯಿತ ಪ್ರತಿನಿಧಿಗಳಾಗಲಿ , ಶಾಸಕರಾಗಲಿ ದುರಸ್ಥಿಗೊಂಡಿರುವ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಅಲ್ಲಿನ ಗ್ರಾಮಸ್ಥರಾದ ಹೊನ್ನೂರು ನಿಂಗರಾಜು ಎಂ,ಪಟೇಲ್ ಅರ್ಜುನ್, ಕೊಂಗಪ್ಪನ ನಾಗಣ್ಣ, ದುಗ್ಗಹಟ್ಟಿ ಸಿದ್ದರಾಜು ಮತ್ತು ಕಪ್ಪಣ್ಣ ಅಗ್ರಹಿಸಿದ್ದಾರೆ.
ವರದಿ:ಹೊನ್ನೂರು ಪರಮೇಶ್