logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಪ್ರಶಸ್ತಿಗಳು ದಕ್ಕುವುದು ಸಿದ್ಧಾಂತಕ್ಕಲ್ಲ ಸಾಧನೆಗೆ ಎಂಬ ಅರಿವಿರಬೇಕು.

ಈ ಎಡಪಂಥಿಯ ಸಿದ್ಧಾಂತದ ಚಿಂತಕರಾದ ಜಿ. ರಾಮಕೃಷ್ಣ ಅವರು ಸುದ್ದಿಯಲ್ಲಿದ್ದಾರೆ. ಅವರು ಪ್ರಶಸ್ತಿ ಪಡೆದು ಸುದ್ದಿಯಲ್ಲಿದ್ದದ್ದಕ್ಕಿಂತ ಪ್ರಶಸ್ತಿಯನ್ನು ರಾಜ್ಯಪಾಲ ರಿಂದ ಸ್ವೀಕರಿಸುವುದಿಲ್ಲ ಎಂದೇ ಅತಿಹೆಚ್ಚು ಸುದ್ದಿಯಲ್ಲಿದಾರೆ ಎಂದರೆ ತಪ್ಪಾಗಲಾರದು.

ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ರಾಜ್ಯದ ರಾಜ್ಯಪಾಲರಿಂದ ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎನ್ನುವುದು ಸಂವಿಧಾನಕ್ಕೆ ಹಾಗೂ ಅಂಭೆಡ್ಕರ ಅವರಿಗೆ ತೋರುವ ಅಗೌರವ ಎನ್ನುವುದು ನನ್ನ ಅಭಿಪ್ರಾಯ.ಈ ಕಾಂಗ್ರೇಸ್ ಸರ್ಕಾರ ಹುಡುಕಾಡಿ ಹಿಂದೂಗಳ ಭಾವನೆಗಳಿಗೆ ಘಾಸಿ ಮಾಡುವವರ ಮತ್ತು ಎಡ ಪಂಥಿಯ ಸಿದ್ಧಾಂತಿಗಳಿಗೆ ಹಾಗೂ ಮೋದಿಯನ್ನು ಬಿಜೆಪಿ ವಿರೋಧಿಸುವವರಿಗೆ ಪ್ರಶಸ್ತಿಯನ್ನು ಘೋಷಿಸುವುದು ವಾಡಿಕೆ. ಪ್ರಗತಿಪರ ಎನಿಸಿಕೊಂಡವರು ನಾಡೋಜ ಪ್ರಶಸ್ತಿ ಘೋಷಣೆಯಾದಾಗಲೇ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಬೇಕಿತ್ತು ಆದರೆ ಸುಮ್ಮನೆ ಪ್ರಚಾರಕ್ಕಾಗಿ ಹಾಗೂ ತಮ್ಮ ಸಿದ್ಧಾಂತಿಗಳನ್ನು ಮೆಚ್ಚಿಸುವುದಕ್ಕೆ ನಾನು ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ತಮ್ಮ ಬಹು ವಿದ್ವತ್ತನ್ನು ಮೆರೆದಿದ್ದಾರೆ ಎಂದರೆ ತಪ್ಪಾಗಲಾರದು.ಸಾಮಾನ್ಯ ಜನರು ಹೀಗೆ ಮಾತನಾಡುತ್ತಿದ್ದಾರೆ. ಸದಾ ಸಂವಿಧಾನ, ಪ್ರಜಾಪ್ರಭುತ್ವ, ಅಂಭೆಡ್ಕರ ಎಂದು ನಾಟಕೀಯ ರೀತಿಯಲ್ಲಿ ಬಡಬಡಿಸುವ ಇವರು ಸಾಂವಿಧಾನಿಕ ಹುದ್ದೆಯನ್ನು ಸಿದ್ಧಾಂತದ ದೃಷ್ಟಿಯಿಂದ ನೋಡುವುದು ಆ ಹುದ್ದೆ ಗೆ ತೋರುವ ಅಗೌರವವಾಗುತ್ತದೆ ಹೊರತು ಆ ಹುದ್ದೆ ಅಲಂಕರಿಸಿದ ವ್ಯಕ್ತಿಗಲ್ಲ ಎನ್ನುವ ಸೂಕ್ಷ್ಮ ಕೂಡ ತಿಳಿಯದಾಯಿತೇನೋ. ಮೊದಲೇ ಬೇಡವೆಂದಿದ್ದರೆ ಆ ಪ್ರಶಸ್ತಿ ಇನ್ನೊಬ್ಬ ಅರ್ಹ ಸಾಧಕರಿಗೆ ಸಲ್ಲುತ್ತಿತ್ತು. ಪ್ರಸ್ತುತ ಈ ಪ್ರಶಸ್ತಿಗಳು ಘೋಷಣೆ ಯಾಗುವುದೇ ರಾಜಕೀಯ ಕಾರಣಗಳಿಗೆ ಅದು ತಾವು ಒಪ್ಪುವ ಮೆಚ್ಚುವ ಎಡಪಂಥಿಯ ಸಿದ್ಧಾಂತವಿರುವ ಕೇರಳದಲ್ಲಿಯೂ ಕೂಡ ಅಲ್ಲವೇ.

ಅಲ್ಲಾ ಇವರಿಗೆ ಮೊದಲೇ ಎಲ್ಲಾ ಗೊತ್ತಿತ್ತು ತಾನೇ. ರಾಜ್ಯಪಾಲರೇ ಕನ್ನಡ ವಿಶ್ವವಿದ್ಯಾಲಯದ ಕುಲಪತಿ. "ರಾಜ್ಯಪಾಲರ ಕೈಯಿಂದ ನಾಡೋಜ ಪ್ರಶಸ್ತಿ ಸ್ವೀಕರಿಸಲಾರೆ" ಎಂದರೆ ಅದು ಪ್ರಶಸ್ತಿಯನ್ನು ತಿರಸ್ಕರಿಸಿದಂತೆಯೇ ಹೊರತು "ಪ್ರಶಸ್ತಿ ಪಡೆದುಕೊಳ್ಳುತ್ತೇನೆ. ಆದರೆ ರಾಜ್ಯಪಾಲರ ಕೈಯಿಂದ ಪ್ರಶಸ್ತಿ ಪತ್ರ ಸ್ವೀಕರಿಸಲಾರೆ" ಎನ್ನುವದು ಚಿಲ್ಲರೆ ಗಿಮಿಕ್ ಎನ್ನುವುದು ಹಾಲು ಕುಡಿಯುವ ಸಣ್ಣ ಕುಸಿಗೂ ಗೊತ್ತಾಗುತ್ತದೆ. ಇನ್ನಾದರೂ ಇಂತಹ ಪ್ರಚಾರ ಪ್ರಿಯರಿಗೆ ಪ್ರಶಸ್ತಿ ಕೊಡದಿರುವುದೇ ಒಳ್ಳೆಯದು.

0
0 views

Comment