logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕೊಲೆ ಪ್ರಕರಣದ ಮೂರು ಆರೋಪಿತರಿಗೆ ಜೀವಾವಧಿ ಶಿಕ್ಷೆ

ಚಿಕ್ಕಬಳ್ಳಾಪುರ:-ದಿನಾಂಕ:-ದಿನಾಂಕ:06/12/2023 ರಂದು ರಾತ್ರಿ 8-00 ಗಂಟೆಯ ನಂತರ ದಿನಾಂಕ:7/12/2023 ರಂದು ಬೆಳಗಿನ ಜಾವದ ಮದ್ಯದ ಸಮಯದಲ್ಲಿ ಯಾರೋ ದುರಾತ್ಮರು ಉದ್ದೇಶ ಪೂರ್ವಕವಾಗಿ ನನ್ನ ಮಗನಾದ ಗಜೇಂದ್ರ ರವರ ತಲೆಗೆ, ಎಡಕಿವಿಗೆ ಹಾಗೂ ಮೈಮೇಲೆ ಯಾವುದೋ ಮಾರಕ ಆಯುಧಗಳಿಂದ ಹೊಡೆದು ಕೊಲೆ ಮಾಡಿ ಮೃತ ದೇಹವನ್ನು ಸ್ಥಳದಲ್ಲಿಯೇ ಬಿಟ್ಟಿ ಹೋಗಿರುತ್ತಾರೆ. ನನ್ನ ಮಗನನ್ನು ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ಯಲ್ಲಂಪಲ್ಲಿ ಗ್ರಾಮದ ಆರೋಪಿಗಳಾದ ಎ1 ಸುರೇಂದ್ರ ಬಾಬು ಬಿನ್ ಸುಬ್ಬರಾಮಶೆಟ್ಟಿ, 39 ವರ್ಷ.ಯಲ್ಲಂಪಲ್ಲಿ ಗ್ರಾಮ. ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎ2 ಶ್ರೀನಾಥ ಬಿನ್ ಲೇಟ್ ನಾಗರಾಜಪ್ಪ, 36 ವರ್ಷ. ಯಲ್ಲಂಪಲ್ಲಿ ಗ್ರಾಮ. ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎ3 ವೆಂಕಟೇಶ್ ಎನ್ ಬಿನ್ ನಂಜುಂಡಪ್ಪ, 22 ವರ್ಷ. ಯಲ್ಲಂಪಲ್ಲಿ ಗ್ರಾಮ. ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರುಗಳನ್ನು ದಸ್ತಗಿರಿ ಮಾಡಿ ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆ & ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಕ್ಕಬಳ್ಳಾಪುರ ಉಪ ವಿಭಾಗ ರವರ ಸೂಚನೆಯಂತೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇದ್ದರೂ ಸಹ ಸಾಂದರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳಿಂದ ಬಾಗೇಪಲ್ಲಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಪ್ರಶಾಂತ್ ಆರ್ ವರ್ಣಿ ರವರು ಕ್ರಮಬದ್ಧವಾಗಿ ತನಿಖೆಯನ್ನು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ಘನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ ನ್ಯಾಯಾಧೀಶರಾದ ಶ್ರೀ ಎಸ್. ಶ್ರೀಧರ ರವರು ಆರೋಪಿಗಳಾದ ಎ1 ಸುರೇಂದ್ರ ಎ2 ಶ್ರೀನಾಥ ಎಂ ವೆಂಕಟೇಶ್ ಎನ್ ರವರಿಗೆ ಜೀವಾವಧಿ ಕಾರಾಗೃಹ ಸಜೆಯನ್ನು ಮತ್ತು 25.000/- ರೂ ದಂಡವನ್ನು ವಿಧಿಸಿ ದಿನಾಂಕ:-19.02.2026 ರಂದು ತೀರ್ಪುನ್ನು ಪ್ರಕಟಿಸಿರುತ್ತಾರೆ.

ಸದರಿ ಪ್ರಕರಣದಲ್ಲಿ ಶ್ರೀ ಪ್ರಶಾಂತ್ ಆರ್ ವರ್ಣಿ, ಪೊಲೀಸ್ ಇನ್ಸ್‌ಪೆಕ್ಟರ್, ತನಿಖಾಧಿಕಾರಿಗಳು, ಶ್ರೀ. ಚಂದ್ರಶೇಕರ್ ಎಎಸ್‌ಐ, ಬಾಗೇಪಲ್ಲಿ ಪೊಲೀಸ್ ಠಾಣೆ, ಘನ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಶ್ರೀ ಮಂಜುನಾಥ, ಸಿಪಿಸಿ-577, ಬಾಗೇಪಲ್ಲಿ ಪೊಲೀಸ್ ಠಾಣೆ ರವರುಗಳು ತನಿಖೆಗೆ ಸಹಾಯ ಮಾಡಿದ್ದು, ಸರ್ಕಾರದ ಪರವಾಗಿ ಶ್ರೀಮತಿ ಅರುಣಾಕ್ಷಿ ಬಿ. . ಹಿರಿಯ ಸರ್ಕಾರಿ ಅಭಿಯೋಜಕರು, ಜಿಲ್ಲಾ & ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ

6
222 views

Comment