logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹೋರಾಟದ ಶಕ್ತಿ ಇನ್ನಷ್ಟು ಬಲಪಡಲಿ, ನ್ಯಾಯಯುತ ಹೋರಾಟಕ್ಕೆ ಜಯವಾಗಲಿ.

UGC ಕಾನೂನು ವಿರುದ್ಧ ಉತ್ತರ ಭಾರತದಲ್ಲಿ ವ್ಯಾಪಾಕವಾಗಿ ಪ್ರತಿರೋಧ ವ್ಯಕ್ತವಾಗುತ್ತಿದೆ.ಇದರ ತಿರ್ವತೆ ದಕ್ಷಿಣಕ್ಕೂ ಹಬ್ಬಲಿ. ನಿಜಕ್ಕೂ ಈ ಕಾನೂನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ಕಾನೂನಿನ ಗಧಾಪ್ರಹಾರ ಮಾಡುವ ಹುನ್ನಾರ. ಈಗಲಾದರೂ ಸಾಮಾನ್ಯ ವರ್ಗದವರು ಎಚ್ಛೆತ್ತು ಕೊಂಡಿದ್ದು ಒಳ್ಳೆಯದೇ ಆಯಿತು.
ಈಗ ಮಹಿಳಾ ಸುರಕ್ಷಾ ಕಾನೂನುಗಳು ಹಾಗೂ ಅಟ್ರಾಸಿಟಿ ಕಾನೂನಿನ ಸದುಪಯೋಗಕ್ಕಿಂತ ದುರುಪಯೋಗವೆ ಜಾಸ್ತಿ ಆಗುತ್ತಿದೆ ಭಾರತದ ಎಲ್ಲಾ ನ್ಯಾಯಾಲಯಗಳು ಹಾಗೂ ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ ಹೀಗಿದ್ದು ಕೂಡ ಯಾವುದೇ ರೀತಿ ಚರ್ಚೆ ಮಾಡದೆ ಮೋದಿ ಸರ್ಕಾರ ಈ ರೀತಿಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವುದು ನಿಜಕ್ಕೂ ಅಕ್ಷಮ್ಯ. ಈ ಕಾನೂನಿನಿಂದ ಬಹುತೇಕ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ಪಡೆಯಲು ಬರುವುದಕ್ಕೆ ಹಿಂದೇಟು ಹಾಕಬಹುದು.ಸರ್ಕಾರ ಜಾತಿಯಾಧಾರಿತ ಸವಲತ್ತುಗಳನ್ನು ನೀಡುತ್ತಿರುವುದರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ ಸ್ವಾತಂತ್ರ್ಯ ನಂತರ ಮೂರು ತಲೆಮಾರು ಇದನ್ನೇ ಅನುಭವಿಸುತ್ತಿದ್ದಾರೆ. ಸಾಮಾನ್ಯ ವರ್ಗದ ಬಡವ ತಂದೆ ತಾಯಿಯರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡುತ್ತಿದ್ದಾರೆ ಅವರ ಗೋಳು ನೋಡಿದರೆ ಎಂತಹ ಕಲ್ಲು ಮನಸ್ಸು ಕೂಡ ಮಂಜಿನಂತೆ ಕರುಗುತ್ತದೆ ಇಂತಹ ಪರಿಸ್ಥಿತಿ ಗಳನ್ನು ಕಂಡರೂ ಮೋದಿ ಸರ್ಕಾರ ಈ ಕಾನೂನು ತರುತ್ತಿರುವದನ್ನು ವಿರೋಧಿ ಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಈಗ ಮಹಿಳಾ ಸುರಕ್ಷಾ ಕಾನೂನುಗಳು ಹಾಗೂ ಅಟ್ರಾಸಿಟಿ ಕಾನೂನಿನ ಸದುಪಯೋಗಕ್ಕಿಂತ ದುರುಪಯೋಗವೆ ಜಾಸ್ತಿ ಆಗುತ್ತಿದೆ ಭಾರತದ ಎಲ್ಲಾ ನ್ಯಾಯಾಲಯಗಳು ಹಾಗೂ ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ ಹೀಗಿದ್ದು ಕೂಡ ಯಾವುದೇ ರೀತಿ ಚರ್ಚೆ ಮಾಡದೆ ಮೋದಿ ಸರ್ಕಾರ ಈ ರೀತಿಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವುದು ನಿಜಕ್ಕೂ ಅಕ್ಷಮ್ಯ. ಈ ಕಾನೂನಿನಿಂದ ಬಹುತೇಕ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ಪಡೆಯಲು ಬರುವುದಕ್ಕೆ ಹಿಂದೇಟು ಹಾಕಬಹುದು.ಸರ್ಕಾರ ಜಾತಿಯಾಧಾರಿತ ಸಾವಳತ್ತಗಳನ್ನು ನೀಡುತ್ತಿರುವುದರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ ಸ್ವಾತಂತ್ರ್ಯ ನಂತರ ಮೂರು ತಲೆಮಾರು ಇದನ್ನೇ ಅನುಭವಿಸುತ್ತಿದ್ದಾರೆ. ಬಡವ ತಂದೆ ತಾಯಿಯರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡುತ್ತಿದ್ದಾರೆ ಅವರ ಗೋಳು ನೋಡಿದರೆ ಎಂತಹ ಕಲ್ಲು ಮನಸ್ಸು ಕೂಡ ಮಂಜಿನಂತೆ ಕರುಗುತ್ತದೆ ಇಂತಹ ಪರಿಸ್ಥಿತಿ ಗಳನ್ನು ಕಂಡರೂ ಮೋದಿ ಸರ್ಕಾರ ಈ ಕಾನೂನು ತರುತ್ತಿರುವದನ್ನು ವಿರೋಧಿ ಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಮೋದಿ ಮೇಲೆ ಇಟ್ಟ ನಂಬಿಕೆಗೆ ಇಂತಹ ಕಾನೂನು ತರುವುದರ ಮೂಲಕ ದ್ರೋಹ ಬಗೆಯುತ್ತಿದ್ದಾರೆ ಎನಿಸುತ್ತಿದೆ. ದಬ್ಬಾಳಿಕೆ, ಅಸಮಾನತೆ, ದುರುಪಯೋಗ ಪಡಿಸಿಕೊಳ್ಳುವ ಈ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ಸಾಮಾನ್ಯ ವರ್ಗದ ಜನರ ವಿಶ್ವಾಸ ಕಕೇದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ಎಚ್ಚೆತ್ತು ಕೊಂಡರೆ ಒಳ್ಳೆಯದು.

ಸತ್ಯದ, ನ್ಯಾಯ, ಪ್ರಾಮಾಣಿಕ ಹೋರಾಟಕ್ಕೆ ಜಯವಾಗಲಿ. ಭಾರತದ ಸಂವಿಧಾನ ಹಾಗೂ ಅಂಭೆಡ್ಕರ್ ಮೂಲ ಆಶಯವೇ ಭಾರತೀಯರೆಲ್ಲರೂ ಸಮಾನವಾಗಿ ಸಾಮರಸ್ಯದಿಂದ ಬಾಳಬೇಕು ಎನ್ನುವುದು. ಕೆಲವು ಸ್ವಾರ್ಥಿ ರಾಜಕಾರಣಿಗಳು ತಮ್ಮ ಸ್ವಾರ್ಥ ಅಧಿಕಾರ ತೆವಲಿಗೆ ಹಪಾಹಾಪಿಗೆ ಅಂಭೆಡ್ಕರ್ ಕನಸಿಗೆ ಕೊಳ್ಳಿ ಇಡುತ್ತಿದ್ದರು, ಜಾತಿ ಆಧಾರಿತ ಮೀಸಲಾತಿಯನ್ನು ಈಗಾಗಲೇ ಮೂರು ತಲೆಮಾರು ನೀಡಿದೆ ಇದರಿಂದ ಸಾಮಾಜಿಕ ಅಸಮಾನತೆ ದೂರಾಗಿದೆ, ಮುಂದೆಯಾದರು ಆರ್ಥಿಕವಾಗಿ ಯಾರು ಬಡವರು ಅವರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು.

ಅಂಭೆಡ್ಕರ್ ಆಶಯ ಕನಸು ಈಡೇರಿಸುವಲ್ಲಿ ಸಾಮಾನ್ಯ ವರ್ಗದವರ ದಿಟ್ಟ ಹೆಜ್ಜೆಗೆ ಜಯವಾಗಲಿ. ಅಂಭೆಡ್ಕರ್ ಒಂದು ಜಾತಿಯ ನಾಯಕರಲ್ಲ ಭಾರತದ ನಾಯಕರು.
UGC ಹೋರಾಟ ದಲಿತರ ಹಾಗೂ ಮೀಸಲಾತಿಯ ವಿರುದ್ಧದ ಹೋರಾಟವಲ್ಲ ನಮ್ಮ ಹಕ್ಕಿಗಾಗಿ ಹೋರಾಟ

1
136 views

Comment