logo

ಸಮಾಜ ಸೇವಕರಾದ ಬೈರೇಗೌಡರಿಂದ ಉಚಿತ ಕಟ್ಟಡ ನಿರ್ಮಾಣ ಸಾಮಗ್ರಿಗಳ ವಿತರಣೆ

ಲೀಡ್ ಮಾಡಬಹುದು ಸರ್...

೧೦ ಸಾವಿರ ಮಂದಿಗೆ ಉಚಿತ ಸೂರುಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಚಿಕ್ಕಬಳ್ಳಾಪುರ : ಸ್ವಾತಂತ್ರö್ಯ ಬಂದು ೭೮ ವರ್ಷ ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸೂರಿಲ್ಲದವರ ಸಂಖ್ಯೆ ಹೇರಳವಾಗಿದೆ. ಇದನ್ನು ಮನಗಂಡ ಕರ್ನಾಟಕ ಮಾನವ ಹಕ್ಕುಗಳ ಕಮಿಟಿ ಜಿಲ್ಲೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಸೂರಿಲ್ಲದ ಮಂದಿಗೆ ಸೂರು ಕಲ್ಪಿಸುವ ಬೃಹತ್ ಸಂಕಲ್ಪಕ್ಕೆ ಸಮಾಜದ ಸಹಕಾರವಿರಲಿ ಎಂದು ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಬೈರೇಗೌಡ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಅಬ್ಲೂಡು ಗ್ರಾಮದ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ ಮನೆ ನಿರ್ಮಾಣದ ಪರಿಕರಗಳ ಉಚಿತ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ಸಂದೇಶ ಸಾಕಾರ!!
ಅವರಿವರೆನ್ನದೆ ಮನುಷ್ಯ ಮನುಷ್ಯರಿಗೆ ನೆರವಾಗುವುದೇ ರಾಷ್ಟçಕವಿ ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಸಂದೇಶವಾಗಿದೆ. ಇದನ್ನು ಅರ್ಥ ಅರಿತಿರುವ ನಾನು ಮತ್ತು ನಮ್ಮ ಸಮಿತಿ ಜಿಲ್ಲೆಯ ೮ ತಾಲೂಕುಗಳಲ್ಲಿ ಸಂಚರಿಸಿ ಇಂದಿಗೂ ಗುಡಿಸಿಲುಗಳಲ್ಲಿ,ಟೆಂಟುಗಳಲ್ಲಿ, ತಡಿಕೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದು ವಾಸ ಮಾಡುತ್ತಿರುವ ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದೇವೆ.ಈ ಸೇವೆಯನ್ನು ಸ್ವಂತ ಖರ್ಚಿನಿಂದ ಮಾಡುವ ಸಂಕಲ್ಪ ತೊಡಲಾಗಿದ್ದು ಸಮಾಜದ ಸಹಾಯವೂ ಜತೆಗೂಡಿದರೆ ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡಬಹುದು ಎಂದರು.

ಮಾದರಿಯಾಗಲಿ

ನಮ್ಮ ಸಂಸ್ಥೆಯ ಪರೋಪಕಾರದ ಈ ಯೋಜನೆಯ ಅವಧಿ ೧೦ ವರ್ಷಗಳಾಗಿದ್ದು ಹಂತಹAತವಾಗಿ ಬಡವರಿಗೆ ಆಸರೆಯಾಗುವ ಕೈಂಕರ್ಯವಿದೆ.ಗAಡ ಹೆಂಡತಿ ಇರುವ ಒಂದು ಕುಟುಂಬಕ್ಕೆ ೬೦೦ ಇಟ್ಟಿಗೆ, ೨೫ ಮೂಟೆ ಸಿಮೆಂಟ್,೧ ಕಿಟಕಿ, ೧ ಬಾಗಿಲು, ಛಾವಣಿಗೆ ತಗಡಿನ ಶೀಟುಗಳನ್ನು ಉಚಿತವಾಗಿ ನೀಡುತ್ತಿದ್ದೇವೆ.ಹಾಗೆಯೇ ತಂದೆತಾಯಿ ಅತ್ತೆ ಮಾವ ಹೀಗೆ ಇದ್ದಲ್ಲಿ ೮೦೦ ಇಟ್ಟಿಗೆ ಜತೆಗೆ ಕಿಟಕಿ ಬಾಗಿಲಿ ಸಿಮೆಂಟ್, ಒಂದು ವೇಳೆ ಅಂಗವಿಕಲರಿದ್ದಲ್ಲಿ ೧ ಸಾವಿರ ಇಟ್ಟಿಗೆ ಸಹಿತ ಎಲ್ಲಾ ಪರಿಕರ ನೀಡಲಾಗುವುದು. ಒಟ್ಟಾರೆ ಮನುಷ್ಯರಾದವರಿಗೆ ತಲೆಮೇಲೆ ಸ್ವಂತ ಸೂರಿದ್ದಲ್ಲಿ ಹೇಗೋ ಬದುಕು ಸಾಗಿಸಬಹುದು ಎಂದು ಭಾವಿಸಿ ಈ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಯಾರಿಗೆಲ್ಲಾ ಈ ಸೌಲಭ್ಯ??

ಮಾನವ ಹಕ್ಕುಗಳ ಕಮಿಟಿ ೪ ಹಂತಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಿದ್ದು ಅದರಂತೆ ಯಾವುದೇ ಸಮುದಾಯದವರಿರಲಿ ಕಡುಬಡವರಾಗಿರಬೇಕು. ಗುಡಿಸಲಿನಲ್ಲಿ ವಾಸಿಸುವವರಾಗಿರಬೇಕು. ೧ ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು. ಫಲಾನುಭವಿಯ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುತ್ತಿರಬೇಕು. ನೀರಾವರಿ ಸೌಲಭ್ಯ ವಂಚಿತರಾಗಿರಬೇಕು. ದ್ವಿಚಕ್ರವಾಹನ ಬಿಟ್ಟು ಬೇರೆ ಯಾವುದೇ ವಾಹನ ಹೊಂದಿರಬಾರದು.ಅAತಹವರಿಗೆ ಉಚಿತ ಸೂರು ಕಲ್ಪಿಸಲು ಆಧ್ಯತೆ ನೀಡಲಾಗುವುದು.

ಲಾಭದ ಹಣದಲ್ಲಿ ಸೇವೆ??

ಮಾನವ ಹಕ್ಕುಗಳ ಕಮಿಟಿ ವತಿಯಿಂದ ಹಾಲೋಬ್ರಿಕ್ಸ್ ಇಟ್ಟಿಗೆ ಫ್ಯಾಕ್ಟರಿ ಇಟ್ಟಿದ್ದು ಇದರಲ್ಲಿ ಬರುವ ಲಾಭಾಂಶದಲ್ಲಿ ಬಡ ನಿರ್ಗತಿಕರಿಗೆ ಸೂರು ಕಲ್ಪಿಸುವ ಯೋಜನೆ ಮುಂದುವರೆಸಲಾಗುವುದು.ಸಮಾಜ ಸೇವೆ ಮಾಡಲು ರಾಜಕೀಯ ಅಧಿಕಾರವೇ ಇರಬೇಕು ಎಂದೇನಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು.ನೊಂದವರ ಕಣ್ಣೀರು ಒರೆಸುವ ಪ್ರತಿಯೊಂದು ಕೆಲಸವೂ ಸಮಾಜಸೇವೆಯೇ ಆಗಿದೆ.ಯಾರು ಬೇಕಾದರೂ ಈಕ್ಷೇತ್ರವನ್ನು ಪ್ರವೇಶಿಸಬಹುದು. ಮೊದಲಿಗೆ ಶಿಡ್ಲಘಟ್ಟ ಕ್ಷೇತ್ರದ ಚಿಕಲನೇರ್ಪು ಭಾಗದಲ್ಲಿ ಮನೆ ನಿರ್ಮಾಣ ಮಾಡಲು ಪರಿಕರ ವಿತರಣೆ ಆಗಲಿದೆ.ನಂತರ ಆಂದ್ರದ ಗಡಿಯನ್ನು ಹಂಚಿಕೊAಡಿರುವ ಚಿಂತಾಮಣಿ,ಬಾಗೇಪಲ್ಲಿ, ಗುಡಿಬಂಡೆಗಳಲ್ಲಿ ಮುಂದುವರೆಸಲಾಗುವುದು ಎಂದರು.

೧೫*೨೦ ಅಡಿಗೆ ವಿತರಣೆ
ನಮ್ಮ ಯೋಜನೆಯಲ್ಲಿ ೧೫*೨೧ ಅಡಿ ಪಾಯ ಹಾಕಿಕೊಂಡವರಿಗೆ ಸಂಪೂರ್ಣ ಮನೆಪೂ¨ರ್ಣವಾಗುವಷ್ಟು ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಇದನ್ನು ಮೀರಿ ಪಾಯ ಹಾಕಿದ್ದರೆ ಅದರ ಹೆಚ್ಚುವರಿ ಖರ್ಚನ್ನು ಅವರೇ ಭರಿಸಬೇಕಿದೆ.ಉದ್ದೇಶ ಸರಳವಾಗಿ ಬದುಕಲು ಬೇಕಾದ ಮನೆ ನಿರ್ಮಾಣಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ.ಇದನ್ನು ಮೀರಿ ಪಾಯ ಹಾಕಿದ್ದರೆ ಈ ಅಳತೆಯಲ್ಲಿ ಎಷ್ಟಾಗುತ್ತೋ ಅಷ್ಟನ್ನು ನೀಡಲಾಗುವುದು. ದುಬಾರಿ ಮನೆಗಳಿಗೆ ನೆರವಾಗಲು ಆಗದು ಎಂಬುದನ್ನು ಸ್ಪಷ್ಟಪಡಿಸಿದರು.

ಅಧಿಕಾರಿಗಳ ಸಹಕಾರವಿರಲಿ
ಬಡವರ ಸೇವೆ ಮಾಡಲು ಮುಂದಾಗಿರುವ ಕಾರಣ ಜಿಲ್ಲೆಯ ಆರ್‌ಟಿಒ ಪೊಲೀಸ್ ಇಲಾಖೆ ಅಧಿಕಾರಿಗಳು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನಾವು ಟಿಪ್ಪರ್ ಮೂಲಕ ಮನೆ ನಿರ್ಮಾಣದ ಸಾಮಗ್ರಿಗಳನ್ನು ಸಾಗಿಸುವ ಕಾರಣ ವಿನಾಕಾರಣ ನಮ್ಮ ವಾಹನಕ್ಕೆ ತಡೆಯೊಡ್ಡುವುದು ಬೇಡ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಒ ನರೇಂದ್ರ ಮಾತನಾಡಿ ಸರ್ಕಾರ ಮತ್ತು ಸಮಾಜ ಒಟ್ಟಿಗೆ ಸಾಗಿದರೆ ನಾಗರೀಕ ಸಮಾಜದ ಭವಿಷ್ಯ ಉತ್ತಮವಾಗಿರಲಿದೆ.ಬಡವರಿಗೆ ಸೂರು ಕಲ್ಪಿಸಲು ಮುಂದಾಗುವ ದಾನಿಗಳ ಸಂಖ್ಯೆ ಮತ್ತು ಅವರ ಸಹಕಾರ ಜನತೆಗೆ ಹೆಚ್ಚು ಹೆಚ್ಚಾಗಿ ದೊರೆಯಲಿ, ಈ ಸೂರು ಕಲ್ಪಿಸುವ ಯೋಜನೆ ನಿರಾತಂಕವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವಿಸ್ಡಮ್ ನಾಗರಾಜ್ ಮಾತನಾಡಿ ಸೂರಿಲ್ಲದ ಮಂದಿಗೆ ಸೂರು ಕಟ್ಟಿಕೊಳ್ಳಲು ಉಚಿತ ಸಾಮಗ್ರಿಗಳ ವಿತರಣೆ ಮಾಡುವ ಕೆಲಸ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಸರ್ಕಾರ ಮಾಡಬೇಕಾದ ಕೆಲಸವನ್ನು ಬೈರೇಗೌಡ ಮಾಡುತ್ತಿದ್ದಾರೆ.ಇದೊಂದು ಮಾದರಿ ಕಾರ್ಯಕ್ರಮ.೧೦ ಸಾವಿರ ಮನೆ ನಿರ್ಮಾಣಕ್ಕೆ ಸಂಕಲ್ಪ ಹೊಂದಿದ್ದಾರೆ.ಇಟ್ಟಿಗೆ ಕಿಟಕಿ ಬಾಗಿಲು ಎಂ.ಸ್ಯಾAಡ್ ಶೀಟ್ ಕೊಡುತ್ತಿದ್ದಾರೆ.ಗುಡಿಸಲು ಮುಕ್ತ ತಾಲೂಕು ಮಾಡಲಿ,ಇದರ ಪ್ರಯೋಜನ ಜನತೆಗೆ ಬಳಕೆಯಾಗಲಿ ಎಂದರು. ಬಳಸಿಕೊಳ್ಳಿ ಎಂದು ದೀಪು ಕರೆ ನೀಡಿದರು.

ರೈತಸಂಘದ ರವಿ ಪ್ರಕಾಶ್ ಮಾತನಾಡಿ ಭಾರತ ದೇಶದಲ್ಲಿಯೇ ವಿಶಿಷ್ಟ ಮಾದರಿ ಕಾರ್ಯಕ್ರಮ ಅಬ್ಲೂಡು ಗ್ರಾಮದಲ್ಲಿ ನಡೆಯುತ್ತಿದೆ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.ಇದರಂತೆ ಹಳ್ಳಿಗೊಂದು ಗ್ರಂಥಾಲಯ ಸ್ಥಾಪನೆ ಮಾಡಲು ಕೂಡ ಮುಂದಾಗಬೇಕು ಎಂದು ಸಲಹೆ ನೀಡಿದರು.ಪುಸ್ತಕದಿಂದ ಜ್ಞಾನ ಬಂದರೆ ಮೊಬೈಲ್ ನಿಂದ ದುರಭ್ಯಾಸ ಬೆಳೇಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ೧೦ ಮಂದಿಗೆ ಮನೆಕಟ್ಟಿಕೊಳ್ಳಲು ಬೇಕಾದ ಇಟ್ಟಿಗೆ, ಕಿಟಕಿ, ಬಾಗಿಲು, ಸಿಮೆಂಟ್ ಎಂ.ಸ್ಯಾಡ್, ಶೀಟ್‌ಗಳನ್ನು ಉಚಿತವಾಗಿ ವಿತರಿಸಿದರು.


ಈವೇಳೆ ರೈತ ಸಂಘದ ತಾದುರು ಮಂಜುನಾಥ್ ರವಿಪ್ರಕಾಶ್ ಕೋಟೆ ಚೆನ್ನೇಗೌಡ,ವಲಸೇನಹಳ್ಳಿ ನಾರಾಯಣಸ್ವಾಮಿ ,ಮರಗೆಲಸ ಸಂಘದ ಅಧ್ಯಕ್ಷ ಪ್ರದೀಪ್ ದೀಪು,ಈಶ್ವರ್‌ರೆಡ್ಡಿ, ಮತ್ತಿತರರು ಇದ್ದರು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಅಬ್ಲೂಡು ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮನೆ ನಿರ್ಮಾಣದ ಪರಿಕರಗಳ ಉಚಿತ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

2
950 views