logo

ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಗಗನ್ ಕುಟುಂಬಕ್ಕೆ ಮಾಜಿ ಶಾಸಕ ಎಲ್ ಎನ್ ನಾರಾಯಣಸ್ವಾಮಿ ಸಾಂತ್ವನ

ದೇವನಹಳ್ಳಿ: ಇತ್ತೀಚೆಗೆ ಅಪಘಾತದಲ್ಲಿ ದೇವನಾಯಕನಹಳ್ಳಿ ಯುವಕ ಗಗನ್ ಮೃತಪಟ್ಟ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಲ್.ಎನ್. ನಾರಾಯಣಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಕುಂಟುಂಬಸ್ಥರಿಗೆ ಸಾಂತ್ವನ ನೀಡುವುದರ ಮೂಲಕ ಆರ್ಥಿಕ ನೆರವು ನೀಡಿದರು.

ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದ ಸಾವನ್ನಪ್ಪಿದ್ದ ಗಗನ್ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಜಿ ಶಾಸಕ ಎಲ್ ಎನ್ ನಾರಾಯಣಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ.ಮಂಜುನಾಥ್ ಹಾಗೂ ಮುಖಂಡರು ಮಾಡಿದರು.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿ ಪೋಷಕರಿಗೆ ಸಾಂತ್ವನ ಹೇಳಿದರು. ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿದ್ದರು. ಅದರಂತೆ, ಮಾಜಿ ಶಾಸಕರು ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ಯುವ ಜೆಡಿಎಸ್ ಅಧ್ಯಕ್ಷರಾದ ಹೊಸಳ್ಳಿ ರವಿ, ತಾಲೂಕು ಸೊಸೈಟಿ ನಿರ್ದೇಶಕ ಎರ್ತಿಗಾನಹಳ್ಳಿ ಶಿವಣ್ಣ, ಮುಖಂಡರಾದ ಗಂಗಾಧರ್, ಕುಮಾರಸ್ವಾಮಿಯವರು ಶಿವರಾಜ್, ಮಂಡಿಬೆಲೆ ರಾಜಣ್ಣ, ಸಾದಹಳ್ಳಿ ಮಹೇಶ್, ವಕೀಲ ಶಿವಕುಮಾರ್, ಚಲವಾದಿ ಮಹಾಸಭಾಧ್ಯಕ್ಷ ನಾಗರಾಜ್, ಊರಿನ ಪ್ರಮುಖ ಮುಖಂಡರು ಇತರರು ಇದ್ದರು.

ವರದಿ: ಹೈದರ್ ಸಾಬ್

3
570 views