logo

ತಾರಕ್ಕ್ಕೇರಿದ ಖಂಡ್ರೆ ಖೂಬಾ ರಾಜಕೀಯ ಸಮರ

ಬೀದರ್ ಪಾಪುನಾಶ್ ಅಭಿವೃದ್ಧಿ ಬಗ್ಗೆ ಆರಂಭಗೊಂಡ ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯದ ರಾಜಕೀಯ ಕದನ ಮಿತಿಮೀರಿದ್ದು ಜನರಿಗೆ ಇದೊಂದು ನಗೆ ಪಾಠವಾಗಿದೆ. ಸಚಿವಈಶ್ವರ್ಖಂಡ್ರೆಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿಯ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ, ಖಂಡ್ರೆ ವಿರುದ್ಧ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಖೂಬಾರ್ಕರ್ಮಕ್ಕನುಗುಣವಾಗಿಮತದಾರರ ಆಶೀರ್ವಾದ ಸಿಗದೆ ಮೂಲೆ ಗುಂಪಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಂಡು ರೆಡ್ಡಿ ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರವಧಿಯಲ್ಲಿ ಇವರು ತಮ್ಮ ಸ್ವಂತ ಪಕ್ಷದ ನಾಯಕರ ವಿರುದ್ಧ ಸಮರಕ್ಕಿಳಿದು ತನ್ನ ಯೋಗ್ಯತೆ ಏನಿದೆ ಎಂಬುದು ಮತದಾರರಿಗೆ ಗೊತ್ತು ಮಾಡಿದ ಬೆನ್ನಲ್ಲೇ ಮತದಾರರು ಇವರಿಗೆ ರಾಜಕೀಯ ರಂಗದಿಂದ ನೇರವಾಗಿ ಮನೆಯ ಬಾಗಿಲು ತೋರಿಸಿದ್ದಾರೆ. ಈಗ ಇವರು ಖಂಡ್ರೆಯವರನ್ನು ಭಾಲ್ಕಿಯಲ್ಲಿ ಸೋಲಿಸುವ ಕನಸು ಕಾಣುತ್ತಿದ್ದಾರೆ. ಸೋಲು ಗೆಲುವು ಯಾವ ರಾಜಕಾರಣಿಗಳ ಕೈಯಲ್ಲಿಲ್ಲ. ಮತದಾರರು ಇದರ ನಿರ್ಣಾಯಕರು ಎಂದು ಗುಂಡು ರೆಡ್ಡಿ ನುಡಿದು ಖೂಬಾರವರಿಗೆ ಸೈಲೆಂಟಾಗಿ ಮನೆಯಲ್ಲಿ ತೆಪ್ಪಗೆ ಇರಲು ಸಲಹೆ ನೀಡಿದ್ದಾರೆ.

5
833 views