logo

1.20 ರೂ. ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಒಳಚರಂಡಿ ಕಾಮಗಾರಿಗೆ ಗ್ರೀನ್ ಸಿಗ್ನಲ್

ನ್ಯಾಷನಲ್ ಗ್ರೀನ್ ಟ್ರಿಬ್ಯೂನ್ ಲ್ ಅಡಿ ಸುಮಾರು 40 ರೂ.ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ, ರಸ್ತೆ ಸುಧಾರಣೆ, ರಸ್ತೆ ಗುಂಡಿ ಮುಚ್ಚುವ ಕಾರ್ಯ, ಜಿಲ್ಲಾಧಿಕಾರಿ ಬಿ ಫೌಝಿಯಾ ತರನ್ನುಮ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಸಂಚಾರಿ ಡಿವೈಎಸ್ಪಿ ಸುಧಾ ಆದಿ ಮತ್ತು ಸಿಪಿಐ ಶಕೀಲ್ ಅಂಗಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಕಾರ್ಯ ನಡೆಸಿದರು. ಮೋಹನ್ ಲಾಡ್ಜಿನ ಹಳೆ ಜೇವರ್ಗಿ ರಸ್ತೆಯಿಂದ ರಾಮ್ ಮಂದಿರ್ ವೃತ್ತದ ವರೆಗೆ ಏನ್ ಸಿ ಪಿ ಸಿ ಯೋಜನೆ ಅಡಿ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು.
ಖರ್ಗೆ ಪೆಟ್ರೋಲ್ ಪಂಪ್ ದಿಂದ ಅನ್ನಪೂರ್ಣ ಕ್ರಾಸ್ ವರೆಗೆ ಒಳಚರಂಡಿ ಕಾಮಗಾರಿ, ರಾಮಂದಿರ ಸರ್ಕಲ್ ದಿಂದ ಅಫ್ಜಲ್ಪುರ್ ಸರ್ಕಲ್, ಆಳಂದ್ ಹುಮ್ನಾಬಾದ್ ರಸ್ತೆ ವೃತ್ತ ಗಳನ್ನು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರ ಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಅಧಿಕಾರದ ಪ್ರಭಾರಿ ಆಯುಕ್ತ ಶಿವಕುಮಾರ್ ಪಾಟೀಲ್, ಎಇಇ ಶುಭಾಷ್ ನಾಯಕ್, ಸಂಪೂರ್ಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪಾಲಿಕೆ ಅಧೀಕ್ಷಕ ಅಭಿಯಂತರ ದತ್ತಾತ್ರೇಯ, ಇಡಿ ಪುರುಷೋತ್ತಮ್ ಇತರರು ಜೊತೆಗಿದ್ದರು.

3
492 views