ಅನಧಿಕೃತ ಫುಡ್ ಕೋರ್ಟ್
ತೆರವಿಗೆ ಮನವಿ
ಪ್ರಾದೇಶಿಕ ಆಯುಕ್ತರು ಯಾವುದೇ ಟೆಂಡರ್ ಪ್ರಕ್ರಿಯೆ ಅಥವಾ ಬಹಿರಂಗ ಪ್ರಕಟಣೆ ನೀಡದೆ ನೇರವಾಗಿ ಗುತ್ತಿಗೆ ಆಧಾರದ ಮೇಲೆ ಮಹಾನಗರ ಪಾಲಿಕೆ ಎದುರಿನ ಅಪ್ಪನಕೆರೆ ಜಾಗದಲ್ಲಿ ತಲೆಯೆತ್ತಿರುವ ಫುಟ್ ಕೋರ್ಟ್ ಎಂಬ ತಿಂಡಿ ತಿನಿಸುಗಳ ಹೋಟೆಲ್ ತೆರವುಗೊಳಿಸಬೇಕೆಂದು ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸಾಧ್ವಿ ಮತ್ತು ಜೈ ಕನ್ನಡಿಗರ ಸೇನೆ ಅಧ್ಯಕ್ಷ ಸಚಿನ್ ಫರ್ತಾಬಾದ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಾದೇಶಿಕ ಆಯುಕ್ತರನ್ನು ಸಂಪರ್ಕಿಸಿದಾಗ ಯಾವುದೇ ತರಹದ ಸಮರ್ಪಕ ಉತ್ತರ ನೀಡಲಿಲ್ಲ ವೆಂದ, ಅವರು ಹೋಟೆಲ್ ನಲ್ಲಿ ಶೌಚಗ್ರಹ ನಿರ್ಮಿಸಿದ್ದರಿಂದ ಮಲ-ಮೂತ್ರ ವಿಸರ್ಜನೆ ಮಾಡುತ್ತಿವುದರಿಂದ ನೇರವಾಗಿ ಅದು ಕೆರೆಯಲ್ಲಿ ವಿಲೀನವಾಗುವ ಸಾಧ್ಯತೆ ಇದೆ ಇದರಿಂದ ಪವಿತ್ರ ಕೆರೆ ಮಲಿನತೆಯಾಗುವ ಸಾಧ್ಯತೆ ಇರುವುದರಿಂದ ಇವುಗಳನ್ನು ಕೂಡಲೇ ತೆರವುಗೊಳಿಸಬೇಕು ಅಥವಾ ಇತರರಿಗೂ ಅಂಗಡಿ ಆರಂಭಿಸಲು ಅನುಮತಿ ನೀಡಬೇಕು ಎಂದವರು, ನಿರ್ಲಕ್ಷ ತಾಳಿಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯ ಎದರು ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ವ್ಯಕ್ತಪಡಿಸಿದರು. ಪೃಥ್ವಿ ರಾಜ್ ರಾಂಪುರ್ ಸಂದೀಪ್ ಭರಣಿ ಮಹೇಶ್ ಕೆಂಭಾವಿ ದತ್ತು ಭಾಸಗಿ ಮತ್ತಿತರರು ಉಪಸ್ಥಿತರಿದ್ದರು.