
ಬ್ರೋಕರ್‌ಗಳಿಗೆ ಕಡಿವಾಣ ಹಾಕುವುದು , ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಬಾರದೆಂಬ ಉದ್ದೇಶದಿಂದಲೇ ಆರಂಭಿಸಿದ ಕಾರ್ಯಕ್ರಮ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮವಾಗಿದೆ ಶಾಸಕ ಸುರೇಶ್ ಬಾಬು
ಬೇಸಿಗೆ ಯಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್‌ಗೆ ಹೆಚ್ಚಿನ ಅದ್ಯತೆ ನೀಡಿ – ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಿ - ಶಾಸಕ ಸಿ.ಬಿ.ಸುರೇಶ್‌ಬಾಬು
ಚಿಕ್ಕನಾಯಕನಹಳ್ಳಿ೦೬:-ಬೇಸಿಗೆ ಹತ್ತಿರ ಬರುತ್ತಿದ್ದು ಕುಡಿಯುವ ನೀರಿನ ಹಾಗೂ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದAತೆ ಹೆಚ್ಚು ಅದ್ಯತೆ ನೀಡಿ ಕೆಲಸ ಮಾಡಿ ಅಧಿಕಾರಿಳು ಜನರ ಸಮಸ್ಯೆಗಳನ್ನು ತಿಳಿದು ಸರಿಯಾದ ರೀತಿಯಲ್ಲಿ ಬಗೆಹರಿಸಿದರೆ ಅದೇ ಅವರಿಗೆ ನೀವು ಮಾಡುವ ಸೇವೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕಿನ ದುಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮನೆಬಾಗಿಲಿಗೆ ಮನೆ ಮಗ ಶಿರ್ಷಿಕೆಯಡಿಯಲ್ಲಿನ ೨೫ನೇ ವಾರದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳನ್ನು ಶಾಸಕರನ್ನು ಹುಡುಕಿಕೊಂಡು ಈ ಕ್ಷೇತ್ರದ ಜನರು ಅಲೆದಾಡಬಾರದು ಎಂದು ಕಳೆದ ೧೦೦ವಾರಗಳಿಂದ ಪಟ್ಟಣದ ತೀನಂಶ್ರೀ ಭವನದಲ್ಲಿ ಪ್ರತಿ ಸೋಮವಾರ ಜನಸ್ಪಂದನಾ ಕಾರ್ಯಕ್ರಮ ಮಾಡಲಾಗುತ್ತಿದೆ ಈ ಕಾರ್ಯಕ್ರಮಕ್ಕು ಬರಲು ಸಾದ್ಯವಾಗದಂತಹ ಜನರು ಗ್ರಾಮಗಳಲ್ಲಿದ್ದು ಅವರಿಗಾಗಿ ವಿಶೇಷವಾಗಿ ಈ ಮನಬಾಗಿಲಿಗೆ ಮನೆಮಗ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಳೆದ ೨೫ವಾರಗಳಿಂದಲೂ ಈ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಏರ್ಪಡಿಸಲಾಗುತ್ತಿದೆ ಹಳ್ಳಿಗೆಳಿಗೆ ಹೋಗಿ ಜನರ ಬಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಅವರ ವೈಯಕ್ತಿಕವಾಗಲಿ, ಸಾರ್ವಜನಿಕ ಸಮಸ್ಯೆಗಳನ್ನು ತಿಳಿದು ಅವುಗಳನ್ನು ಸಾದ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವಂತಹ ಕೆಲಸವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ ಎಂದ ಅವರು ಕಾರೇಹಳ್ಳಿಗೆ ಶಾಶ್ವತವಾಗಿ ನೀರನ್ನು ಹರಿಸಲು ಸಂಬAಧ ಪಟ್ಟ ನೀರಾವರಿ ಇಲಾಖೆಯ ಇಂಜನಿಯರ್‌ರವರೊAದಿಗೆ ಸ್ಥಳದಲ್ಲೇ ಚರ್ಚಿಸಿದರು. ದುಗಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಒಟ್ಟು ಸು.೭೫ಲಕ್ಷಕ್ಕು ಹೆಚ್ಚು ಅನುದಾನದಲ್ಲಿ ಶಾಲೆಕೊಠಡಿ, ಅಂಗನವಾಡಿ ಕಟ್ಟಡ, ರಸ್ತೆದುರಸ್ತಿ, ಗ್ರಂಥಾಲಯ ದುರಸ್ಥಿ, ಕೆರೆ ಏರಿ ರಿಪೇರಿ, ಸೇರಿದಂತೆ ನೂತನ ಗ್ರಾಮಪಂಚಾಯಿತಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದ ಅವರು ಇದೇ ತಿಂಗಳ ೧೬ರಂದು ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕೇವಲ ಪರೀಕ್ಷೆ ಮಾಡುವದಷ್ಟೇ ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗುವುದು ಅದ್ದರಿಂದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ನ ಅಧ್ಯಕ್ಷ ಹೆಚ್.ಅರ್ .ಶಶಿದರ್ ಮಾತನಾಡಿ ರಾಜ್ಯದಲ್ಲೇ ಈ ರೀತಿಯ ವಿಶೇಷವಾಗಿ ೧೦೦ಜನ ಸ್ಪಂದನಾ ಕಾರ್ಯಕ್ರಮ ಹಾಗೂ ೨೫ವಾರಗಳ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ತಿಳಿಯುವಂತಹ ಶಾಸಕರು ಇಲ್ಲ ಅದರೆ ನಮ್ಮ ಶಾಸಕರು ಜನರಿಗೆ ಹತ್ತಿರವಾಗಿ ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಇಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದ ಅವರು ಜನರು ಇದರಲ್ಲಿ ಯಾವುದೆ ಪಕ್ಷ, ಜಾತಿ, ರಾಜಕೀಯವನ್ನು ಮಾಡದೇ ನಿಮ್ಮ ಯಾವುದೆ ಸಮಸ್ಯೆಗಳ ಬಗ್ಗೆ ಮನವಿಗಳನ್ನು ನೀಡಬಹುದು ಎಂದರು.
ಇಒ ದೊಡ್ಡಸಿದ್ದಯ್ಯ ಡಿ ಮಾತನಾಡಿ ರಾಜ್ಯದ ಯಾವುದೇ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರು ಈ ರೀತಿಯ ಕಾರ್ಯಕ್ರಮಗ¼ನ್ನು ಮಾಡಿಲ್ಲ. ಇಂದು ೨೫ನೇ ವಾರದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಜನರ ಮೂಲಭೂತ ಸಮಸ್ಯೆಗಳನ್ನು ತಿಳಿದು ಅಲ್ಲೇ ಪರಿಹಾರ ನೀಡುವುದು ಹಾಗೂ ಜನರಿಂದ ಅಹವಾಲು ಸ್ವೀಕರಿಸುವುದಾಗಿದೆ. ಜನರು ತಮ್ಮಸಮಸ್ಯೆಗಳಿಗೆ ಸಾರ್ವಜನಿಕ ಕಚೇರಿಗಳಿಗೆ ಅಲೆದಾಡಬಾರದು ಎಂದು ಈ ಕಾರ್ಯಕ್ರಮದ ಆಯೋಜಿಸಿದ್ದು ನಿಮ್ಮ ಮನವಿಗಳನ್ನು ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಮತಾ ಎಂ, ದುಗಡಿಹಳ್ಳಿ ಗ್ರಾ.ಪಂ.ಅದ್ಯಕ್ಷೆ ಮಂಜುಳಾ, ಸದಸ್ಯರುಗಳಾದ ರಂಜಿತಾ, ಪ್ರಿಯಾಂಕ ಸೆರಿದಂತೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀದರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ, ಸೇರಿದಂತೆ ಪಿಡಿಒ ಬೈರಪ್ಪ ಮತ್ತಿತರರು ಇದ್ದರು.
ದುಗಡೀಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಾರೇಹಳ್ಳಿ, ಹೆಸರಹಳ್ಳಿ, ವಡೇರಹಳ್ಳಿ, ಸಿದ್ದರಾಮನಗರ, ದುಗಡಿಹಳ್ಳಿ ಗ್ರಾಮಗಳಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ, ಕುಡಿಯುವ ನೀರಿನ ಸಮಸ್ಯೆ, ಸಮುದಾಯ ಭವನ ನಿರ್ಮಿಸುವಂತೆ, ಖಾತೆಮಾಡಿಕೊಡುವಂತೆ, ರಸ್ತೆ ನಿರ್ಮಿಸುವಂತೆ ಹಾಗೂ ನಿರಂತರ ಜ್ಯೋತಿ ಸಂಪರ್ಕ ಕೊಡಿಸುವಂತೆ ಸೇರಿದಂತೆ ಇತರೆ ಅರ್ಜಿಗಳು ಸಭೆಯಲ್ಲಿ ಸಲ್ಲಿಕೆಯಾದವು.