
ಗೋಡಿಹಾಳ, ಕುಮನೂರ ಸೀಮಾಂತರದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಣೆ: ತಡೆಯಲು ಕರವೇ ಆಗ್ರಹ
ಯಾದಗಿರಿ : ವಡಗೇರಿ ತಾಲ್ಲೂಕಿನ ಗೋಡಿಹಾಳ ಹಾಗೂ ಕುಮನೂರು ಸೀಮಾಂತರದಲ್ಲಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೇ ನಡೆಯುತ್ತಿದ್ದು ತಕ್ಷಣ ಒಂದು ವಾರದಲ್ಲಿ ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾದ್ಯಕ್ಷ ಬೀರೇಶ ಚಿರತೆನೋರ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಎರಡು ಗ್ರಾಮಗಳ ಮದ್ಯೆ ಬರುವ ಸರ್ವೇ ನಂ: 39,41, 42, 48 ಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಸಾಗಾಟ ನಿರಂತರ ಹಗಲು ರಾತ್ರಿ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವುಂಟಾಗುತ್ತಿದೆ.
ಅಕ್ರಮ ಮರಳು ಮಾಫಿಯಾದೊಂದಿಗೆ ಪೊಲೀಸರು ಸಹ ಶಾಮೀಲಾಗಿದ್ದು, ಸಂಬAಧಿಸಿದ ಕಂದಾಯ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದಕ್ಕೆ ಪರೋಕ್ಷ ಬೆಂಬಲ ನೀಡಿ ಸಹಕರಿಸುತ್ತಿರುವುದರಿಂದ ನಿರಂತರ ಅಕ್ರಮ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಕ್ರಮ ಮರಳು ಸಾಗಣೆಯಿಂದಾಗಿ ವಡಗೇರಿ ತಾಲ್ಲೂಕಿನ ಎಲ್ಲ ರಸ್ತೆಗಳು ಹಾಳಾಗಿದ್ದು, ಜನ ಸಂಚಾರ ನರಕಯಾತನೆಯಾಗಿದೆ ಎಂದು ಅವರು ದೂರಿದ್ದಾರೆ.
ಮೇಲೆ ತೋರಿಸಿದ ಸರ್ವೇ ನಂ. ಗಳ ಸುತ್ತಮುತ್ತಲ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಸಹ ಧೂಳಿನಿಂದಾಗಿ ಹಾನಿಯಾಗುತ್ತಿದೆ. ಅತಿಚಿಕ್ಕದಾದ ಗ್ರಾಮೀಣ ರಸ್ತೆಗಳು ಹಾಗೂ ಹೊಲದ ರಸ್ತೆಗಳು ಬದುವಿನ ಬಂಡಿದಾರಿಗಳು ಸಹಾ ಭಾರಿ ಗ್ರಾತ್ರದ ವಾಹನಗಳ ಸಂಚಾರದಿAದಾಗಿ ಬೆಳೆ ನಷ್ಟವಾಗುತ್ತಿದೆ ಆದ್ದರಿಂದ ಜಿಲ್ಲಾಡಳಿತ ತಕ್ಷಣ ಇ ಅಕ್ರಮಕ್ಕೆ ಒಂದು ವಾರದಲ್ಲಿ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಿ ಯಾದಗಿರಿ-ವಡಗೇರಿ ರಸ್ತೆ ಬಂದ್ ಮಾಡಲಾಗುವುದು ಎಂದು ಸಿಮೆಯೋನ್ ಅಬ್ಬೆತುಮಕೂರು, ಶಿವಕುಮಾರ ಬೆಂಕಿ, ಶರಣು ದುಗನೂರ, ವಿಜಯಕುಮಾರ ಗುಡೂರ, ಶಿವಕುಮಾರ ಪಾಟೀಲ್, ಕೃಷ್ಣ ಭಜಂತ್ರಿ, ಪರಮೇಶ ನಾಯಕ ಎಚ್ಚರಿಸಿದ್ದಾರೆ.