
ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಬೆಂಗಳೂರು: ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಯಲಹಂಕದ ಸ್ವಾತಿ ವೈಭವ್ ಹೋಟೆಲ್ ನಲ್ಲಿ ನಡೆಯಿತು.
ಯಲಹಂಕ ಶಾಸಕರು ಎಸ್. ಆರ್. ವಿಶ್ವನಾಥ್ ರವರು, ರೈರ ಸಂಘದ ಅಧ್ಯಕ್ಷರು ನಾಗಭೂಷಣ್ ರೆಡ್ಡಿ ರವರು, ಸಮಾಜ ಸೇವಕರು ಸಂತೋಷ್ ಕುಮಾರ್ ರವರು, ಮಾಜಿ ಎಸ್.ಪಿ ಎನ್.ಕ್ರಿಷ್ಣಪ್ಪ ರವರು, ನಿವೃತ್ತ ಡಿಸಿಪಿ ಬಸವರಾಜ್ ಮಾಲಗತ್ತಿ ರವರು, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ನಾಗೇನಹಳ್ಳಿ ಕೃಷ್ಣಮೂರ್ತಿ ರವರು, ಐಜೆಯು ಸೆಕ್ರೆಟರಿ ನರೇಂದರ್ ರೆಡ್ಡಿ ರವರು, ತಮಿಳುನಾಡು ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರು ಸುಭಾಷ್ ರವರು, ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರು ಭಾಸ್ಕರ್ ರೆಡ್ಡಿ ರವರು, ನಿರ್ಮಾಪಕ, ನಿರ್ದೇಶಕ ಹಾಗು ಕನ್ನಡ ಚಲನಚಿತ್ರ ನಟ ಲಕ್ಕಿ ಶಂಖರ್, ಕನ್ನಡ ಚಲನಚಿತ್ರ ನಿರ್ದೇಶಕರು ಪ್ರವೀಣ್ ಕುಮಾರ್, ವಿಕಾಸ್ ಟ್ರಸ್ಟ್ ನಿರ್ದೇಶಕರು ರಾಚಯ್ಯ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ವೇಳೆ ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಮ್. ಜಾನಕಿಮೋಹನ್, ಉಪಾಧ್ಯಕ್ಷರುಗಳಾಗಿ ದಿನೇಶ್ ಕುಮಾರ್, ಕ್ರಷ್ಣಮೋಹನ್, ಪ್ರಧಾನ ಕಾರ್ಯದರ್ಶಿ ಯಾಗಿ ಅಂಜನ್ ಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಜಯಲಕ್ಷ್ಮಿ, ದಯಾನಂದ್ , ಕಲ್ಯಾಣ ಕರ್ನಾಟಕ ಅಧ್ಯಕ್ಷರಾಗಿ ಗೋಪಾಲ್ ಚಾಕ್ಲೆ ಆಯ್ಕೆಯಾದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಾಕೋ ಥಾಮಸ್, ನಕುಲೇಶ್, ಜಾರಿಗೆ ವಸಂತ್ ಕುಮಾರ್, ಮುನಿಶಾಮೇಗೌಡ, ರವೀಂದ್ರನಾಥ್, ನಟರಾಜ್ ಜೆಟ್ಟಿ, ಗಿರಿ ಯಾದವ್, ದಿವ್ಯಾ, ಚಿರಂಜೀವಿ ಸುಪ್ರೀತ್ ಆಯ್ಕೆಯಾದರು. ಕೆ ಎಸ್ ಜೆ ಯು ಸಂಸ್ಥಾಪಕ ಅಧ್ಯಕ್ಷರು ಭಾಸ್ಕರ್ ರೆಡ್ಡಿ ರವರು ಎಲ್ಲಾ ಪದಾಧಿಕಾರಿಗಳನ್ನು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರು ರಮೇಶ್ ಯರಗುಡಿ ಮತ್ತು ಪದಾಧಿಕಾರಿಗಳು ಹಾಗೂ ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಪತ್ರಕರ್ತರು ಭಾಗವಹಿಸಿ ಶುಭಹಾರೈಸಿದರು.
ವರದಿ ಹೈದರ್ ಸಾಬ್