ಮನೆಗೊಂದು ಗ್ರಂಥಾಲಯ : ವಿಜಯಪುರ ನಗರ ಸುದ್ಧಿ
ವಿಜಯಪುರ ನಗರದ ಸುಕುನ್ ಕಾಲನಿ ಸನ್ ಸಿಟಿ ಯಲ್ಲಿ
175 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಿರಿಯ ಸಾಹಿತಿ ಶ್ರೀ ರಾಮಕುಮಾರ ಅವರ ಮನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ದ ಅಧ್ಯಕ್ಷರು ಡಾ || ಮಾನಸ ( ಶ್ರೀ ಪುರುಷೋತ್ತಮ .ಬಿ) ಅವರ ಅಮೃತ ಹಸ್ತ ದಿಂದ ಮನೆ ಗ್ರಂಥಾಲಯ ಉದ್ಘಾಟನೆ ಮಾಡಿ, ಇದೆ ಸಮಯದಲ್ಲಿ ಸಾಹಿತಿ ಶ್ರೀ ರಾಮಕುಮಾರ ಅವರ " ಅತೃಪ್ತರು, ಕೊನೆಗಾಲ, ಹಾಗೂ ಕನಸು ಕೊಂದವರು " ಮೂರು ಕಾದಂಬರಿ ಗಳ ಲೋಕಾರ್ಪಣೆ ಗೊಳಿಸ ಲಾಯಿತು.
ವೇದಿಕೆಯಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಸಿಂಪೀರ ವಾಲಿಕಾರ ಕಾರ್ಯಕ್ರಮದ *ಅಧ್ಯಕ್ಷತೆ* ವಹಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಪುಸ್ತಕ ಪ್ರಾಧಿಕಾರ ದ ಅಧ್ಯಕ್ಷರು ಡಾ || ಮಾನಸ, ಶ್ರೀನಿವಾಸ್ ಕರಿಯಪ್ಪ, ಸಾಹಿತಿಗಳಾದ ಶ್ರೀ ಶಂಕರ ಬ್ಯೆಚಬಾಳ, ಶ್ರೀ ಸಂಗಪ್ಪ ಕೊಳಮನಿ, ಹಾಗೂ ಬಡಾವಣೆ ಪ್ರಮುಖರಾದ ಎಕ್ಸೆಲ್ಲೆಂಟ್ ಸಮೂಹ ಸಂಸ್ಥೆ ಚೇರ್ಮನ್ ಶ್ರೀ ರಾಜಶೇಖರ ಕೌಲಗಿ, ಪ್ರೊಫೆಸರ್ ಸಾಥಳಗಾಂವ, ಶ್ರೀ ಲಕ್ಷ್ಮಣ ಚವ್ಹಾಣ, ಶ್ರೀ ಪಿ ಎಸ್ ಕನಮಡಿ, ಅಮಸಿದ್ದ ಮೆಡೆದಾರ, ಶ್ರೀ ಹವನಾಳ ಹಾಗೂ ಮತ್ತಿತರ ಬಡಾವಣೆ ನಿವಾಸಿಗಳು ಉಪಸ್ಥಿತ ರಿದ್ದರು.