ನಾಳೆ ಮಾಜಿ ಶಾಸಕ ಲಿಂ.ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯಸ್ಮರಣೆ
ಯಾದಗಿರಿ : ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ತೋಟದ ಸ್ಮಾರಕದಲ್ಲಿ ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಿಂ. ನಾಗನಗೌಡ ಕಂದಕೂರ ಅಭಿಮಾನಿಗಳ ಬಳಗ ತಿಳಿಸಿದೆ. ಬೆಳ್ಳಿಗ್ಗೆ 10 ಗಂಟೆಗೆ ಕಂದಕೂರ ಕುಟುಂಬಸ್ಥರಿಂದ ಲಿಂ. ನಾಗನಗೌಡರ ಸ್ಮಾರಕದಲ್ಲಿ ಶಾಸ್ತೋಕ್ತವಾಗಿ ವಿಶೇಷ ಪೂಜೆ ಜರುಗುವುದು. ನಂತರ 10.30 ರಿಂದ ಮಹಾಪ್ರಸಾದ ವಿತರಣೆ ಜರುಗುವುದು. ಈ ಕಾರ್ಯಕ್ರಮಕ್ಕೆ ಸಮಸ್ತ ಕಂದಕೂರ ಅಭಿಮಾನಿಗಳು, ಹಿತೈಷಿಗಳು, ಸರ್ವರೂ ಭಾಗವಹಿಸಬೇಕೆಂದು ಲಿಂ. ನಾಗನಗೌಡ ಕಂದಕೂರ ಅಭಿಮಾನಿಗಳ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.