
ಇಂದು ದಿನಾಂಕ 23/01/2026 ರಂದು ಇಲಕಲ್ ಮಧ್ಯ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬವನ್ನು ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಡಗಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇಂದು ದಿನಾಂಕ 23/01/2026 ರಂದು ಇಲಕಲ್ ಮಧ್ಯ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬವನ್ನು ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಡಗಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಹುನಗುಂದ ಸದಾಶಿವ ಗುಡುಗುಂಟಿ ಸಾಹೇಬರು ಭಾಗವಹಿಸಿ ಮಕ್ಕಳಿಗೆ ಮೂಲ ಸಾಕ್ಷರತೆ ಮತ್ತು ಗಣಿತದ ಮೂಲ ಕ್ರಿಯೆಗಳಾದ ಸಂಕಲನ ವ್ಯವಕಲನ ಗುಣಾಕಾರ ಮತ್ತು ಭಾಗಕಾರ ಕ್ರಿಯೆಗಳನ್ನು ಮಾಡಲು ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದರು ಆದರೆ ನಮ್ಮ ಶಿಕ್ಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಜೊತೆಗೆ ಗಣಿತದ ಕ್ರಿಯೆ ಮೂಲ ಕ್ರಿಯೆಗಳನ್ನು ಕಲಿಸುವುದರ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ ಇದನ್ನು ಸಮುದಾಯಕ್ಕೆ ಮತ್ತು ಪಾಲಕರಿಗೆ ಗೊತ್ತು ಪಡಿಸಲು, ಬಹಿರಂಗಪಡಿಸಲು,ಸರ್ಕಾರವು ಈ ಕಲಿಕಾ ಹಬ್ಬವನ್ನು ಹಮ್ಮಿಕೊಂಡಿದೆ. ಜೊತೆಗೆ ನಮ್ಮ ತಾಲೂಕು ಎಫ್ಎಲ್ ಯಿಂದ ಮುಕ್ತವಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಮಹಾಂತೇಶ ಮೂಲಿಮನಿಯವರು ಮಕ್ಕಳಿಗೆ ಹಿತವಚನ ಹೇಳಿದರು. ಇಳಕಲ್ ವಲಯದ ಶಿಕ್ಷಣ ಸಂಯೋಜಕರು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಆದ ವಿನೋದ್ ಭೋವಿ ಅವರು ಮಕ್ಕಳಿಗೆ ಈ ಕಲಿಕೆಯು FLN ಮುಕ್ತರಾಗಲು ಸಹಾಯಕವಾಗಿದೆ ಮುಂದಿನ ದಿನಮಾನದಲ್ಲಿ ಮಕ್ಕಳು ಉತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದರು. ಅದೇ ರೀತಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿಜಯಲಕ್ಷ್ಮಿ ನಾಗಲೋಟಿ ಅವರು ಮಕ್ಕಳಿಗೆ ಕಲಿಕಾ ಹಬ್ಬದ ಹಾಡನ್ನು ಆಡಿಸುವ ಮೂಲಕ ಮಕ್ಕಳಿಗೆ ಕಲಿಕೆಯನ್ನು ಉತ್ತಮಪಡಿಸಿಕೊಳ್ಳಲು ಸಲಹೆಯನ್ನು ನೀಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ಇಲಕಲ್ ಘಟಕದ ಅಧ್ಯಕ್ಷರಾದ ಆರ್ ಎಸ್ ಮಾಸ ರೆಡ್ಡಿ ಅವರು ಮಾತನಾಡುತ್ತಾ ನಮ್ಮ ತಾಲೂಕು ಎಫ್ಎಲ್ ನಿಂದ ಮುಕ್ತರಾಗಲಿ ಮತ್ತು ಉತ್ತಮ ಅಕ್ಷರ ಅಭ್ಯಾಸ ಮತ್ತು ಒಳ್ಳೆಯ ಜ್ಞಾನ ಪಡೆದು ಉತ್ತಮ ಪ್ರಜೆಗಳಾಗಲಿ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮಕ್ಕೆ ಇಳಕಲ್ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಂಗಮೇಶ ಬಂಡರಗಲ್ ಅವರು ಉಪಸ್ಥಿತರಿದ್ದರು. ಹಿರೇ ಕೊಡಲಿ ಪಂಚಾಯಿತಿಯ ಅಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದ್ದರು ,. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತದಾರರ ಪ್ರತಿಜ್ಞಾವಿಧಿ ಭೋಧಿಸಿ ಮಕ್ಕಳಿಗೆ ಉತ್ತಮ ಪ್ರಜೆಗಳಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಗಳಾದ . ಆರ್ ಎಂ ಬಂಡಿವಡ್ಡರ ಗುರುಗಳು.. ಎಲ್ ಎಂ ಮಾದರ. ಶ್ರೀ ವಿ ಜಿ ಸಬರದ. ಗೋಪಾಲ್ ಮರಾಠ. ಉಪಸ್ತರಿದ್ದರು. ರಾಘವೇಂದ್ರ ಕೆಂಧೂಳಿಯವರು ಪ್ರಾಸ್ತಾವಕವಾಗಿ ಮಾತನಾಡಿದರು ಎಚ್ ಪಿ ಎಸ್ ಹಿರೇಕೊಡಗಲಿ ಶಾಲೆಯ ಮುಖ್ಯ ಗುರುಗಳು ಇಳಕಲ್ ಮಧ್ಯದ ಕ್ಲಸ್ಟರ್ನ ಎಲ್ಲಾ ಮುಖ್ಯ ಗುರುಗಳು ಸಹ ಶಿಕ್ಷಕರು ಹಾಗೂ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನುಪಮಾ ಪಾಡುಮಖಿ ನಿರೂಪಿಸಿದರು ಹಾಗೂ ಶ್ರೀ ತುಪ್ಪದ ಗುರುಗಳು ಸ್ವಾಗತಿಸಿದರು. ಶ್ರೀಮತಿ ಡಿ. ಎಚ್. ಮುಕ್ಕಣ್ಣನವರ ಮುಖ್ಯ ಗುರುಮಾತೆಯವರು ವಂದಿಸಿದರು.
ವರದಿ ಕಾಸಿಂಅಲಿಶಾ
ಮಕಾನದಾರ್