logo

ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ಆರೋಗ್ಯಕರವಾಗಿರಲು ಪೌಷ್ಠಿಕ ಆಹಾರ ಸೇವನೆ ಮುಖ್ಯ
ದಾರಿದೀಪ ಫೌಂಡೇಶನ್ ಮತ್ತು ಹಳ್ಳಿ ಜನಪದ ಟ್ರಸ್ಟ್ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ
ದೇವನಹಳ್ಳಿ: ಆರೋಗ್ಯಕರವಾಗಿರಲು ಪೌಷ್ಠಿಕ ಆಹಾರ ಸೇವೆನೆ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದ ಸರಕಾರಿ ಶಾಲೇಲಿ ದಾರಿದೀಪ ಫೌಂಡೇಷನ್ ಮತ್ತು ಹಳ್ಳಿ ಜನಪದ ಟ್ರಸ್ಟ್ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಿಲೆ ಬರುವ ಮುನ್ನಾ ಒಮ್ಮೆ ತಪಾಸಣೆ ಮಾಡಿಸಿಕೊಂಡಾಗ ಕ್ಯಾನ್ಸರ್ ಲಕ್ಷಣಗಳಿದ್ದರೆ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯಬಹುದು. ಕಾಯಿಲೆ ಇದೆಯೋ ಇಲ್ಲವೋ ಎಂದು ಕಾಯಿಲೆ ಬಂದ ನಂತರ ನೋಡುವ ಬದಲಿಗೆ ಮನೆ ಬಾಗಿಲಿಗೆ ಬಂದ ಶಿಬಿರದ ಸದ್ಭಳಕೆಯನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇಂದಿನ ಕಾಲದಲ್ಲಿ ಒಳ್ಳೆಯ ಆಹಾರಗಳನ್ನು ಸೇವಿಸುತ್ತಿದ್ದರು ಹಿರಿಯರಿಗೆ ಪೌಷ್ಟಿಕ ಆಹಾರಗಳು ದೊರಕುತ್ತಿದ್ದವು ಮನೆಯಲ್ಲಿ ತಯಾರು ಮಾಡಿದ ಅಡುಗೆ ಊಟ ಮಾಡಿದರೆ ಒಳ್ಳೆಯ ಆರೋಗ್ಯ ಸಿಗುತ್ತದೆ ಇತ್ತೀಚೆಗೆ ಪೌಷ್ಟಿಕ ಆಹಾರಗಳು ಸಿಗುತ್ತಿಲ್ಲ. ಅಪೌಷ್ಟಿಕವಾಗಿ ಆಹಾರಗಳು ಸೇವನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನಿಗೆ ಒಳ್ಳೆ .ಪೌಷ್ಟಿಕ ಆಹಾರದಿಂದ ಪೌಷ್ಟಿಕತೆ ಸಿಗುತ್ತದೆ. ಮನುಷ್ಯನ ಪೌಷ್ಟಿಕತೆಯಿಂದ ಇದ್ದರೆ ಒಳ್ಳೆಯ ಆರೋಗ್ಯವಂತರಾಗಿರುತ್ತಾನೆ ಎಂದು ಹೇಳಿದರು.

ಹಳ್ಳಿ ಜನಪದ ಮುಖ್ಯಸ್ಥ ಹೊಸಳ್ಳಿ ವಾಸುದೇವ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಳ್ಳಿ ಜನರಿಗೆ ಅನುಕೂಲವಾಗುವ ಆರೋಗ್ಯ ತಪಾಸಣೆ ಶಿಬಿರವು ಅತ್ಯಂತ ಅಮೂಲ್ಯವಾದದ್ದು, ಶಿಬಿರದಲ್ಲಿ ಹೆಚ್ಚು ಗ್ರಾಮಸ್ಥರು ಭಾಗಿಯಾಗುವುದರ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಆದಷ್ಟು ದುಶ್ಚಟಗಳಿಂದ ದೂರ ಉಳಿದಷ್ಟು ಆರೋಗ್ಯವಾಗಿರಲು ಸಾದ್ಯ ಎಂದು ಸಲಹೆ ಮಾಡಿದರು.

ಕ್ಯಾನ್ಸರ್ ರೋಗ ತಜ್ಞೆ (ಹೆಚ್‌ಒಡಿ) ಡಾ.ಶೋಭಾ ಮಾತನಾಡಿ, ತಂಬಾಕು ಧೂಮಪಾನ ಸೇವನೆಯಿಂದ ೪೦ರಷ್ಟು ಕ್ಯಾನ್ಸರ್ ರೋಗ ಬರುತ್ತದೆ. ಇನ್ನು ಹಲವು ಆಹಾರಗಳಿಂದ ಶೇಕಡವಾರು ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ರೋಗ ಮುಕ್ತರಾಗಿರಬಹುದು. ಶಾಲಾ ಮಕ್ಕಳು ಕಳಪೆ ಗುಣಮಟ್ಟದ ಆಹಾರಗಳನ್ನು ಸೇವನೆ ಮಾಡಬಾರದು. ಇಂತಹ ಶಿಬಿರಗಳಲ್ಲಿ ತಪಾಸಣೆಗಳು ಮಾಡಿಸಿಕೊಂಡರೆ ಯಾವ ಹಂತದಲ್ಲಿ ಕಾಯಿಲೆ ಇದೆ ಇಲ್ಲವೋ ತಿಳಿಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಇಂತಹ ತಪಾಸಣೆ ಶಿಬಿರಗಳು ಆಯೋಜನೆ ಮಾಡಿದರೆ ಹಳ್ಳಿಗಾಡಿನ ಜನತೆ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಚೆನ್ನಾಗಿರುತ್ತದೆ.
- ದೇವರಾಜ್ | ಅಧ್ಯಕ್ಷರು, ಚನ್ನಹಳ್ಳಿ ಗ್ರಾಪಂ

ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಧಕೃಷ್ಣರೆಡ್ಡಿ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ದೇವನಹಳ್ಳಿ ಅಮೆಚೂರ್ ಸಂಘದ ಕಬ್ಬಡಿ ಅಧ್ಯಕ್ಷ ರಾಧಾಕೃಷ್ಣ, ಹಳ್ಳಿ ಜನಪದ ಟ್ರಸ್ಟಿನ ಕಾರ್ಯದರ್ಶಿ ಹೊಸಹಳ್ಳಿ ವಾಸುದೇವ್, ಗ್ರಾಪಂ ಪಿಡಿಒ ನಾಗರಾಜ್, ಗ್ರಾಮದ ಮುಖಂಡ ನಂದೀಶ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ದಾರಿ ದೀಪ ಫೌಂಡೇಶನ್ ಅಧ್ಯಕ್ಷ ಅಮಿತ್ ಜೋಶಿ ಹಾಗೂ ಪ್ರೌಢಶಾಲಾ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಗ್ರಾಮಸ್ಥರು ಇನ್ನು ಮುಂತಾದವರು ಹಾಜರಿದ್ದರು.

ವರದಿ :ಹೈದರ್ ಸಾಬ್ 9743784848

67
4671 views