logo

*ನಗರದ ಕಂಠಿ ಶಾಲೆಯಲ್ಲಿ ಜಾನಪದ ಸೊಗಡು ಕಾರ್ಯಕ್ರಮ*

*ನಗರದ ಕಂಠಿ ಶಾಲೆಯಲ್ಲಿ ಜಾನಪದ ಸೊಗಡು ಕಾರ್ಯಕ್ರಮ*

ಇಳಕಲ್ :ಶಾಸಕರ ಸರಕಾರಿ ಮಾದರಿ ಪ್ರಾಥಮಿಕ (ಕಂಠಿ) ಶಾಲೆಯಲ್ಲಿ
ಮೌಖಿಕ ಪರಂಪರೆಯ ರಕ್ಷಣೆ, ಜೀವನ ಮತ್ತು ನಂಬಿಕೆಯ ಪ್ರತಿಬಿಂಬದೊಂದಿಗೆ ಸರಳತೆ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂದು *ದಿ.‌24-01-2026ರ ಶನಿವಾರ ಬೆಳಗ್ಗೆ 10.00 ಗಂಟೆಗೆ *ಶಾಸಕರ ಸರಕಾರಿ ಮಾದರಿ ಪ್ರಾಥಮಿಕ (ಕಂಠಿ) ಶಾಲೆ, ಇಳಕಲ್ಲದಲ್ಲಿ *ಜಾನಪದ ಸೊಗಡು* ಅನ್ನುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಜಾನಪದ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ *ಎತ್ತಿನ ಬಂಡಿಗಳ ಮೆರವಣಿಗೆಯನ್ನು* ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯ ಚಾಲನೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಚಾಲನೆ ನೀಡುತ್ತಿದ್ದು, ಮುಖ್ಯ ಅತಿಥಿಗಳಾಗಿ *ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷಿ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು ಆಗಮಿಸಲಿದ್ದು ಅತಿಥಿಗಳಾಗಿ ಇಳಕಲ್ಲ ನಗರಸಭೆಯ *ಪೌರಾಯುಕ್ತ ಶ್ರೀನಿವಾಸ ಜಾಧವ, ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ, ಸದಾಶಿವ ಗುಡಗುಂಟಿ, ವಿನೋದ ಭೋವಿ, ಶ್ರೀಮತಿ ವಿಜಯಲಕ್ಷ್ಮಿ ನಾಗಲೋಟಿ, ಶ್ರೀಮತಿ ಆಶಾರಾಣಿ, ಪರಶುರಾಮ ಪಮ್ಮಾರ, ಸಂಗಮೇಶ ಬಂಗಾರಿ, ರಂಗನಾಥ ಮಾಸರೆಡ್ಡಿ, ಸಂಗಮೇಶ ಬಂಡರಗಲ್ಲ* ಆಗಮಿಸುತ್ತಿದ್ದು.

ವಿಶೇಷ ಉಪನ್ಯಾಸಕರಾಗಿ ಸಂಗಣ್ಣ ಗದ್ದಿ ಹಾಗೂ ‌ಮುತ್ತಣ್ಣ ಬೀಳಗಿ ಅವರು ಜಾನಪದ ಕಲೆಯ ಬೆಳವಣಿಗೆ ಮತ್ತು ಮಹತ್ವದ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಸರ್ವ ನಾಗರಿಕ ಬಂಧುಗಳು, ಪಾಲಕರು, ನಗರದ ಪತ್ರಕರ್ತ ಹಿರಿಯರು, ದೃಶ್ಯ ಮಾಧ್ಯಮದ ಹಿರಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ
*ಹಂಚಾಟೆ ಪ್ರಶಾಂತ*
ಉಪಾಧ್ಯಕ್ಷರು
ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮೀತಿ. ಪತ್ರಿಕೆಗೆ ಮಾಹಿತಿ ನೀಡಿದ್ದಾರೆ
ವರದಿ ಕಾಸಿಂಅಲಿಶಾ ಮಕಾನದಾರ್

0
796 views