
ತುರ್ವಿಹಾಳ ಹೋಬಳಿಯ ಕಲಮಂಗಿ ಗ್ರಾಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹೊಸ ವಿದ್ಯಾ ರ್ಥಿನಿಲಯ ಮಂಜೂರು ಮಾಡು ವಂತೆ ಶಾಸಕರಿಗೆ ಮನವಿ.
ಸಿಂಧನೂರು: ೨೧ ಜನೇವರಿ
ಇಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ವತಿ ಯಿಂದ ತುರ್ವಿಹಾಳ ಹೋಬಳಿಯ ಕಲಮಂಗಿ ಗ್ರಾಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡುವ ಇಂದು ಆರ್, ಬಸನಗೌಡ ತುರ್ವಿಹಾ ಳ, ಶಾಸಕರು ಮಸ್ಕಿ ವಿಧಾನಸಭಾ ಕ್ಷೇತ್ರ ಮತ್ತು ಅಧ್ಯಕ್ಷರು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಬೆಂಗಳೂರು ಇವರಿಗೆ ದಲಿತ ವಿದ್ಯಾ ರ್ಥಿ ಪರಿಷತ್ ತಾಲ್ಲೂಕು ಘಟಕ ಮನವಿಪತ್ರ ಸಲ್ಲಿಸಲಾಯಿತು.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂ ಬಂಧಿಸಿದಂತೆ ದಲಿತ ವಿದ್ಯಾರ್ಥಿ ಪರಿ ಷತ್ ತಾಲೂಕು ಅಧ್ಯಕ್ಷರು ದುರುಗೇ ಶ ಕಲಮಂಗಿ ಮಾತನಾಡಿ ಕಲಮಂಗಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ, ನಮ್ಮ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಉ ಳಿದುಕೊಳ್ಳಲು ಯಾವುದೇ ಸರ್ಕಾರಿ ವಿದ್ಯಾರ್ಥಿನಿಲಯದ (Hostel) ಸೌಲ ಭ್ಯವಿರುವುದಿಲ್ಲ.ದೂರದ ಹಳ್ಳಿಗಳಿಂ ದ ಬರುವ ವಿದ್ಯಾರ್ಥಿಗಳು ಪ್ರತಿದಿನ ಬಸ್ ಸೌಕರ್ಯದ ಕೊರತೆಯಿಂದಾಗಿ ಮತ್ತು ಆರ್ಥಿಕ ಸಂಕಷ್ಟದಿಂದಾಗಿಶಾಲೆ ಗೆ ಬರಲು ತೊಂದರೆಯಾಗುತ್ತಿದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿ ಸುತ್ತಿದ್ದಾರೆ. ಇಲ್ಲಿ ಒಂದು ಸರ್ಕಾರಿ ವಿ ದ್ಯಾರ್ಥಿನಿಲಯ ಮಂಜೂರಾದಲ್ಲಿ ನೂರಾರು ಬಡ ವಿದ್ಯಾರ್ಥಿಗಳ ಉನ್ನ ತ ಶಿಕ್ಷಣಕ್ಕೆ ಬಹಳ ಅನುಕೂಲವಾಗಲಿ ದೆ.
ಆದುದರಿಂದ, ದಯವಿಟ್ಟು ಪರಿಸ್ಥಿತಿ ಯನ್ನು ಅವಲೋಕಿಸಿ, ಮುಂದಿನ ಶೈ ಕ್ಷಣಿಕ ವರ್ಷದಿಂದಲೇ ಅನ್ವಯವಾಗು ವಂತೆ ನಮ್ಮಲ್ಲಿ ಹೊಸ ವಿದ್ಯಾರ್ಥಿನಿಲ ಯವನ್ನು ಪ್ರಾರಂಭಿಸಲು ಕ್ರಮಕೈಗೊ ಳ್ಳಬೇಕೆಂದು ಮನವಿಯನ್ನು ಸಲ್ಲಿಸಿದ ರು.
ಈ ಸಂದರ್ಭದಲ್ಲಿ ಅಮರೇಗೌಡವಕೀ ಲರು,ಶರಣಬಸವ ನಾಯಕ,ಯಲ್ಲನ ಗೌಡ ಮಾಲಗತ್ತಿ,ಪಂಪನಗೌಡ ಜಾಲಿ ಹಾಳ,ರಾಮಣ್ಣ ಬಡಿಗೇರ್, ರವಿಗೌಡ ಕುಲಕರ್ಣಿ, ವಿದ್ಯಾರ್ಥಿ ಮುಖಂಡರು ಶರಣಬಸವ ಸಂಕನೂರ, ಮಹಮ ದ್ ಸುಲೇಮಾನ್, ಶರಣಬಸವ ಸಂ ಗನಾಳ, ಶೋಯಬ್ ಅಕ್ತರ, ನೀಲಪ್ಪ ತಾವರಗೇರಾ, ಬಾಬು ಚಳಗೇರಿ, ಹಾ ಗೂ ಊರಿನ ಮುಖಂಡರು ಮತ್ತು ವಿದ್ಯಾರ್ಥಿ ಮುಖಂಡರು ಉಪಸ್ಥಿತರಿ ದ್ದರು.
ವರದಿ: ಎಸ್ ಎನ್ ವೀರೇಶ
ಸಿಂಧನೂರು.