logo

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ

ಬೆಂಗಳೂರಿನ ಅಬ್ಬಿಗೆರೆ ಪೂರ್ಣ ಪ್ರಜ್ಞ ಶಾಲೆಯಲ್ಲಿ ವಿವೇಕಾನಂದ ಅಂತಾರಾಷ್ಟ್ರೀಯ ಪ್ರಕೃತಿ ಯೋಗ ಅಕಾಡೆಮಿ ಹಾಗೂ ಗ್ಲೋಬಲ್ ಯೋಗಾ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆ ೨೦೨೬ ಲೋಕಲ್ ಟು ಗ್ಲೋಬಲ್ ಚಾಂಪಿಯನ್‌ಶಿಪ್ ಯೋಗಾಸನ ಸ್ಪರ್ಧೆಯಲ್ಲಿ ಬೆಂ.ಗ್ರಾ.ಜಿಲ್ಲಾ ಸಂಜೀವಿನಿ ಯೋಗ ಕೇಂದ್ರದ ಗಗನ್.ಪಿ, ಹಂಸ.ಪಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಯೋಗ ಮಾಸ್ಟರ್ ಶ್ರೀಕಾಂತ್.ಪಿ ಮಾತನಾಡಿ, ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಂಜೀವಿನಿ ಯೋಗಾ ಕೇಂದ್ರದಿಂದ ಗಗನ್.ಪಿ ಮತ್ತು ಹಂಸ.ಪಿ ಭಾಗವಹಿಸಿ ಅತ್ಯುತ್ತಮ ಯೋಗ ಪ್ರದರ್ಶನವನ್ನು ನೀಡುವುದರ ಮೂಲಕ ಅಂತಾರಾಷ್ಟ್ರೀಯ ಯೋಗಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಮುಂದಿನ ಜುಲೈ ತಿಂಗಳಿನಲ್ಲಿ ಥೈಲ್ಯಾಂಡ್‌ನಲ್ಲಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಯೋಗ ಪ್ರದರ್ಶನ ನೀಡುವುದರ ಮೂಲಕ ಯಶಸ್ವಿಯಾಗಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ಪರ್ಧಾಯೋಜಕ ಡಾ.ವಿಶ್ವಬಂದು ನಾಗೇಶ್, ಬಿಬಿಎಂಪಿ ಸದಸ್ಯ ನಾಗಭೂಷಣ್, ಕರ್ನಾಟಕ ಯೋಗ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಪುಟ್ಟೇಗೌಡ ಸೇರಿದಂತೆ ಹಲವರು ಅಭಿನಂದಿಸುವುದರ ಮೂಲಕ ಶುಭ ಹಾರೈಸಿದರು.

5
1182 views
  
1 shares