logo

ಮಾವು ಬೆಳೆಗಾರರ ತರಬೇತಿ ಕಾರ್ಯಕ್ರಮ ಶ್ರೀನಿವಾಸಪುರ

ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ(ನಿ),. ಅಪೆಡಾ,ಕೆಫೆಕ್ ಹಾಗೂ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಕೋಲಾರ ರವರ ಸಂಯುಕ್ತ ಆಶ್ರಯದಲ್ಲಿ "ಮಾವು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆ, ಕೀಟ/ರೋಗ ನಿಯಂತ್ರಣ ಮತ್ತು ರಫ್ತು ಮಾರುಕಟ್ಟೆಗೆ ಉತ್ತೇಜನ" ಕುರಿತು
ಮಾವು ಬೆಳೆಗಾರರಿಗೆ ತರಭೇತಿ ಕಾರ್ಯಕ್ರಮವನ್ನು
ದಿನಾಂಕ:-19.01.2026, ಸೋಮವಾರ
ಶ್ರೀ ಮಾರುತಿ ಸಭಾ ಭವನ, ತಾಲ್ಲೂಕು ತೋಟಗಾರಿಕೆ ಕಛೇರಿ , ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಡೆಸಲಾಗಿ ಉದ್ಘಾಟನೆ
ಡಾ. ಬಿ ಸಿ ಮುದ್ದುಗಂಗಾಧರ್, ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನ,
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ
ಮತ್ತು ಮಾರುಕಟ್ಟೆ ನಿಗಮ ನಿಯಮಿತ. ಕರ್ನಾಟಕ ಸರ್ಕಾರ ರವರು ನೆರವೇರಿಸಿದರು. ಅಧ್ಯಕ್ಷತೆಯು
ಶ್ರೀ ಜಿ.ಕೆ.ವೆಂಕಟಶಿವಾರೆಡ್ಡಿ, ಮಾನ್ಯ ಶಾಸಕರು ,
ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ರವರು
ಶ್ರೀ ಟಿ ಆರ್ ವೇದಮೂರ್ತಿ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ, ರಾಜ್ಯ ಮಾವು ಅಭಿವೃದ್ಧಿ ನಿಗಮ, ಶ್ರೀ ಕುಮಾರ ಸ್ವಾಮಿ ತೋಟಗಾರಿಕೆ ಉಪ ನಿರ್ದೇಶಕರು ಕೋಲಾರ, , ಶ್ರೀ ಮಂಜುನಾಥ. ಎಂ. ಸಹಾಯಕ ನಿರ್ದೇಶಕರು ಮಾವು ಅಭಿವೃದ್ಧಿ ನಿಗಮ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗ ಹಾಗೂ 500 ಜನ ಮಾವು ಬೆಳೆಗಾರರು ಭಾಗವಹಿಸದರು. ವಿಷಯ ತಜ್ಞರಿಂದ ಮಾವಿನ ಬೇಸಾಯ ಕ್ರಮಗಳ ರೈತರಿಗೆ ತರಬೇತಿ ನೀಡಲಾಯಿತು. ಸದರಿ ತರಬೇತಿ ಕಾರ್ಯಕ್ರಮದಲ್ಲಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಮುದ್ದು ಗಂಗಾಧರ್ ರವರು ಮಾತನಾಡುತ್ತಾ ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಮಾವು ಬೆಳೆಯನ್ನು ಬೆಳೆಯಲು ಮಾರ್ಗದರ್ಶನ ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರ್ಕಾರವಾಗಿದೆ. ನಾವು ರೈತರ ಪರ ಎಂದು ತಿಳಿಸಿದರು
ಡಾ: ನಟರಾಜ್ ಸಹ ಪ್ರಾಧ್ಯಾಪಕರು "ಮಾವು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ವಿಷಯ ಮಂಡಿಸಿದರು. ಈ ಕಾರ್ಯಕ್ರಮದಲ್ಲಿ
ಡಾ|| ಆಂಜನೇಯರೆಡ್ಡಿ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹೊಗಳಗರೆ ,ಡಾ: ಗಂಗಾಧರ್, ಕೀಟ ಶಾಸ್ತ್ರಜ್ಞರು ಹಾಗೂ
ಶ್ರೀಮತಿ. ಎಂ ಲಾವಣ್ಯ, ಯೋಜನಾ ನಿರ್ದೇಶಕರು, ಇತರರು ಉಪಸ್ಥಿತಿ ಇದ್ದರು

11
2613 views