logo

ವೇಮನ ಸಂದೇಶ ಸಾರ್ವಕಾಲಿಕ

ದೇವನಹಳ್ಳಿ: ಮಹಾಯೋಗಿ ಶ್ರೀ ವೇಮನ ಜಯಂತಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕಿದ್ದು, ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಹಾಯೋಗಿ ಶ್ರೀ ವೇಮನ ಜಯಂತಿ ಅಂಗವಾಗಿ ಶ್ರೀ ವೇಮನ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಹಾಯೋಗಿ ವೇಮನ ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಉಪದೇಶ ನೀಡಿದ್ದಾರೆ. ಕನ್ನಡಕ್ಕೆ ಸರ್ವಜ್ಞ, ತಮಿಳಿಗೆ ತಿರುವಳ್ವರ್‌ರಂತೆ ತೆಲುಗು ಭಾಷೆಗೆ ವೇಮನರೇ ಮಹಾಕವಿ ಎಂಬುದು ಇಂದಿಗೂ ಜನಜನಿತವಾಗಿದೆ. ಆದರ್ಶ ಪುರುಷರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಸಮಾಜಸೇವಕ ದ್ಯಾವರಹಳ್ಳಿ ವಿ.ವೆಂಕಟಪ್ಪ, ವಿಷಯ ನಿರ್ವಾಹಕ ಶ್ರೀನಿವಾಸ ಮೂರ್ತಿ, ತಾಲೂಕು ಕಚೇರಿ ಸಿಬ್ಬಂದಿ ಜಮುನಾ, ತುಕಾರಾಂ, ತಾಲೂಕು ಆಡಳಿತ ನೌಕರರು ಇದ್ದರು.

ವರದಿ: ಹೈದರ್ ಸಾಬ್

16
1140 views