
ಹಾವೇರಿ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರ ಬಂಧನ
ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ-ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಗಾಂಜಾ ಮಾರಾಟ ಮಾರುತಿದ್ದ 03 ಜನ ಆರೋಪಿತರಾದ
1)ಲೋಹಿತ್ ತಂದೆ-ಕೃಷ್ಣಪ್ಪ ಮುನಿಯಪ್ಪನವರ, ವಯಾ-23 ವರ್ಷ, ಜಾತಿ ಹಿಂದೂ ಮಾದರ, ಉದ್ಯೋಗ-ಪೇಂಟಿಂಗ್ ಕೆಲಸ, ಸಾ:ಅಂಬೇಡ್ಕರ್ ನಗರ ಸವಣೂರ. ಜಿ:ಹಾವೇರಿ
2)ಮಹೇಶ ತಂದೆ-ಮೈಲ್ಲಮ್ಮನವರ, ವಯಾ-23 ವರ್ಷ, ಜಾತಿ -ಹಿಂದೂ ಮಾದರ, ಉದ್ಯೋಗ -ಪೇಂಟಿಂಗ ಕೆಲಸ, ಸಾ:ಅಂಬೇಡ್ಕರ್ ನಗರ ಸವಣೂರ. ಜಿ:ಹಾವೇರಿ
3)ಮನೋಜ್ ತಂದೆ-ಕರಿಯಪ್ಪ ಚಾರಿ, ವಯಾ. 21ವರ್ಷ, ಜಾತಿ -ಹಿಂದೂ ವಾಲ್ಮೀಕಿ, ಉದ್ಯೋಗ -ಕೂಲಿ ಕೆಲಸ ಸಾ:ಹಾವಣಗಿ ಪ್ಲಾಟ್ ಸವಣೂರ. ಜಿ:ಹಾವೇರಿ ಎಂಬುವರನ್ನು ದಾಳಿ ಮಾಡಿ ದಸ್ತಗಿರಿ ಮಾಡಿ ಅವರಿಂದ 7,935 ಗ್ರಾಂ ತೂಕದ ಗಾಂಜಾ ಅ. ಕಿ= 3.17.400/- ರೂಗಳು, 03 ಬ್ಯಾಗ ಗಳು, ನಗದು ಹಣ -3.3370/-ರೂ ಹಾಗೂ ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್ಗಳನ್ನು ಜಪ್ತು ಮಾಡಿ ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಹಾಗೂ ಈ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿರುತ್ತದೆ
ಈ ಕಾರ್ಯಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಯಶೋದಾ ವಂಟಗೋಡಿ, ಐ. ಪಿ. ಎಸ್ ರವರ ಮಾರ್ಗದರ್ಶನದಲ್ಲಿ ಮಾನ್ಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀ ಏಲ್. ವೈ ಶಿರಕೋಳ ಹಾವೇರಿ ಮತ್ತು ಹಾವೇರಿ ಉಪ- ವಿಭಾಗದ ಪೊಲೀಸ್
ಉಪಾಧಿಕ್ಷಕರಾದ ಶ್ರೀ. ಎಂ ಎಸ್ ಪಾಟೀಲ್ ರವರ ನೇತೃತ್ವದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪಿ. ಐ, ಶ್ರೀ ಮೋತಿಲಾಲ್ ಆರ್ ಪವಾರ ರವರ ತಂಡದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ಪಿ,ಎಸ್.ಐ ರವರಾದ ಶ್ರೀ. ಬಿ. ಜಿ. ದೂಡ್ಡಮನಿ ಪಿ.ಎಸ್. ಐ, ಎಂ. ಜಿ ವಗ್ಗಣ್ಣನವರ ಪಿ. ಎಸ್. ಐ, ಶ್ರೀ. ಏನ್ ಏನ್ ಶಿಶುವಿನಹಾಳ.ಪಿ.ಎಸ್.ಐ ಮತ್ತು ಸಿಬಂದಿ ಜನರಾದ ಎಲ್ಲಪ್ಪ ತಹಶೀಲ್ದಾರ್, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರ ಲಮಾಣಿ , ಚನ್ನಬಸಪ್ಪ. ಆರ್. ಬಿ, ನೀಲಕಂಠಿ ಲಿಂಗರಾಜ, ಚಂದ್ರಕಾಂತ. ಎಲ್ ಆರ್, ಏಮ್. ಏನ್ ಹಿತ್ತಲಮನಿ, ಮಾಂತೇಶ್ ಕಬ್ಬೂರು, ಪರಶುರಾಮ್ ಸಕನಳ್ಳಿ, ಬಸವರಾಜ್ ಸೀಳ್ಳಿ ಕ್ಯಾತರ್, ಮತ್ತು ಇತರೆ ಠಾಣಾ ಸಿಬಂದಿ, SOCO ಅಧಿಕಾರಿಗಳಾದ ಶಂಕರ್ ಈರೇಶನವರ, ರಮ್ಯ BE, ಸೂರಜ್ ಲಮಾಣಿ ಹಾಗೂ ತಾಂತ್ರಿಕ ಸಿಬಂದಿ ಜನರಾದ ಮಾರುತಿ ಹಾಲಭಾವಿ, ಸತೀಶ್ ಮಾರುಕಟ್ಟೆ ಹಾಗೂ ಸಿಬಂದಿ ಜನರು ಪತ್ತೆ ಕುರಿತು ಶ್ರಮಿಸಿರುತ್ತಾರೆ ಈ ಪತ್ಯ ಕಾರ್ಯದ ಬಗ್ಗೆ ಮೇಲಾಧಿಕಾರಿಗಳು ಶ್ಲಾಘೀಸಿ ಬಹುಮಾನ ಘೋಷಿಸಿರುತಾರೆ