logo

ಪೊಲೀಸರ ವಿರುದ್ಧವೇ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲು ಸಿಎಂ ಗರಂ

ರಾಜ್ಯದ ಅನೇಕ ಪೊಲೀಸ್ ಠಾಣೆಗಳಲ್ಲಿ 88 ಕ್ರಿಮಿನಲ್ ಪ್ರಕರಣಗಳು ಪೊಲೀಸರ ವಿರುದ್ಧವೇ ದಾಖಲಾಗಿದ್ದು ಬೇಸರ ತಂದಿದೆ. ಸರಕಾರಕ್ಕೆ ಇದರಿಂದ ತೀವ್ರ ಮುಜುಗರವಾಗಿದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವೆಡೆ ಪೊಲೀಸರು ಉತ್ತಮ ಕೆಲಸ ನಿರ್ವಹಿಸಿದರೆ ಮತ್ತೊಂದೆಡೆ ಪೊಲೀಸರು ಸರಿಯಾಗಿ ಕೆಲಸ ನಿಭಾಯಿಸುತ್ತಿಲ್ಲವೆಂದು ತೀವ್ರ ಕಳವಳ ವ್ಯಕ್ತಪಡಿಸಿದರು. ಗೃಹ ಮಂತ್ರಿ ಪರಮೇಶ್ವರ್ ಪೊಲೀಸ್ ಡಿಜಿಪಿ ಎಂಎ ಸಲೀಂ ಇದ್ದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ, ದರೋಡೆ, ಕಳ್ಳತನ, ಕೊಲೆ, ಗುಂಡಾಗಿರಿ ಪ್ರಕರಣಗಳಿಂದ ಜನತೆ ಸುಖಶಾಂತಿ ನೆಮ್ಮದಿ ಕಳೆದುಕೊಂಡು ಸರಕಾರಕ್ಕೆ ದೂಷಿಸುತ್ತಿದ್ದಾರೆ. ಇದರಿಂದ ಕೆಟ್ಟ ಹೆಸರು ಬರುತ್ತಿದೆ. ಬೇರೆ ರಾಜ್ಯಗಳ ಪೊಲೀಸರು ನಮ್ಮ ರಾಜ್ಯದಲ್ಲಿ ಬಂದು ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ, ಆದರೆ ನಮ್ಮ ಪೊಲೀಸರಿಂದ ಇಂಥ ಕಾರ್ಯಚರಣೆ ಯಶಸ್ವಿ ಏಕೆ ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರ ನಡೆಗೆ ಬೇಸರ ವ್ಯಕ್ತಪಡಿಸಿ ಇನ್ನಾದರೂ ಪೊಲೀಸರು ತಮ್ಮ ಕರ್ತವ್ಯದಲ್ಲಿ ಅಚ್ಚುಕಟ್ಟುತನದ ನಡೆ ತೋರಿಸಿ ಸಾರ್ವಜನಿಕರೊಂದಿಗೆ ಸಭ್ಯರಿತಿಯಿಂದ ವರ್ತಿಸಬೇಕೆಂದು ಪೊಲೀಸರಿಗೆ ಎಚ್ಚರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗದು ಎಂದು ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

7
465 views