logo

*ಮಾನವನ ವ್ಯಕ್ತಿತ್ವ ಬೆಳೆಸುವುದು ಜೆ.ಸಿ.ಐ.ಉದ್ದೇಶ ಗುರು ಮಹಾಂತ ಶ್ರೀಗಳು.*

*ಮಾನವನ ವ್ಯಕ್ತಿತ್ವ ಬೆಳೆಸುವುದು ಜೆ.ಸಿ.ಐ.ಉದ್ದೇಶ ಗುರು ಮಹಾಂತ ಶ್ರೀಗಳು.*
ಇಳಕಲ್: ಸೇವೆ ಮಾಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕು ವ್ಯಕ್ತಿತ್ವ ಇರುವುದು ಶಾಶ್ವತ ಸಕಾರಾತ್ಮಕ ಚಿಂತನೆಯ ಮೇರು ಪರ್ವತ ಎಂದು ಪೂಜ್ಯ ಗುರು ಮಹಾಂತ ಮಹಾಸ್ವಾಮಿಗಳು ಹೇಳಿದರು. ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಜೇ.ಸಿ.ಐ. ಇಳಕಲ್ ಮಹಾಂತಶ್ರೀ ಸಿಟಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಮತ್ತು ವೇದಿಕೆಯ ಮೇಲಿದ್ದ ಗಣ್ಯರೆಲ್ಲಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು ಪೂಜ್ಯರು ಆರೋಗ್ಯ ಭಾಗ್ಯ, ಸೇವಾ ಸದ್ಭಾವನೆ, ಸೇವೆ ಮಾಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಬೆಳೆದು ಬರಬೇಕು ಎಂದರು. ಜೇಸಿಐ ವಲಯ 24ರ ಉಪಾಧ್ಯಕ್ಷ ಸಿ.ಎ. ಮಧುಸೂದನ್ ನಾವಡ. ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಜೇಸಿಐ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟು ಒಳ್ಳೆಯ ನಾಗರಿಕರನ್ನಾಗಿ ಬೆಳೆಸುತ್ತದೆ ಎಂದರು. ಜೇಸಿಐ ವಲಯ ಉಪಾಧ್ಯಕ್ಷ ಅಮೃತ ಸಿ. ಮಾತನಾಡಿ ಜೆಸಿಐ ವಲಯ ಸಿದ್ಧಾಂತಗಳಿಗೆ ಇಳಕಲ್ ಘಟಕ ಹತ್ತಿರವಾಗಿದೆ ಇಲ್ಲಿ ತರಬೇತಿ ಪಡೆದವರು
ಉತ್ತಮ ನಾಗರಿಕರಾಗಿ ಬೆಳೆದು ಬರುವ ಸಾಧ್ಯತೆ ಇದೆ ಎಂದರು. ಜೇ.ಸಿ.ಐ. ಇಳಕಲ್ ಮಹಾಂತಶ್ರೀ ಸಿಟಿ 2026 ನೇ ಸಾಲಿನ ನೂತನ ಅಧ್ಯಕ್ಷ ಉಸ್ತಾದಖಾನ ರಾಜೇಸಾಬ ಇಲಾಳ ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷ ಹನುಮಂತ ಚುಂಚಾ ಅಧ್ಯಕ್ಷತೆ ವಹಿಸಿದ್ದರು, ಇದೇ ಸಂದರ್ಭದಲ್ಲಿ ಇಳಕಲ್ ಶಹರ ಪಿ.ಎಸ್.ಐ. ಮಂಜುನಾಥ ಪಾಟೀಲ್,ಚಿನ್ನದ ಪದಕ ಪ್ರಶಸ್ತಿ ವಿಜೇತೆ ಮೋನಲ್ ಭಂಡಾರಿ, ಜೇಸಿಐ ಮಾಜಿ ಅಧ್ಯಕ್ಷ ಅಖಿಲ ಅಕ್ಕಿ ಮಧುಸೂದನ್, ಅಮೃತ್ ಸಿ. ಅವರನ್ನು ಗೌರವಿಸಿ ಸತ್ಕರಿಸಲಾಯಿತು. ನೂತನ ಅಧ್ಯಕ್ಷ ಇಲಾಳ ಅವರು ತಮ್ಮ ಅವಧಿಯಲ್ಲಿ ಮಾಡಲಿರುವ ಕಾರ್ಯಕ್ರಮಗಳನ್ನು ವಿವರಿಸಿದ್ದರು. ಇಳಕಲ್ ಜೇಸಿಐ ಸಂಸ್ಥಾಪಕ ಅಧ್ಯಕ್ಷ ಬಿ.ಬಾಬು ಅವರ ನಿಧನದ ಬಗ್ಗೆ ಮೌನಚರಣೆ ಮಾಡಲಾಯಿತು ಚಂದ್ರು ಮುಧೋಳ ಅವರಿಂದ ಜೇಸಿ ವಾಣಿ ಹನುಮಂತ ಚುಂಚಾ ಸ್ವಾಗತಿಸಿದರು ಡಾ. ಅವಿನಾಶ ಗುಳೇದ ಮತ್ತು ಆನಂದ ಬಿಜ್ಜಲ ಪರಿಚಯಿಸಿದರು, ಶಿರಸಪ್ಪ ಪತ್ತಾರ ನಿರೂಪಿಸಿದರು. ಬಸವರಾಜ ಕಾಳಗಿ ವಂದಿಸಿದರು.
ವರದಿ ಕಾಸಿoಅಲಿಶಾ ಮಕಾನದಾರ್

1
0 views