ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘ,ಕ್ರೀಯಾಶೀಲ ಸಂಘವಾಗಿದೆ-ತಹಸೀಲ್ದಾರ್ ಅಮರೇಶ ಪಮ್ಮಾರ
ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘ,ಕ್ರೀಯಾಶೀಲ ಸಂಘವಾಗಿದೆ-ತಹಸೀಲ್ದಾರ್ ಅಮರೇಶ ಪಮ್ಮಾರ
ಇಳಕಲ್ ಸರ್ಕಾರಿ ನೌಕರರ ಸಂಘದ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ತಹಸೀಲ್ದಾರ್ ಅಮರೇಶ ಪಮ್ಮಾರ ರವರು ಕಳೆದ ಆರು ತಿಂಗಳಿನಿಂದ ಇಳಕಲ್ ತಾಲೂಕ ಶಾಖೆಯ ಕಾರ್ಯ ನೋಡುತ್ತಿದ್ದು ,ಅತ್ಯಂತ ಕ್ರೀಯಾಶೀಲ ಸಂಘಟನೆಯನ್ನು ಅಧ್ಯಕ್ಷರಾದ ಪರಶುರಾಮ ಪಮ್ಮಾರ ರವರ ತಂಡ ಮಾಡುತ್ತಿದೆ ಎಂದರು.
ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೂ, ಆರೋಗ್ಯದ ಕಡೆಗೆ ಹಾಗೂ ಕುಟುಂಬದ ಕಡೆಗೆ ಗಮನ ನೀಡುವಂತೆ ನೌಕರರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಪರಶುರಾಮ ಪಮ್ಮಾರ ಮಾತನಾಡುತ್ತ ಸರ್ಕಾರಿ ನೌಕರರ ಹಿತ ರಕ್ಷಣೆಗಾಗಿ ಸಂಘವು ಸದಾ ಕಾಲ ಕಾರ್ಯನಿರ್ವಹಿಸುತ್ತದೆ ಎಂದರು.ತಾಲೂಕು ಪಂಚಾಯತ್ AD ರವರಾದ ಈರಣ್ಣ ಚಿನಿವಾಲರ ಹಾಗೂ ರಮೇಶ ಬೋರಣ್ಣವರ ರವರನ್ನು ಸಂಘದಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸಂಗಮೇಶ ಬಂಗಾರಿ,ಖಜಾಂಚಿ ಶರಣು ಕೊಣ್ಣೂರ ಹಾಗೂ ಸಂಘದ ಸರ್ವ ಪದಾಧಿಕಾರಿಗಳು,ನೌಕರ ಬಾಂಧವರು ಉಪಸ್ಥಿತರಿದ್ದರು.