logo

ಸ್ವಾರ್ಥ ರಾಜಕಾರಣಿ, ದುಷ್ಟ ವ್ಯವಸ್ಥೆಯ ವಿರುದ್ಧ ನಿಸ್ವಾರ್ಥ ಕ್ರೀಡಾಪಟುವಿನ ಹೋರಾಟ.

ಈ ಫೋಟೋದಲ್ಲಿ ಇರುವವರು ಲೋಕೇಶ್ ರಾಟೋಡ ಅಂತಾ ರಾಷ್ಟ್ರೀಯ ಕ್ರೀಡಾಪಟು. ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಕ್ರೀಡೆಯಲ್ಲಿ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು. ತನ್ನಂತೆ ತನ್ನ ಜಿಲ್ಲೆಯಲ್ಲಿ ಇನ್ನು ಹೆಚ್ಚು ಕ್ರೀಡಾಪಟುಗಳು ಮುಂದೆ ಬರಬೇಕು ಎಂಬ ಆಶೆಯನ್ನು ಹೊಂದಿದವರು.
ಆದರೆ ಈಗ ಇವರ ಮೇಲೆ ಯಾದಗಿರಿಯಲ್ಲಿ Fir ಆಗಿದೆ ಕಾರಣ ಇಷ್ಟೇ, ಅವ್ಯವಸ್ಥೆಯ ಆಗಾರವಾಗಿದ್ದ ಯಾದಗಿರಿ ಜಿಲ್ಲಾ ಕ್ರೀಡಾ0ಘನಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸಿ ಕ್ರೀಡಾಪಟುಗಳಿಗೆ ಪ್ರಾಕ್ಟೀಸ್ ಮಾಡಲು ಅನುಕೂಲವಾಗುತ್ತದೆ ಎಂದು ಅಲ್ಲಿಯ ಅಧಿಕಾರಿಗಳಿಗೆ ವನವಿ ಮಾಡಿ ಮಾಡಿ ಕೊನೆಗೆ ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೂಡ ಮನವಿಯನ್ನು ಸಲ್ಲಿಸಿ ಬೇಡಿಕೊಂಡರು ಕಡೆಗೆ ಅವರ ಮನವಿ ಪತ್ರ ಕಸದ ಬುಟ್ಟಿಗೆ ಸೇರಿದ್ದನ್ನು ಕಂಡು ಆ ಕ್ರೀಡಾಪಟುವಿನ ಮನಸ್ಸು ಬೇಸರಗೊಂಡಿತು. ಏಕೆಂದರೆ ವಿದೇಶಗಳಲ್ಲಿ ಕ್ರೀಡಾಪಟುವಿಗೆ ಎಷ್ಟೊಂದು ಮರ್ಯಾದೆಯಿದೆ ಹಾಗೂ ಅವರಿಗೆ ಎಷ್ಟೊಂದು ಅನುಕೂಲ ಮಾಡಿಕೊಡುತ್ತಾರೆ ಎಂಬುದನ್ನು ಕಣ್ಣಾರೆ ಕಂಡವರು. ಕೊನೆಗೆ ದಾರಿ ಕಾಣದೆ ನಮ್ಮ ರಾಜ್ಯದ ಟ್ವಿಟ್ ಮಿನಿಸ್ಟರ್, ಎಲ್ಲಾ ವಿಷಯಕ್ಕೂ ತಕ್ಷಣ ಪ್ರತಿಕ್ರಿಯೆ ಕೊಡುವ ಐಟಿಬಿಟಿ ಮಂತ್ರಿ ಹಾಗೂ ಅದೇ ಹೈದ್ರಾಬಾದ ಕರ್ನಾಟಕದವರೇ ಆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯಾದಗಿರಿ ಜಿಲ್ಲಾ ಕ್ರೀಡಾ0ಘಣ ದುರಸ್ಥಿ ಮಾಡಿಸಿ ಹಾಗೂ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡರು. ಇಷ್ಟೇ ಮಾಡಿದ್ದು ಪಾಪ ಅವರು ಮಾಡಿದ ಈ ಘನಘೋರ ಅಪರಾಧಕ್ಕೆ ಅವರ ಮೇಲೆ ಈಗ FiR ದಾಖಲಾಗಿದೆ. ಎಂತಹ ಶೋಚನಿಯವಿದು.
ಆದರೆ ವಿಚಿತ್ರ ಎಂದರೆ ದಲಿತ ಮಂತ್ರಿ ಎಂದು ಕಾರ್ಡ್ ಪ್ಲೆ ಮಾಡುವವರು ಅದೇ ನ್ಯಾಯಯುತ ಬೇಡಿಕೆಯಿಟ್ಟ ಒಬ್ಬ ದಲಿತ ಕ್ರೀಡಾಪಟುವಿನ ಮೇಲೆ ಕಾನೂನಿನ ಗದಾ ಪ್ರಹಾರ ಮಾಡುವುದು ಎಷ್ಟು ಸರಿ. ಇದು ಒಬ್ಬ ಅಮಾಯಕ ಮೇಲೆ ನಡೆದ ದಬ್ಬಾಳಿಕೆ ಹಾಗೂ ದೌರ್ಜನ್ಯ ಎಂದರೂ ತಪ್ಪಾಗಲಾರದು.
ಇನ್ನು ದೊಡ್ಡ ವಿಚಿತ್ರ ಎಂದರೆ ಇದರ ವಿರುದ್ಧ ರಾಜ್ಯದ ಯಾವುದೇ ದಲಿತ ಸಂಘಟನೆಗಳು ಧ್ವನಿ ಎತ್ತಿಲ್ಲ ಹಾಗೂ ಆ ಕ್ರೀಡಾಪಟುವಿನ ಬೆಂಬಲಕ್ಕೂ ನಿಂತಿಲ್ಲ.ಹಾಗೂ ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ಕೂಡ ಗಾಢ ನಿದ್ರೇಯಿಂದ ಏಳುತ್ತಿಲ್ಲ.ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಇದೆ.
ಆದರೆ ಆ ಕ್ರೀಡಾಪಟು ಅಂಜದೆ ಈ ದುಷ್ಟ ವ್ಯವಸ್ಥೆಯ ವಿರುದ್ದ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. ಅವರು ತಾವು ಗೆದ್ದ ಪದಕಗಳನ್ನು ಮಾರುವ ಮೂಲಕ ವಿಭಿನ್ನವಾದ ಹೋರಾಟವನ್ನು ಜಿಲ್ಲಾ ಕ್ರೀಡಾ0ಘಣದ ಮುಂದೆ ಹಮ್ಮಿಕೊಂಡಿದ್ದಾರೆ ಅವರಿಗೆ ಸಾರ್ವಜನಿಕರಿಂದ ಅಪಾರ ಬೆಂಬಲ ದೊರಕುತ್ತಿದೆ. ಆದರೆ ಹೊಣೆಗೆಡಿ ಅಧಿಕಾರಿಗಳು ಹಾಗೂ ಟ್ವಿಟ್ ಮಿನಿಸ್ಟರ್ ಇನ್ನು ಇಚ್ಛೆತ್ತು ಕೊಳ್ಳದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.ಇವರ ಹೋರಾಟಕ್ಕೆ ಸಾರ್ವಜನಿಕರೂ ಕೂಡ ಅವರ ಬೆಂಬಲಕ್ಕೆ ನಿಂತು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು.

ಆ ದಿಟ್ಟ ಹೋರಾಟಗಾರ ಕ್ರೀಡಾಪಟುವಿನ ನಿಸ್ವಾರ್ಥ ಹೋರಾಟಕ್ಕೆ ಜಯಸಿಗಲಿ. ಅವರ ಆಸೆ ಈಡೇರಲಿ ಎಂದು ಆಶಿಸುತ್ತೇನೆ.

0
0 views