ಮಾನವತೆಗೆ ಮೆರೆದ ಸಚಿವ ಈಶ್ವರ್ ಖಂಡ್ರೆ
ಹೈದ್ರಾಬಾದ್ ಮುಂಬೈ ಹೆದ್ದಾರಿಯ ಬೀದರ್ ಜಿಲ್ಲೆ ಮನ್ನಾ ಏಖೆಳ್ಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ರಸ್ತೆ ಮಧ್ಯ ಬಂದ ಜಿಂಕೆಗೆ ರಕ್ಷಿಸಲು ಹೋಗಿ ಆಯತಪ್ಪಿ ಅಪಘಾತಕ್ಕೀ ಡಾದನು. ಅದೇ ರಸ್ತೆಯಲ್ಲಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಹೋಗುತ್ತಿದ್ದು ಅಪಘಾತ ಕಂಡು, ಆತನನ್ನು ಬೀದರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿ ಮಾನವೀಯತೆಗೆ ಮೆರೆದರು. ಸಚಿವರ ಈ ನಡೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.