logo

ನಾಳೆ ಗಿರಿದರ್ಶನ ಪತ್ರಿಕೆ ಜನಾರ್ಪಣೆ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಭಾಗಿ

ಯಾದಗಿರಿ : ನೂತನ ಗಿರಿದರ್ಶನ ಕನ್ನಡ ಪತ್ರಿಕೆ ಜನಾರ್ಪಣೆ ಕಾರ್ಯಕ್ರಮ ಇಂದು ಜ.14 ಬುಧವಾರ ಮಧ್ಯಾಹ್ನ 3:30 ಕ್ಕೆ ನಡೆಯಲಿದೆ ಎಂದು ಸಂಪಾದಕ ಡಾ.ಸಿದ್ಧರಾಜರೆಡ್ಡಿ ತಿಳಿಸಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೂ, ಕರ್ನಾಟಕ ಗಡಿ ಹಾಗೂ ಜಲ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಶಿವರಾಜ ಪಾಟೀಲ ಪತ್ರಿಕೆ ಜನಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ,ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ,ಮುಖಂಡರಾದ ರಾಚನಗೌಡ ಮುದ್ನಾಳ,ಮಹೇಶರಡ್ಡಿ ಮುದ್ನಾಳ, ಖ್ಯಾತ ವೈದ್ಯರಾದ ಡಾ.ಸಿ.ಎಂ.ಪಾಟೀಲ, ಶರಣಪ್ಪಗೌಡ ಕರೆಡ್ಡಿ ಮಲ್ಹಾರ ಆಗಮಿಸಲಿದ್ದಾರೆ. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಜಸ್ಟಿಸ್ ಶಿವರಾಜ ಪಾಟೀಲ ಪ್ರತಿಷ್ಠಾನ ದ ಸಂಚಾಲಕರು, ಶಿಕ್ಷಣತಜ್ಞರಾದ ಪ್ರೊ.ಚನ್ನಾರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಯುವಗಾಯಕ ಮಹೇಶ ಶಿರವಾಳ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಯಾದಗಿರಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಾ.ಸಿದ್ಧರಾಜರೆಡ್ಡಿ ಮನವಿ ಮಾಡಿದ್ದಾರೆ.​

15
3365 views