
ಕಾಂಗ್ರೆಸ್ ಎಂಎಲ್ಸಿ ಭೀಮ್ರಾವ್ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹ
ಇತ್ತೀಚಿಗೆ ಬೀದರ್ ಕೆ ಡಿ ಪಿ ಸಭೆಯಲ್ಲಿ ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದಲಿಂಗ ಪಾಟೀಲ್ ಅವರ ಮೇಲೆ ಹಠಾತ್ತನೇ ಹಲ್ಲೆ ನಡೆಸಲು ಯತ್ನಿಸಿದ ಹುಮ್ನಾಬಾದ್ನ ಕಾಂಗ್ರೆಸ್ ಎಂಎಲ್ಸಿ ಭೀಮರಾವ್ ಪಾಟೀಲ್ ಮೇಲೆ ಇಲ್ಲಿಯವರೆಗೆ ಯಾವುದೇ ಪ್ರಕರಣ ಎಫ್ಐಆರ್ ಪೊಲೀಸರು ದಾಖಲು ಮಾಡದೆ ಇರೋದು, ದುರಾದೃಷ್ಟಕರ ಎಂದು ಬಿಜೆಪಿಯ ಹುಮ್ನಾಬಾದ್ ಶಾಸಕ ಸಿದ್ದಲಿಂಗ ಪಾಟೀಲ್ ಆರೋಪಿಸಿದರು. ಅವರು ಭೀಮರಾವ್ ಪಾಟೀಲ್ ಒಬ್ಬ ಅನ್ಪಡ್ ಶಾಸಕ ಎಂದು ಛೀಮಾರಿ ಹಾಕಿದರು.
ನೂರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಒಬ್ಬ ಜನಪ್ರತಿನಿಧಿಯನ್ನು ,ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಎದುರೇ ಹಲ್ಲೆ ಗೆ ಯತ್ನಿಸಿ ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಎಂದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಗುಂಡಾಗಳಿಗೆ ಸಂರಕ್ಷಿಸಲಾಗುತ್ತಿದೆ. ಮಹಿಳೆಯರ ಮೇಲೆ ಹಲ್ಲೆ ಅತ್ಯಾಚಾರಗಳಂತಹ ಪ್ರಕರಣಗಳು ಜರುಗಿದರೂ ಯಾರು ಕ್ಯಾರೆ ಅನ್ನುತ್ತಿಲ್ಲ. ಪ್ರಕರಣ ಜರುಗಿ ಒಂದು ವಾರ ಆದರೂ ಪೊಲೀಸರು ಯಾವುದೇ ಪ್ರಕರಣ ದಾಖಲೆ ಮಾಡಿಕೊಳ್ಳದಿರುವುದು ದುರಾದೃಷ್ಟಕರ. ಪೊಲೀಸರು ಕೂಡ ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ನುಡಿದರು.
ಬಿಜೆಪಿ ಮುಖಂಡರಾದ ಪ್ರಭು ಚೌಹಾಣ್, ಪ್ರಕಾಶ್ ಖಂಡ್ರೆ, ಈಶ್ವರ್ ಸಿಂಗ್ ಠಾಕೂರ್, ಭಗವಂತ ಖೂಬಾ, ಶೈಲೇಂದ್ರ ಬೆಲ್ದಾಳೆ ರವರು ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಮತ್ತು ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಸಮಸ್ಯೆಗಳ ಆಗರವಾಗಿದೆ ಎಂದು ಮಾತನಾಡಿ ಒಂದು ವೇಳೆ ಎಂ ಎಲ್ ಸಿ ಭೀಮರಾವ್ ಪಾಟೀಲ್ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರ ನುಡಿದರು.