logo

ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಗೆ ಅಂತರಾಷ್ಟ್ರೀಯ ದರ್ಜೆಯ ಗರಿ

ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಸಾರ್ವಜನಿಕರ ಸುಧಾರಣೆಗೆ ಶೀಘ್ರ ಪ್ರತಿಕ್ರಿಯೆ ದಾಖಲೆಗಳ ವಿಲೇವಾರಿಗಳ ತೀವ್ರತೆ ಸೇರಿ ಕಲಬುರಗಿ ಪೊಲೀಸ್ ಇಲಾಖೆಯ ವ್ಯವಸ್ಥೆಯ ಗುಣಮಟ್ಟ ಆಡಳಿತ ಸುಧಾರಣೆಗೆ ತರಲೆಂದು ಇಲಾಖೆಗೆ ಸರ್ಕಾರ ದಿಂದ ಮೂಲಸೌಕರ್ಯ ಒದಗಿಸಿದ ಪ್ರಯುಕ್ತ ಪೊಲೀಸರು ಉತ್ತಮ ಕಾರ್ಯಾಚರಣೆ ಮಾಡಿದ ಹಿನ್ನೆಲೆ ಆಯುಕ್ತಾಲಯಕ್ಕೆ ಅಂತರಾಷ್ಟ್ರೀಯ ದರ್ಜೆ ಆಯ್ಎಸ್ ಓಂ ಲಬಿಸಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟರು.
ಸಿಬ್ಬಂದಿಗಳಿಗೆ ಸಕಾಲಕ್ಕೆ ಪ್ರಮೋಷನ್ ವರ್ಗಾವಣೆ ಸರಿಯಾದ ರೀತಿಯಲ್ಲಿ ಸಕಾಲಕ್ಕೆ ಟಿ ಎ ಡಿ ಎ ಯಲ್ಲಿ ನಿರ್ವಹಣೆ ಹಾಗೂ ಸಾರ್ವಜನಿಕರ ಹಿತರಕ್ಷಣೆ ತ್ವರಿತ ಪಾಸ್ಪೋರ್ಟ್ ಪರಿಶೀಲನೆ ಈ ಎಲ್ಲಾ ಕಾರ್ಯಗಳ ಪರಿಶೀಲನೆ ನಡೆಸಿ ಕಲಬುರಗಿ ಪೊಲೀಸ್ ಆಯುಕ್ತಾಲಯಕ್ಕೆ ಅಂತರಾಷ್ಟ್ರೀಯ ದರ್ಜೆಯ ಐ ಎಸ್ ಓ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಐಟಿಬಿಟಿ ಹಾಗೂ ಕಲಬುರಗಿ ಉಸ್ತವಾಗಿ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಯವರು ಪೊಲೀಸ್ ಆಯುಕ್ತ ಶ್ರೀ ಶರಣಪ್ಪ ಎಸ್ ಡಿ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿ ಮೆಚ್ಚುಗೆ ವ್ಯಕ್ತಪಡಿಸಿ ಕಾನೂನು ಸುವ್ಯವಸ್ಥೆ ನಿಷ್ಪಕ್ಷವಾಗಿ ಪಾಲಿಸುವ ಸಲಹೆ ನೀಡಿ ಜನರ ವಿಶ್ವಾಸ ಕಾಪಾಡಬೇಕೆಂಬ ಸಲಹೆ ನೀಡಿದ ಬೆನ್ನಲ್ಲೇ ಆಯುಕ್ತಾಲಕ್ಕೆ ಈ ಪ್ರಶಸ್ತಿ ಮುಡಿಯೇರಿದ್ದು ತಮಗೆ ಹರ್ಷ ತಂದಿದೆ ಎಂದು ನುಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಜಗದೇವ ಗುತ್ತೇದಾರ್ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್ ತಿಪ್ಪಣ್ಣಪ್ಪ ಕಮಕನೂರ್ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನು ಮ್ ಸಿ ಇ ಓ ಭಂವರ್ಸಿಂಗ್ ಮೀನಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಬಸವೇಶ್ವರ ಹಿರಾ ಇತರರು ಇದ್ದರು.

4
83 views
  
1 shares