ಮಹಿಳೆಯನ್ನು ಕೂಡಿಹಾಕಿ ನಗ ನಾಣ್ಯ ದೋಚಿ ಪರಾರಿಯಾದ ದರೋಡೆಖೋರ್ ಪೊಲೀಸರ ವಶಕ್ಕೆ
ಕಲಬುರಗಿ ನಗರದ ವಿಠಲ್ ನಗರ್ ಬಡಾವಣೆ ನಿವಾಸಿ ಗುರುಬಾಯಿ ವಿರೂಪಾಕ್ಷಪ್ಪ ಅವರು ಒಬ್ಬರೇ ಇದ್ದ ಮನೆಗೆ ನುಸುಳಿದ ಸುಲಿಗೆಖೋರ 40ಗ್ರಾಂ ಚಿನ್ನದ ಸರ 30 ಗ್ರಾಂ ಕೈ ಬಳೆ ಕಸಿದುಕೊಂಡು ಪರಾರಿಯಾಗಿದ್ದಾನೆ. ಅವರ ಮಗ ಡಾ. ಚಂದ್ರಕುಮಾರ್ ಫಿರಿಯಾದಿನ ಮೇರೆಗೆ ಬ್ರಹ್ಮಪುರ ಪೊಲೀಸರು ವ್ಯಾಪಕ ತನಿಖೆ ನಡೆಸಿ ಶಿವುಕುಪ್ಪು ಸ್ವಾಮಿ ಆರೋಪಿಯನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳಲಾಗಿದೆ. ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ತಿಳಿಸಿದ್ದಾರೆ.