
ಸುಪ್ರಸಿದ್ಧ ಸಿದ್ದಾರ್ಥ್ ಲಾ ಕಾಲೇಜಿನಲ್ಲಿ ಅಕ್ರಮ ವ್ಯಾಪಕ ತನಿಖೆಗೆ ಎವಿಬಿಪಿ ಆಗ್ರಹ
ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಹಾಗೂ ಅತಿ ಹಳೆಯ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಿದ್ದಾರ್ಥ್ ಕಾನೂನು ಮಹಾವಿದ್ಯಾಲಯದಲ್ಲಿ ಪರೀಕ್ಷೆಯಲ್ಲಿ ಅಕ್ರಮ ವ್ಯಸಗಿದವರ ವಿರುದ್ಧ ಉನ್ನತ ತನಿಖೆಗೆ ಆಗ್ರಹಿಸಿ ಎಬಿವಿಪಿ ಯಿಂದ ಪ್ರತಿಭಟನೆ ನಡೆಸಿ ಅಪರ್ ಜಿಲ್ಲಾಧಿಕಾರಿ ರಾಯಪ್ಪಹುಣಸಿಗಿಯವರಿಗೆವ್ಯಾಪಕತನಿಖೆಗಾಗಿಆಗ್ರಹಿಸಲಾಗಿದೆ.ಅಕ್ರಮನಡೆಸಿದ24ವಿದ್ಯಾರ್ಥಿಗಳನ್ನುಡಿಬಾರ್ಗೊಳಿಸಿಅಕ್ರಮನಡೆಸಿದವರನ್ನುರಕ್ಷಿಸಲಾಗಿದೆಅವರವಿರುದ್ಧವುಕಠಿಣ ಕ್ರಮ ಜರುಗಿಸಬೇಕೆಂದು ದೂರಲಾಗಿದೆ.
2024-25 ಸಾಲಿನ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಗುಲ್ಬರ್ಗ ನೀಡಿರುವ ಉತ್ತರ ಪೇಪರಗಳನ್ನು ಹೊರತುಪಡಿಸಿ ಬೇರೆ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದು ಬೆಳಕಿಗೆ ಬಂದಿದೆ ಪರೀಕ್ಷಾ ಕೇಂದ್ರದಲ್ಲಿ ಉತ್ತರ ಬರೆಯದೇ ವಿಶ್ವವಿದ್ಯಾಲಯದ ಹೊರಗೆ ಬರೆದು ವಿಶ್ವವಿದ್ಯಾಲಯ ಪತ್ರಿಕೆಗಳೊಂದಿಗೆ ಅಕ್ರಮವಾಗಿ ಸೇರಿಸಿ ಮೌಲ್ಯಮಾಪನಕ್ಕೆ ಕಳುಹಿಸಲಾಗಿದೆ ಎಂದು ಎಬಿವಿಪಿ ಬಲವಾಗಿ ಆರೋಪಿಸಿದೆ. ಪಿಎಸ್ಐ ಅಕ್ರಮದ ಬಗ್ಗೆ ಗಂಭೀರವಾಗಿ ಖಂಡಿಸಿರುವ ಕರ್ನಾಟಕ ರಾಜ್ಯದ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಈಗ ತಮ್ಮ ಸಂಸ್ಥೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ಹೊಂದಿದ್ದು ಸಂಸದ ರಾಧಾಕೃಷ್ಣ ಕಾರ್ಯದರ್ಶಿ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಸದಸ್ಯರಾಗಿರುವ ಈ ಪ್ರತಿಷ್ಠಿತ ಸಂಸ್ಥೆಯ ಅಕ್ರಮದ ಬಗ್ಗೆ ವ್ಯಾಪಕ ತನಿಖೆ ನಡೆಸಿ ತಪ್ಪಿಸ್ತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.