ಕಲಬುರಗಿ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಗಳು ಶಾಲಾ ಮಕ್ಕಳಿಂದ ದುರು ಸ್ಥಿತಿಗೆ ಪ್ರತಿಭಟನೆ
ಕಮಲಾಪುರ ತಾಲೂಕಿನ ಡೂಂಗರ್ಗಾವ್ ಬಸವೇಶ್ವರ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಶಿಕ್ಷಕರೊಂದಿಗೆ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆದ ಅಪರೂಪದ ಸನ್ನಿವೇಶವೊಂದು ಜರುಗಿತು. ಗ್ರಾಮದ ಮುಖ್ಯ ರಸ್ತೆಯಿಂದ ಶಾಲೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಈ ಸಂಬಂಧ ಅನೇಕ ಬಾರಿ ದೂರು ನೀಡಿದರೂ ಯಾರು ಕಿವಿ ಕೊಡುತ್ತಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಕಾರಮಗಿ ಆರೋಪಿಸಿದ್ದಾರೆ. ಡೊಂಗರ್ಗಾವ್ ಪಂಚಾಯತ್ ಕಚೇರಿಯಿಂದ 500 ಮೀಟರ್ ಅಂತರದಲ್ಲಿರುವ ಇದೊಂದೇ ಮಾರ್ಗ. ಇನ್ನು ಮತ್ತೊಂದು ಕಡೆ ಜಲಜೀವನ ಮಿಷನ್ ಯೋಜನೆಯಡಿ ನೀರಿಗಾಗಿ ಪೈಪ್ ಲೈನ್ ರಸ್ತೆ ತೋಡಿ ಹಾಗೆ ಬಿಟ್ಟು ನಿರ್ಲಕ್ಷ ತೋರಿದ್ದಾರೆ. ಚರಂಡಿ ನೀರು ರಸ್ತೆಗೆ ಬಂದು ಹೊಲಸು ವಾಸನೆ ಬರುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮಗೆ ಸಂಬಂಧವಿಲ್ಲ ಎಂಬಂತೆ ಸರಿಪಡಿಸುವ ಪ್ರಯತ್ನಕ್ಕೂ ತಲೆ ಹಾಕುತ್ತಿಲ್ಲ ಎಂದು ದೂರಲಾಗಿದೆ. ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಸಂಗಪ್ಪ ಚಿಗ್ಗೋಣ, ಶಿವಾನಂದ್ ಇಟಗಿ ಮತ್ತು ಶಂಕ್ರಯ್ಯ ಹಿರೇಮಠ ಇತರರು ಅನೇಕರಿದ್ದರು.