logo

ಪ್ರತಿಷ್ಠೆಗೆ ಒಳಗಾಗಿ ಸಂಯಮ ಕಳೆದುಕೊಳ್ಳುತ್ತಿರುವ ರಾಜಕಾರಣಿಗಳು

ವೈಯಕ್ತಿಕ ದ್ವೇಷಕ್ಕೆ ಒಳಗಾಗಿ ಸಂಯಮ ಕಳೆದುಕೊಳ್ಳುತ್ತಿರುವ ರಾಜಕಾರಣಿಗಳ ಪ್ರತಿಷ್ಠೆ ಮುಖ್ಯವಾಗಿ ಹೋಯ್ತೆ, ಮರೆಯಬೇಡಿ ನೀವು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು. ಕೇವಲ ವ್ಯಯಕ್ತಿಕ ಪ್ರತಿಷ್ಠೆಗಳೊಂದಿಗೆ ಕೈಜೋಡಿಸಿ ಪರಸ್ಪರ ಹೊಡೆದಾಡುವುದು ಯಾವ ಸಂದೇಶ ರಾಷ್ಟ್ರದ ಜನತೆಗೆ ನೀವು ಕೊಡುತ್ತಿದ್ದೀರಾ ಎಂಬ ಯಕ್ಷಪ್ರಜ್ಞೆ ನಿಮಗೆ ತಿಳಿಯದೆ ಇದು ಸಾರ್ವಜನಿಕರ ಮಹತ್ವದ ಪ್ರಶ್ನೆಯಾಗಿದೆ.
ಇತ್ತೀಚಿಗೆ ಬೀದರ್ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ಸಚಿವ ಈಶ್ವರ್ ಖಂಡ್ರೆ ಮತ್ತು ಇನ್ನೊಬ್ಬ ಸಚಿವ ರಹೀಮ್ ಖಾನ್ ಎದುರು ರಣರಂಗವೇ ನಡೆದುಹೋಯಿತು. ಪೊಲೀಸ್ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ದೊಡ್ಡ ಅಹಿತಕರ ಘಟನೆಗೆ ತಡೆಹಿಡಿಯಲಾಯಿತು ಎನ್ನಲಾಗಿದೆ. ಹುಮ್ನಾಬಾದ ಪ್ರತಿನಿಧಿಗಳ ನಾಯಕ ಶಾಸಕ ಸಿದ್ದಲಿಂಗ ಪಾಟೀಲ್ ಮತ್ತು ಭೀಮರಾವ ಪಾಟೀಲ್ ಜಗಳದ ಪ್ರಸಂಗ ಇಡೀ ದೇಶದ ಗಮನ ಸೆಳೆದಿದೆ, ರಾಜ್ಯದ ಜನತೆ ನಾಚಿಕೆ ಪಡುವಂತಹ ಸನ್ನಿವೇಶ ವೊಂದು ಜರಗಿ ಹೋಗಿದೆ ಎಲ್ಲಿಯವರೆಗೆ ಜನರು ಸಹಿಸಿಕೊಳ್ಳಬೇಕು ಹೇಳಿ ರಾಜಕಾರಣಿಗಳೇ.
ಇದೇ ತರಹ ಅಥಣಿಯಲ್ಲಿ ಲಕ್ಷ್ಮಣ ಸೌದಿ ಪರ ಹಾಗೂ ವಿರುದ್ಧ ಪ್ರತ್ಯೇಕ ಪ್ರತಿಭಟನೆಗಳು ಜರಗಿ ಕಾರ್ಯಕರ್ತರು ಹೊಡೆದಾಡಿದ ವಾತಾವರಣ ನಡೆದಿತ್ತು. ಕೇವಲ ಬಸನಗೌಡ ಬಾರ್ದಲಿಯವರಿಗೆ ಭಾಷಣ ಮಾಡಲು ಅವಕಾಶ ನೀಡದಿದ್ದಕ್ಕೆ ಈ ಘಟನೆ ನಡೆಯಿತು.
ಇನ್ನು ಬಳ್ಳಾರಿಯಲ್ಲಿ ಬ್ಯಾನರ್ ವಿವಾದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮುಕಿ ಒಂದು ದೊಡ್ಡ ಸಮರಕ್ಕೆ ನಾಂದಿ ಹಾಡಿ ಒಬ್ಬ ಕಾರ್ಯಕರ್ತನು ಪ್ರಾಣ ಕಳೆದುಕೊಂಡಿದ್ದು ಎಂತಹ ಅಪಾಯಕಾರಿ ಬೆಳವಣಿಗೆ ನಡೆದಿದೆ. ಜನಪ್ರತಿನಿಧಿಗಳು ತಾಳ್ಮೆ ಕಳೆದುಕೊಳ್ಳದೆ ಇಂತಹ ಹೈಡ್ರಾಮ ಗಳಿಗೆ ಬ್ರೇಕ್ ಹಾಕಬೇಕು .
ಇನ್ನು ಕೆಲವು ರಾಜಕಾರಣಿಗಳು ತಮ್ಮ ಅಧಿಕಾರದ ದಾಖಲೆ ಮುರಿದು ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ತಲ್ಲಿನರಾಗಿದ್ದಾರೆ. ಜನತೆಯ ಮೂಲಭೂತ ಅಭಿವೃದ್ಧಿಗಳ ಕಡೆಗೆ ಗಮನಹರಿಸಲು ಯಾರಿಗೆ ಸಮಯವಿದೆ. ಇನ್ನು ನಮ್ಮ ರಾಜ್ಯದ ಸರ್ಕಾರಿ ಅಧಿಕಾರಿಗಳು ಜನತೆಯ ಅಭಿವೃದ್ಧಿ ಕಾರ್ಯ ಮಾಡದೇ ರಾಜಕಾರಣಿಗಳನ್ನು ಸಂತೋಷಪಡಿಸುವುದರಲ್ಲಿ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಜನತೆಯ ಸಮಸ್ಯೆ ಯತ್ತ ಕ್ರಮ ಕೈಕೊಳ್ಳಿ..


79
2160 views