logo

*ಗೊರಜನಾಳ ದಂಪತಿಗಳಿಗೆ ಅಭಿನಂದನ ಸಮಾರಂಭ*

*ಗೊರಜನಾಳ ದಂಪತಿಗಳಿಗೆ ಅಭಿನಂದನ ಸಮಾರಂಭ*

ಇಳಕಲ್ : ಕಳೆದ ೩೮ ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಒಂದು ರಜೆ ಇಲ್ಲದೆ ಸಾರ್ಥಕ ಸೇವೆಗೈದ ಜಗದೀಶ ಶರಣಪ್ಪ ಗೊರಜನಾಳ ಅವರ ಧರ್ಮಪತ್ನಿ ಶೋಭಾ (ಗೌರಮ್ಮ) ಜಗದೀಶ ಗೊರಜನಾಳ (ಕುಂಟೋಜಿ) ಅವರು ೩೫ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸಹಶಿಕ್ಷಕಿಯಾಗಿ ಸಾರ್ಥಕ ಸೇವೆಗೈದ ದಂಪತಿಗಳಿಗೆ ಸೇವಾ ನಿವೃತ್ತಿಯ ಅಭಿನಂದನ ಸಮಾರಂಭವು ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು.
ಹನುಮಸಾಗರದ ಪಿ.ಡಿ.ಒ ನಿಂಗರಾಜ ಮೂಲಿಮನಿ ಅವರ ಪತ್ನಿ ವಿದ್ಯಾ ಮೂಲಿಮನಿ ಅವರು ಏರ್ಪಡಿಸಲಾದ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸು ಮೂಲಕ ಉದ್ಘಾಟಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಇಳಕಲ್ ತಾಲೂಕ ಘಟಕದ ನಿಕಟ ಪೂರ್ವ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ ಶಿಕ್ಷಕರು ನಾಡಿಗೇನೇ ಮಾದರಿ ಅವರು ಎಲ್ಲರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಎಂದರು.
ಅಭಿನಂದನ ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಹಳ್ಳೂರ, ರಾಜು ದೇಸಾಯಿ, ಬಾಲನಗೌಡ ಪಾಟೀಲ, ಶೇಖಣ್ಣ ಬಾವಿಕಟ್ಟಿ, ಪ್ರಭು ನಾಗೂರ ಮೊದಲಾದವರು ಮಾತನಾಡಿದರು ಹಿರಿಯ ಪತ್ರಕರ್ತ ಮಹಾಂತೇಶ ಗೊರಜನಾಳ ಅಧ್ಯಕ್ಷತೆ ವಹಿಸಿದ್ದರು.
ಗೊರಜನಾಳ ಮತ್ತು ಕುಂಟೋಜಿ ಕುಟುಂಬದ ಪರಿವಾರದವರು ಶಿಕ್ಷಕರು ಇನ್ನಿತರ ಗಣ್ಯರು ಶಿವ ನಿವೃತ್ತಿಗೊಂಡ ದಂಪತಿಗಳಿಗೆ ಗೌರವಿಸಿ ಸತ್ಕರಿಸಿ ಆಶೀರ್ವದಿಸಿದರು. ಮುತ್ತಣ್ಣ ಬೀಳಗಿ ಪ್ರಾರ್ಥಿಸಿದರು, ನಿಂಗರಾಜ ಮೂಲಿಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು , ಸುಮಾ ತೋಟದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಸಂಗಣ್ಣ ಹುಂಡೇಕಾರ ನಿರೂಪಿದರು, ಶಿವರಾಜ ಮುಧೋಳ ವಂದಿಸಿದರು.
ವರದಿ ಕಾಸಿಂಅಲಿಶಾ ಮಕಾನದಾರ್

208
5634 views