logo

ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು : ಶಾಸಕ ಕಾಶಪ್ಪನವರ

ಇಲಕಲ್. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು : ಶಾಸಕ ಕಾಶಪ್ಪನವರ

ಇಳಕಲ್: ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಎಂದು ರಾಜ್ಯ ವೀರಶೈವ ಲಿಂಗಾತ ಅಭಿವೃದ್ಧಿ ನಿಗಮದ ಅಧ್ಯಕ್ಷ , ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಹೇಳಿದರು.
ನಗರದ ಅನುಭವ ಮಂಟಪದಲ್ಲಿ ಇಳಕಲ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾತ್ಕಾಲಿಕ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಪತ್ರಕರ್ತರು ಸತ್ಯಾಸತ್ಯತೆಯನ್ನು ಜನರೆದುರು ಇಡುವ ಕೆಲಸ ಮಾಡಬೇಕು ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ತಿದ್ದುವ ಧೈರ್ಯ ಮತ್ತು ಶಕ್ತಿ ಲೇಖನಿಗೆ ಇದೆ ಎಂದರು.
ಪತ್ರಿಕಾ ಭವನ ನಿರ್ಮಾಣಕ್ಕಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸ್ವಂತ ಕಟ್ಟಡ (ಪತ್ರಿಕಾ ಭವನ) ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯವಾಗಿದೆ. ಈ ಕುರಿತು ನಗರಸಭೆ ಪೌರಾಯುಕ್ತÀ ಶ್ರೀನಿವಾಸ ಜಾಧವ ಅವರಿಗೆ ಸ್ಥಳ ನಿಗದಿಪಡಿಸುವಂತೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಳಕಲ್ ತಾಲೂಕ ಘಟಕದ ನೂತನ ಅಧ್ಯಕ್ಷ ಶಾಂತಣ್ಣ ಸರಗಣಾಚಾರಿ ಪ್ರಧಾನ ಕಾರ್ಯದರ್ಶಿ ಗುರು ಗಾಣಿಗೇರ, ಶರಣಪ್ಪ ಆಮದಿಹಾಳ, ಅರುಣ ಬಿಜ್ಜಲ, ಸುಧಾರಾಣಿ ಸಂಗಮ, ರೇಷ್ಮಾ ಮಾರನಬಸರಿ ಮೊದಲಾದವರು ವೇದಿಕೆಯಲ್ಲಿದ್ದರು, ಬಸವರಾಜ ಮಠದ ಸ್ವಾಗತಿಸಿದರು, ಜಾಕೀರಹುಸೇನ ತಾಳಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಭೀಮಣ್ಣ ಗಾಣಗೇರ ಮನವಿ ನಿವೇದಿಸಿದರು, ಕೆ.ಎಚ್. ಸೋಲಾಪೂರ ನಿರೂಪಿಸಿದರು, ವೀರೇಶ ಸಿಂಪಿ ವಂದಿಸಿದರು.



೨. ಗೊರಜನಾಳ ದಂಪತಿಗಳಿಗೆ ಅಭಿನಂದನ ಸಮಾರಂಭ

ಇಳಕಲ್ : ಕಳೆದ ೩೮ ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಒಂದು ರಜೆ ಇಲ್ಲದೆ ಸಾರ್ಥಕ ಸೇವೆಗೈದ ಜಗದೀಶ ಶರಣಪ್ಪ ಗೊರಜನಾಳ ಅವರ ಧರ್ಮಪತ್ನಿ ಶೋಭಾ (ಗೌರಮ್ಮ) ಜಗದೀಶ ಗೊರಜನಾಳ (ಕುಂಟೋಜಿ) ಅವರು ೩೫ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸಹಶಿಕ್ಷಕಿಯಾಗಿ ಸಾರ್ಥಕ ಸೇವೆಗೈದ ದಂಪತಿಗಳಿಗೆ ಸೇವಾ ನಿವೃತ್ತಿಯ ಅಭಿನಂದನ ಸಮಾರಂಭವು ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು.
ಹನುಮಸಾಗರದ ಪಿ.ಡಿ.ಒ ನಿಂಗರಾಜ ಮೂಲಿಮನಿ ಅವರ ಪತ್ನಿ ವಿದ್ಯಾ ಮೂಲಿಮನಿ ಅವರು ಏರ್ಪಡಿಸಲಾದ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸು ಮೂಲಕ ಉದ್ಘಾಟಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಇಳಕಲ್ ತಾಲೂಕ ಘಟಕದ ನಿಕಟ ಪೂರ್ವ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ ಶಿಕ್ಷಕರು ನಾಡಿಗೇನೇ ಮಾದರಿ ಅವರು ಎಲ್ಲರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಎಂದರು.
ಅಭಿನಂದನ ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಹಳ್ಳೂರ, ರಾಜು ದೇಸಾಯಿ, ಬಾಲನಗೌಡ ಪಾಟೀಲ, ಶೇಖಣ್ಣ ಬಾವಿಕಟ್ಟಿ, ಪ್ರಭು ನಾಗೂರ ಮೊದಲಾದವರು ಮಾತನಾಡಿದರು ಹಿರಿಯ ಪತ್ರಕರ್ತ ಮಹಾಂತೇಶ ಗೊರಜನಾಳ ಅಧ್ಯಕ್ಷತೆ ವಹಿಸಿದ್ದರು.
ಗೊರಜನಾಳ ಮತ್ತು ಕುಂಟೋಜಿ ಕುಟುಂಬದ ಪರಿವಾರದವರು ಶಿಕ್ಷಕರು ಇನ್ನಿತರ ಗಣ್ಯರು ಶಿವ ನಿವೃತ್ತಿಗೊಂಡ ದಂಪತಿಗಳಿಗೆ ಗೌರವಿಸಿ ಸತ್ಕರಿಸಿ ಆಶೀರ್ವದಿಸಿದರು. ಮುತ್ತಣ್ಣ ಬೀಳಗಿ ಪ್ರಾರ್ಥಿಸಿದರು, ನಿಂಗರಾಜ ಮೂಲಿಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು , ಸುಮಾ ತೋಟದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಸಂಗಣ್ಣ ಹುಂಡೇಕಾರ ನಿರೂಪಿದರು, ಶಿವರಾಜ ಮುಧೋಳ ವಂದಿಸಿದರು.
ವರದಿ ಕಾಸಿಂಅಲಿಶಾ ಮಕಾನದಾರ್

103
3321 views