logo

1996–97 ಮತ್ತು 1999 ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳಿಂದ ಅಪರೂಪದ ಕಾರ್ಯಕ್ರಮ “ಗುರುವಿನ ಸ್ಥಾನ ತಂದೆ-ತಾಯಿಯ ನಂತರ ಅಮೂಲ್ಯ” – ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು

ಕೊಣ್ಣೂರು:
ಪ್ರಪಂಚದಲ್ಲಿ ಗುರುವಿಗೆ ಇರುವ ಸ್ಥಾನ ಅತ್ಯಂತ ಅಮೂಲ್ಯವಾಗಿದ್ದು, ತಂದೆ–ತಾಯಿಯ ನಂತರದ ಸ್ಥಾನ ಗುರುವಿಗೇ ಸೇರಿದೆ ಎಂದು ಶ್ರೀ ಖಾಸ್ಥತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದ ಶ್ರೀ ಬಲವಂತ್ರಾಯ ಹಡಲಗೇರಿ ಪ್ರೌಢಶಾಲೆಯ ಆವರಣದಲ್ಲಿ, ಕೊಣ್ಣೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 1996ನೇ ಸಾಲಿನ 7ನೇ ತರಗತಿ ಹಾಗೂ ಶ್ರೀ ಬಲವಂತ್ರಾಯ ಹಡಲಗೇರಿ ಪ್ರೌಢಶಾಲೆಯ 1999ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳು ಸಂಯುಕ್ತವಾಗಿ ಆಯೋಜಿಸಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಏಳಿಗೆ ಸಾಧಿಸಬೇಕೆಂದರೆ ವಿದ್ಯೆಯೇ ಏಕೈಕ ದಾರಿ. ಆ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸಿದ ಶಿಕ್ಷಕರ ಪರಿಶ್ರಮವೇ ಇಂದು ಗುರು ವಂದನಾ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು. ವಿದ್ಯಾರ್ಥಿಗಳು ಗುರಿ ನಿಶ್ಚಯಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಸಾಗಿದರೆ ಉನ್ನತ ಮಟ್ಟ ತಲುಪುವುದು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಸಾಹಿತಿ ಬಿ.ಆರ್. ಪೊಲೀಸಪಾಟೀಲ, ಗುರುವಿನ ಮಾರ್ಗದರ್ಶನದಲ್ಲಿ ಸಾಗಿದ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಸುಂದರವಾಗಿರುತ್ತದೆ. ಆಸ್ತಿ–ಅಂತಸ್ತು ಕ್ಷಣದಲ್ಲಿ ಕಳೆದು ಹೋಗಬಹುದು, ಆದರೆ ಕಲಿತ ವಿದ್ಯೆ ಜೀವನಪೂರ್ತಿ ಆಧಾರವಾಗಿರುತ್ತದೆ. ಗುರುಗಳನ್ನು ಸನ್ಮಾನಿಸುವ ಈ ಕಾರ್ಯಕ್ರಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿದೆ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರು) ಮಾತನಾಡಿ, ವಿದ್ಯಾರ್ಥಿಗಳು ಇಂದು ವಿಭಿನ್ನ ವೃತ್ತಿ ಹಾಗೂ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ ಗುರುಗಳಿಗೆ ಗೌರವ ಸಲ್ಲಿಸಿರುವ ಈ ಕಾರ್ಯಕ್ರಮ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ವೇ. ಶ್ರೀನಾಥಯ್ಯ ಹಿರೇಮಠ, ಉಪನ್ಯಾಸಕ ಐ.ಬಿ. ಹಿರೇಮಠ, ಮುತ್ತುರಾಜ ಕೊಲಕಾರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ಪುಷ್ಪಗಳಿಂದಲೇ ಭವ್ಯ ಸ್ವಾಗತ ನೀಡಿ ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು.
ಈ ವೇಳೆ ಮುಖ್ಯೋಪಾಧ್ಯಾಯ ಡಿ.ಆರ್. ಚವ್ಹಾಣ, ಕೆ.ವೈ. ಚಲವಾದಿ, ಕೆಜಿವಿಎ ಸಂಘದ ನಿರ್ದೇಶಕ ಡಾ. ಬಸವರಾಜ ಅಸ್ಕಿ, ನಿವೃತ್ತ ಶಿಕ್ಷಕರಾದ ಬಿ.ಎಸ್. ಐನಾಪೂರ, ಆರ್.ಸಿ. ಬಿರಾದಾರ, ಎಂ.ಜಿ. ಪಾಟೀಲ, ಎಸ್.ಎಸ್. ಸಂಗನಗೌಡರ, ಜಿ.ಕೆ. ಚಟ್ಟರಕಿ, ವಿ.ಡಿ. ನಾಗರಾಳ, ಎಸ್.ಜಿ. ಗುಣಕಿ, ಎ.ಎಸ್. ಕುಲಕರ್ಣಿ, ಆರ್.ಟಿ. ಲಮಾಣಿ, ಡಿ.ಕೆ. ರಾಠೋಡ, ಎಂ.ಪಿ. ಶೆಟ್ಟರ, ಎಸ್.ಬಿ. ಪೂಜಾರಿ, ಎಂ.ಎನ್. ಅಸ್ಕಿ, ಎಸ್.ಬಿ. ಬಿರಾದಾರ, ಎಂ.ಎಂ. ಮುರಾಳ, ಪಿ.ಸಿ. ಬಿರಾದಾರ, ಎಂ.ಸಿ. ಕೊಣ್ಣೂರ ಸೇರಿದಂತೆ ಅನೇಕ ಗುರುಗಳು ಉಪಸ್ಥಿತರಿದ್ದರು.
1999ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿನಿಯರಾದ ಸರೋಜಾ ಹಡಲಗೇರಿ, ಶಾಂತ ನಾಡಗೌಡ, ರೇಣುಕಾ ಪಡೇಕನೂರು, ಶಿವಮ್ಮ ಯಾಳವಾರ, ಗೀತಾ ಪಾಟೀಲ, ಅನ್ನಪೂರ್ಣ ನೀರಿಲಗಿ, ರೇಣುಕಾ ಅಸ್ಕಿ, ಸರೋಜಾ ಅಸ್ಕಿ, ಶಾಯೀರ ಬಾನು ಅತ್ತಾರ್, ಜಗದೇವಿ ನಾಟಿಕರ್, ಮಲ್ಲಮ್ಮ ಬಿರಾದಾರ್, ವಸುಂದರ ಚೌಹಾನ್, ಕವಿತಾ ಹಡಲುಗೇರಿ, ಜಯಮ್ಮ ಚವನಬಾವಿ, ರೇಣುಕಾ ತಂಗಡಗಿ ಹಾಗೂ ವಿದ್ಯಾರ್ಥಿಗಳಾದ ಬೀರಪ್ಪ ಕುಂದರಗಿ, ಶಿವರಾಜ್ ಅಸ್ಕಿ, ಶಿವಶಂಕರ್ ಚಲವಾದಿ, ವಿಶ್ವನಾಥ್ ಪೊಲೀಸ್ ಪಾಟೀಲ್, ಚಿದಾನಂದ ಹುಲ್ಲೂರು, ಪ್ರಭು ಹುನಕುಂಟೆ, ವೀರೇಶ್ ಅಸ್ಕಿ, ನಾಗೇಶ್ ಗಣಿ, ಸುರೇಶ್ ಬಡಿಗೇರ್, ಮೌಲಾಸಾ ಮಕಾಂದರ್, ಸೋಮು ಕೋಟಿ, ಬಸವರಾಜ್ ನಾಯ್ಕೋಡಿ, ದ್ಯಾಮಣ್ಣ ಸೋಮನಾಳ, ಸೋಮನಗೌಡ ಪೊಲೀಸ್ ಪಾಟೀಲ್, ಬಸವರಾಜ್ ಬಾಬಣ್ಣವರ್, ನಾನಾಗೌಡ ಬಿರಾದಾರ್, ಜಗದೀಶ್ ಅಜ್ಜನ್, ಸಂಗಮೇಶ್ ಸಜ್ಜನ್, ದಸ್ತಗೀರ್ ಭಾಷಾ ಘಾಟಿ, ಹುಸೇನಶಾ ಮೂಖಿಹಾಳ, ಚಿದಾನಂದ ಮಾರನಾಳ, ರಾಜಶೇಖರ್ ಕೊಣ್ಣೂರ್, ಸಿದ್ದಯ್ಯ ಹಿರೇಮಠ, ಮಾನಪ್ಪ ಬಡಿಗೇರ್, ಗುರುರಾಜ್ ಹುಲಗಬಾಳ ಸೇರಿದಂತೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತಂದರು.
ಕಾರ್ಯಕ್ರಮಕ್ಕೆ ಅಶೋಕ ಹಡಲಗೇರಿ ಸ್ವಾಗತಿಸಿದರು, ಎಂ.ಎನ್. ಅಸ್ತಿ ನಿರೂಪಿಸಿದರು, ಮುತ್ತುರಾಜ ಕೊಲಕಾರ ವಂದಿಸಿದರು.
ಗುರು–ಶಿಷ್ಯರ ಆತ್ಮೀಯತೆಯನ್ನು ಮತ್ತೆ ಜೀವಂತಗೊಳಿಸಿದ ಈ ಗುರು ವಂದನಾ ಕಾರ್ಯಕ್ರಮ ಎಲ್ಲರ ಮನಸ್ಸು ಗೆದ್ದಿತು.

45
6258 views