
ಶಾಶ್ವತ ನೀರಿಗಾಗಿ ಹೋರಾಟ 900 ಕಿ.ಮಿ ಪಾದಯಾತ್ರೆ ಉಗ್ರ ಹೋರಾಟ
ಕಲಬುರಗಿ ಜಿಲ್ಲೆ ಅಫ್ಜಲ್ ಪುರ್ ತಾಲೂಕಿನ ಬಳ್ಳುಂಡಗಿಯಲ್ಲಿ ಭೀಮಾ ಮಿಷನ್ ಶಾಶ್ವತ ನೀರಾವರಿ ಹೋರಾಟ ಸಮಿತಿ ಮೂರು ಜಿಲ್ಲೆಗಳಾದ ಕಲಬುರಗಿ ಯಾದ್ಗೀರ್ ಮತ್ತು ಬೀದರ್ ಜಿಲ್ಲೆಗಳಲ್ಲಿ ನೀರಾವರಿ ಅಧ್ಯಯನ ಪ್ರತಿಭಟನೆ ಸುಮಾರು 900 ಕಿ.ಮೀ ಉದ್ದದ ಪಾದಯಾತ್ರೆ ಪ್ರತಿಭಟನೆ ನಡೆಸಲಾಗುವುದು. ಸದರಿ ಮೂರು ಜಿಲ್ಲೆಗಳಲ್ಲಿ 11 ಜಲಾಶಯಗಳು ಹೊಂದಿದ್ದು ಕಾಲ್ವೆಗಳಲ್ಲಿ ನೀರದ್ದರೂ ಕೂಡ ರೈತರಿಗೆ ಸಕಾಲಕ್ಕೆ ನೀರು ಸರಬರಾಜು ಮಾಡದೆ ನೀರಾವರಿ ಇಲಾಖೆ ಅಧಿಕಾರಿಗಳಿಂದ ರೈತರ ವಿರುದ್ಧ ನಿರ್ಲಕ್ಷ ಧೋರಣೆ ತಾಳಲಾಗುತ್ತದೆ ಎಂದು ರಾಜ್ಯ ಕೃಷಿ ಕಾರ್ಮಿಕರ ರೈತ ಸಂಘದ ಅಧ್ಯಕ್ಷ ಗಿರೀಶ್ ಗೌಡ ಇನಾಮ್ದಾರ್ ಮತ್ತು ಭೀಮಾ ಮಿಷನ್ ಅಧ್ಯಕ್ಷ ಭೀಮ್ಶೆಟ್ಟಿ ಮುಕ್ಕಾ ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲಾಧ್ಯಂತ ಆರು ಜಲಾಶಯಗಳು ಹೊಂದಿದ್ದು , 14.848 ಟಿಎಂಸಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇದರಿಂದ1.67 ಲಕ್ಷ ಎಕೆರೆ ನೀರಾವರಿ ಭೂಮಿ ಆಗಬೇಕಾಗಿತ್ತು. ಅದರಂತೆ ಯಾದಗಿರಿಯಲ್ಲಿ ಎರಡು ಜಲಾಶಯಗಳಿದ್ದು 639 ಟಿಎಂಸಿ ಸಾಮರ್ಥ್ಯ ಹೊಂದಿದ್ದು 8,000 ಎಕರೆ ನೀರಾವರಿ ಹೊಂದಬೇಕಾಗಿತ್ತು. ಇನ್ನು ಬೀದರ್ ಜಿಲ್ಲೆಯಲ್ಲಿ ಮೂರು ಜಲಾಶಯಗಳಿದ್ದು 9.378 ಟಿಎಂಸಿ ಸಾಮರ್ಥ್ಯ ಇದ್ದು 73.95 ಸಾವಿರ ಎಕರೆ ನೀರಾವರಿ ಇರಬೇಕಾಗಿತ್ತು. ದುರದೃಷ್ಟಕರ ವಿಷಯವೇನೆಂದರೆ ನೀರು ಕಾಲುವೆಗಳಲ್ಲಿದ್ದರೂ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ ಎಂದಲಾಗಿದೆ.
ಸರಕಾರ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ಸುಳ್ಳು ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ. ಆದ್ದರಿಂದ ಬಳ್ಳುಂಡಗಿ ಹತ್ತಿರದಲ್ಲಿ ಗಂಗಾ ಪೂಜೆ ನೆರವೇರಿಸಿ ನಂತರದಲ್ಲಿ ಕಲಬುರಗಿಯಲ್ಲಿ 558 km ಬೀದರ್ ಜಿಲ್ಲೆಯಲ್ಲಿ 373 km ಯಾದಗಿರಿಯಲ್ಲಿ 25 ಕಿ.ಮೀ ಹೀಗೆ ಒಟ್ಟು 906 ಕಿಲೋಮಿಟರ್ ನೀರಾವರಿ ಕಾಲುವೆ ಗಳ ಮಾರ್ಗದಲ್ಲಿ ಪಾದಯಾತ್ರೆ ಹೊರಟು ಹೆರೂರ್ ಹತ್ತಿರದ ಬೆಣ್ಣಿತೊರಾ ಡ್ಯಾಂ ಸಮೀಪ ಮಾರ್ಚ್ 30 ರಂದು ಪಾದಯಾತ್ರೆ ಕೊನೆಗೊಳ್ಳಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.