logo

*ಹಂಚಾಟೆ ಕುಟುಂಬದವರಿಂದ ವಿದ್ಯಾರ್ಥಿಗಳಿಗೆ ದೋಸೆ ಕೇಕ್ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಿ ಹೊಸ ವರ್ಷ ಆಚರಿಸಿದರು*

*ಹಂಚಾಟೆ ಕುಟುಂಬದವರಿಂದ ವಿದ್ಯಾರ್ಥಿಗಳಿಗೆ ದೋಸೆ ಕೇಕ್ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಿ ಹೊಸ ವರ್ಷ ಆಚರಿಸಿದರು*
ಇಳಕಲ್ : ಬಸವೇಶ್ವರ ಶಿಕ್ಷಣ ಸಮಿತಿಯವರು ನಡೆಸುತ್ತಿರುವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷದ ಆಚರಣೆ ಅಂಗವಾಗಿ ಆಯುರ್ವೇದ ವೈದ್ಯ ದಿ. ಸೋಮನಾಥ ಹಂಚಾಟೆ ಅವರ ಸ್ಮರಣಾರ್ಥ ಕಳೆದ 22 ವರ್ಷಗಳಿಂದಲೂ ಡಾ. ಮಹೇಶ ಹಂಚಾಟೆ ಹಾಗೂ ಅವರ ಕುಟುಂಬ ಪರಿವಾರದವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡ ಮಾಡಲಾದ ದೋಸೆ, ಕೇಕ್, ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಮಾತನಾಡುತ್ತಾ ಡಾ. ಹಂಚಾಟೆ ಕುಟುಂಬದವರ ಸೇವೆ ಶ್ಲಾಘನೀಯ ಎನ್ನುತ್ತಾ ಉಂಡು

ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಬರಲೆಂದು ಜಿ.ಎಂ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು. ಅತಿಥಿಗಳಾಗಿ ಸಮಿತಿಯ ಕಾರ್ಯದರ್ಶಿ ರಾಜೇಶ್ವರ ಎಂ. ಹಂಚಾಟೆ ಮಾತನಾಡಿ ಹೊಸ ವರ್ಷವನ್ನು ಜೀವನದಲ್ಲಿ ಒಂದೇ ದಿನ ಹರ್ಷವನ್ನು ಆಚರಿಸದೆ ವರ್ಷದಕ್ಕೂ ಹರ್ಷವನ್ನು ಆಚರಿಸಿಕೊಂಡು ಬನ್ನಿ ಎಂದರು. ನಿವೃತ್ತ ಶಿಕ್ಷಕ ಎಂ.ಎಸ್. ಅಂಗಡಿ ಮಾತನಾಡಿ ಹಂಚಿಕೊಂಡು ತಿನ್ನುವ ಪದ್ಧತಿಯನ್ನು ಪ್ರತಿ ವರ್ಷವೂ ಹಂಚಾಟೆ ಕುಟುಂಬದವರು ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಸಮಿತಿ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಅಗ್ನಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕೆಂದರು. ಡಾ. ಹಂಚಾಟೆ ಪರಿವಾರದವರು ಉಚಿತವಾಗಿ ಕೊಡ ಮಾಡಲಾದ ಅಲ್ಪೋಪ ಆಹಾರ ನೋಟು ಪುಸ್ತಕ ಮತ್ತು ಪೆನ್ನುಗಳನ್ನು ಡಾ. ಮಹೇಶ ಹಂಚಾಟೆ, ಮಹಾಂತೇಶ ಗೊರಜನಾಳ, ಗುರುನಗೌಡ ಗೌಡರ,ಸಮಾಜ ಸೇವಕ ರಮೇಶ ಹಂಚಾಟೆ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ನಾರಣಪ್ಪ ಅಂಬೋರೆ, ವಿದ್ಯಾರ್ಥಿಗಳಿಗೆ ವಿತರಿಸಿದರು. ತನುಶ್ರೀ ಪಾತ್ರೋಟಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ, ಲಕ್ಷ್ಮಿ ಬಿಂಜವಾಗಿ ಸ್ವಾಗತಿಸಿದರು, ಶಾಲೆಯ ಮುಖ್ಯಗುರು ಸಿದ್ದು ಕೊಪ್ಪದ, ವಿದ್ಯಾರ್ಥಿ ಪ್ರತಿನಿಧಿ ಪ್ರವೀಣ ಮಧುರಕರ ವೇದಿಕೆಯಲ್ಲಿದ್ದರು, ಪುಷ್ಪಾವತಿ ಕುಂಬಾರ ಮತ್ತು ರಮಜಾನಬಿ ನದಾಫ ನಿರೂಪಿಸಿದರು,, ಬಸ್ಸಮ್ಮ ಕಕ್ಕಸಗೇರಿ ವಂದಿಸಿದರು.

ವರದಿ ಕಾಸಿಂಅಲಿಶಾ ಮಕಾನದಾರ್

4
105 views