logo

ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೆಲವು ಕೈದಿಗಳಿಗೆ ರಾಜಾತಿಥ್ಯ ಕಠಿಣ ಕ್ರಮಕ್ಕೆ ನಿಯಮ ಪಾಲನೆ : ಕಾನೂನು ಕ್ರಮ

ಕಲಬುರಗಿ ನಗರದ ಸೆಂಟ್ರಲ್ ಜೈಲಿನಲ್ಲಿ ಕೆಲವು ಕೈದಿಗಳಿಗೆ ಮಧ್ಯ , ಸಿಗರೇಟ್, ಇಸ್ಪೀಟ್ ಆಟದ ಎಲೆಗಳು ಮತ್ತು ಮೊಬೈಲ್ ಗಳನ್ನು ಕೈದಿಗಳಿಗೆ ಕಾರಾಗೃಹದ ಸಿಬ್ಬಂದಿಗಳೇ ಕೊಡುತ್ತಾರೆ ಎಂಬ ಗಂಭೀರ ಆರೋಪದ ಹಿನ್ನೆಲೆ ಅನೈತಿಕ ಚಟುವಟಿಕೆಗಳು ನಡೆಯುವ ವಿಡಿಯೋ ವೈರಲ್ಗಳು ಸಹ ಆಗಿದ್ದು ಕೈದಿಗಳು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಎಲ್ಲರಿಗೂ ತಿಳಿದಂತ ವಿಷಯ.ಜೈಲಿನಲ್ಲಿ ಲಂಚ ನೀಡಿದರೆ ಬೇಕಾದ ಸೌಲಭ್ಯ ಸಿಗುವುದರಿಂದ ಜೈಲಿನ ಭದ್ರತೆ ಹಾಗೂ ಕಾರ್ಯನಿರ್ವಹಣೆ ಬಗ್ಗೆ ತೊಂದರೆಯಾಗುತ್ತಿದೆ.
ಜೈಲಿನ್ ಸಿಬ್ಬಂದಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗುತ್ತಿದ್ದು ಪಿಎಸ್ಐ ಅಕ್ರಮದ ಕಿಂಗ್ ಪಿನ್ ಎಂದೆ ಪ್ರಖ್ಯಾತಿಯಾದ ಆರ್ ಡಿ ಪಾಟೀಲ್ ಅವರ ವಿರುದ್ಧ ಒಂದು ತಿಂಗಳಲ್ಲಿ ಎರಡು ಎಫ್ಐಆರ್ ಪ್ರಕರಣ ದಾಖಲಾಗಿದ್ದು ಫರ ಹತಾಬಾದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ನಗರದ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್ ಡಿ ಜೈಲಿಗೆ ಭೇಟಿ ನೀಡಿ ಅಲ್ಲಿನ ಆಗುಹೋಗುಗಳ ಬಗ್ಗೆ ನಿಗಾ ಇಟ್ಟು ಜೈಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಕಾರಾಗೃಹದ ನೂತನ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಕಾರಾಗೃಹಗಳಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲು ಜೈಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಜೈಲಿನಲ್ಲಿ ಕಠಿಣ ಕಾನೂನು ಕ್ರಮಪಾಲನೆ ಪಾಲಿಸುವ ವಿಶ್ವಾಸ ನಾಗರಿಕರಿಗೆ ಇದೆ ಎನ್ನಲಾಗಿದೆ.

47
1335 views