logo

*ಇಳಕಲ್ಲಿನ ಐದು ಜನರಿಗೆ ವೀರ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ವಿತರಣೆ*

*ಇಳಕಲ್ಲಿನ ಐದು ಜನರಿಗೆ ವೀರ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ವಿತರಣೆ*
ಇಳಕಲ್ : ನಗರದ ಸುಪ್ರಸಿದ್ಧ ಪತ್ರಕರ್ತ ಮತ್ತು ಸುಪ್ರಸಿದ್ಧ ಇಳಕಲ್ ಸೀರೆ ಉತ್ಪಾದಕರು ಮೆಹಬೂಬ್ ದೋಟಿಹಾಳ. ಕಾಸಿಂಅಲಿಶಾ ಮಕಾನದಾರ್ ಪತ್ರಿಕೋದ್ಯಮ ಸೇವೆ ಹಾಗೂ ಸಮಾಜ ಸೇವೆ ಮಹಬೂಬ್ ಇಮಾಮ್ ಹುಸೇನ್ ಆಗ್ರಾ. ಸಮಾಜ ಸೇವೆ ವಿಕಲಚೇತನರ ಮುಖಂಡ ಹುಸೇನ್ ಆರ್ ಮುದಗಲ್. ಸಮಾಜ ಸೇವೆಅಧಿಕ ರಕ್ತದಾನ ಮಾಡಿದ ಯಾಕೂಬಸಾಬ ಆರ್ ಎಲಿಗಾರ ಅವರಿಗೆ ವೀರ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸತ್ಕರಿಸಲಾಯಿತು.
ಯಾದಗಿರಿಯ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಭಾಂಗಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಬೆಂಗಳೂರು ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಮೂಕ ನಾಯಕ ಕಿರು ಚಲನಚಿತ್ರದ ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು
ಯಾದಗಿರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಕೊಟ್ಟಿ ಅಧ್ಯಕ್ಷತೆ ವಹಿಸಿದರು ಪತ್ರಿಕೆಯ ಸಂಪಾದಕ ಡಾ. ಜಲಾಲುದ್ದೀನ್ ಅಕ್ಬರ್ ನೇತೃತ್ವ ವಹಿಸಿದರು ಮಾಣಿಕ್ಯ ರೆಡ್ಡಿ ಗೌಡ ದರ್ಶನಾಪುರ ಪ್ರಶಸ್ತಿ ವಿತರಿಸಿದರು ಅಮೀನಗಡದ ಪತ್ರಕರ್ತ ಸಾಹಿತಿ ಹಸನ್ ಡೊಂಗ್ರಿ ಎಚ್ ಬೇಪಾರಿ ಕಾರ್ಯಕ್ರಮ ನಿರೂಪಿಸಿರು ಮಾತೃಭೂಮಿ ಪತ್ರಿಕೆ ಸಂಪಾದಕರು ಶೇಖ್ ನಿಸಾರ ಧೀನ್ ವಂದಿಸಿದರು.
ವರದಿ: ಕಾಸಿಂಅಲಿಶಾ ಮಕಾನದಾರ್

160
5870 views