logo

ಡಿ.30ರಂದು ಅನಧಿಕೃತ ಶಾಲೆಗಳು, ವಸತಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಡಿಪಿಐ ಕಚೇರಿಗೆ ಮುತ್ತಿಗೆ; ವಿಶ್ವಾರಾಧ್ಯ ದಿಮ್ಮೆ

ಯಾದಗಿರಿ: ಅಕ್ರಮ ಅನಧಿಕೃತ ಶಾಲೆಗಳು ವಸತಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸೆಂಬರ್ 30 ರಂದು ಡಿಡಿಪಿಐ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಈಗಾಗಲೇ ಹಲವು ಮನವಿ ಆಗ್ರಹ ಒತ್ತಾಯ ನಂತರ ಶಹಾಪೂರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ವಿರುದ್ಧ ಮುತ್ತಿಗೆ ಹಾಕಲು ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವೆಂಬರ್ ತಿಂಗಳಲ್ಲಿ ರಸ್ತೆ ತಡೆ ಮಾಡಿದ್ದಲ್ಲದೇ ಡಿಸೆಂಬರ್ 10 ರಂದು ಶಹಾಪೂರದಲ್ಲಿ ಬಿಇಓ ಕಚೇರಿ ಎದುರು ಧರಣಿ ನಡೆಸಲಾಗಿತ್ತು ಆಗ ಲಿಖಿತ ರೂಪದಲ್ಲಿ ಭರವಸೆ ನೀಡಿದ ಅಧಿಕಾರಿಗಳು ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.
ತಕ್ಷಣ ಕ್ರಮ ಜರುಗಿಸದೇ ಇದ್ದಲ್ಲಿ ಡಿ. 30 ರಂದು ಮಂಗಳವಾರ ಡಿಡಿಪಿಐ ಕಚೇರಿಗೆ ನಕಸೇ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ನೇತೃತ್ತದಲ್ಲಿ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಅಮರದೀಪ ನಾಯಕ, ಭೀಮು ಪೂಜಾರಿ, ಶ್ರೀದೇವಿ ಕಟ್ಟಿಮನಿ, ಅಬ್ದುಲ್ ಅಜೀಜ್, ಚೆನ್ನಬಸವ ಕನಕ, ಅಬ್ದುಲ್ ಸಾಹುಕಾರ, ನರೇಂದ್ರ ಸೂರ್ಯವಂಶಿ, ಶರಣಪ್ಪ ಕುಂಬಾರ, ಸಿದ್ದು ಪಟ್ಟೇದಾರ, ಮಲ್ಲು ಕಲ್ಮನಿ, ಭೀಮಣ್ಣಗೌಡ, ವೆಂಟೇಶ ಪ್ಯಾಪ್ಲಿ ಅವರು ತಿಳಿಸಿದ್ದಾರೆ.

38
3113 views