logo

ಯಾದಗಿರಿ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು : ಚಂದಪ್ಪ ಮುನಿಯಪ್ಪನೋರ್ ಒತ್ತಾಯ

ಯಾದಗಿರಿ : ನಗರದ ಮುಖ್ಯ ರಸ್ತೆಯಲ್ಲಿ ಭಾರಿವಾಹನಗಳು ಹಾದು ಹೋಗುವುದರಿಂದ ದಿನನಿತ್ಯದ ಟ್ರಾಫಿಕ್ ಜಾಮ್‌ಗಳು, ಅಪರೂಪದ ಸಂಚಾರ ಮತ್ತು ಸುರಕ್ಷತಾ ಸಮಸ್ಯೆಗಳು ನಮ್ಮ ಜೀವನವನ್ನು ಕಷ್ಟಕರಗೊಳಿಸಿವೆ  ಬೈಪಾಸ್ ರಸ್ತೆ ನಿರ್ಮಾಣವು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತದೆ ಎಂದು ಡಿಎಸ್ಎಸ್  ಜಿಲ್ಲಾ ಸಂಘಟನಾ ಸಂಚಾಲಕರು ಚಂದಪ್ಪ ಮುನಿಯಪ್ಪನೋರ್ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಭಾರಿ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್‌ ಉಂಟಾಗಿ ವಿದ್ಯಾರ್ಥಿಗಳು, ರೋಗಿಗಳು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಾರೆ. ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗಿದೆ
ಬೈಪಾಸ್ ರಸ್ತೆಯಿಂದ ನಗರದ ಬಾಹ್ಯ ವ್ಯಾಪಾರ ವಾಹನಗಳು ನೇರವಾಗಿ ಹೊರಗಡೆ ಸಂಚರಿಸಬಹುದು, ಈ ಕೂಡಲೇ ಈ ಸಮಸ್ಯೆಗಳ ಕುರಿತು ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಬೈಪಾಸ್ ರಸ್ತೆ ನಿರ್ಮಿಸಲು ಮನಸ್ಸು ಮಾಡಬೇಕಾಗಿದೆ ಇದರಿಂದ ಸ್ಥಳೀಯ ರಸ್ತೆಗಳು ಖಾಲಿಯಾಗಿ ಸುಗಮ ಸಂಚಾರ ಸಾಧ್ಯ. ಇದು ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಜನರ ಒಳಿತಿಗೆ ಬದಲಾವಣೆ ತರುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

0
0 views