logo

ಚಿಕ್ಕನಾಯಕನಹಳ್ಳಿ: ವಿವೇಕ ಜಾಗ್ರತ ಬಳಗದಿಂದ ವನಿತಾ ಸಂಗಮ ಕಾರ್ಯಕ್ರಮ

ವಿವೇಕ ಜಾಗ್ರತ ಬಳಗ, ಚಿಕ್ಕನಾಯಕನಹಳ್ಳಿ ಹಾಗೂ ಡಿವೈನ್ ಪಾರ್ಕ್, ಸಾಲಿಗ್ರಾಮ – ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಆಯೋಜಿಸಿದ್ದ “ವನಿತಾ ಸಂಗಮ” ಕಾರ್ಯಕ್ರಮವು ಪಟ್ಟಣದ ಶ್ರೀಗಿರಿ ಪಾರ್ಟಿ ಹಾಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ. ಶ್ರೀಮತಿ ಶಶಿಕಲಾ ರವೀಂದ್ರ, ಶ್ರೀ ಗುರೂಜಿ ನಿಷ್ಠ ಕಾರ್ಯಕರ್ತರು, ವಿವೇಕ ಜಾಗ್ರತ ಬಳಗ, ಚನ್ನಪಟ್ಟಣ ಅವರು ಮಾತನಾಡಿ, ಮಹಿಳೆಯರು ಸಂಸಾರದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಂಸ್ಕಾರಗಳನ್ನು ಬೆಳೆಸುವ ಮೂಲಕ ಮನೆಯನ್ನೇ ಮಂತ್ರಾಲಯವನ್ನಾಗಿ ರೂಪಿಸಬಹುದು ಎಂದು ತಿಳಿಸಿದರು. ಮಹಿಳೆಯರ ಅಂತರಂಗ ಶಕ್ತಿಯನ್ನು ಅರಿತು ಬದುಕನ್ನು ಸಾರ್ಥಕಗೊಳಿಸುವ ಕುರಿತು ಸರಳ ಹಾಗೂ ಮನಮುಟ್ಟುವ ಉದಾಹರಣೆಗಳ ಮೂಲಕ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ವನಿತ ಮುರುಗೇಶ್, ದಕ್ಷ ಸೇವಕಿ, ತುಮಕೂರು ಅವರು ಮಹಿಳೆಯರ ಪಾತ್ರ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದೆಂದು ಹೇಳಿ, ಇಂತಹ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಭಾಷಣ, ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ನಡೆದ ಸಂವಾದ ಹಾಗೂ ಆಶೀರ್ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಆತ್ಮೀಯ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅನೇಕ ಮಹಿಳೆಯರು ಭಾಗವಹಿಸಿ, ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ ನೀಡಿದರು. ಅಂತಿಮವಾಗಿ ವಿವೇಕ ಜಾಗ್ರತ ಬಳಗ ಚಿಕ್ಕನಾಯಕನಹಳ್ಳಿಅಧ್ಯಕ್ಷರು ದಕ್ಷಿಣ ಮೂರ್ತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಸಹಕರಿಸಿದ ಶ್ರೀ ಗಿರೀಶ್ ಇಟ್ಟಿಗೆ, ಶ್ರೀಗಿರಿ ಪಾರ್ಟಿ ಹಾಲ್, ಭಕ್ತಾಧಿಗಳು ಹಾಗೂ ಬಳಗದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

4
80 views