
ಉಚಿತವಾಗಿ ಒಂದು ಸಾವಿರ ಹೆಲ್ಮೆಟ್ ವಿತರಣೆ ಮಾಡಿದ ಸಂದೀಪ್ ರೆಡ್ಡಿ
ಚಿಕ್ಕಬಳ್ಳಾಪುರ, ಡಿ 25- ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವ ಹಿನ್ನೆಲೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಇಲ್ಲಿನ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೆಲ್ಮೆಟ್ ಜಾಗೃತಿ ಮೂಡಿಸುತ್ತಾ ಬೈಕ್ ರ್ಯಾಲಿ ಹಮ್ಮಿಕೊಂಡು ಹಾಗೂ ಹೆಲ್ಮೆಟ್ ಗಳನ್ನ ಉಚಿತವಾಗಿ ವಿತರಣೆ ಮಾಡಲಾಯಿತು.
ನಗರದ ರಿಲಿಯನ್ಸ್ ಪೆಟ್ರೋಲ್ ಬಂಕ್ ಸಮೀಪ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಒಂದು ಸಾವಿರ ಹೆಲ್ಮೆಟ್ ಗಳನ್ನ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ.ರೆಡ್ಡಿ ಅವರು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದರು.
ಇಲ್ಲಿನ ಸಂಚಾರಿ ಪೊಲೀಸ್ ಮಾರ್ಗದರ್ಶನದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಯುವ ಮಿತ್ರರು ಸಹಸ್ರಾರು ಸಂಖ್ಯೆಯ ಸಾರ್ವಜನಿಕರೊಂದಿಗೆ ನಗರದ ಬಿಬಿ ರಸ್ತೆ ಎಂಜಿ ರಸ್ತೆ ಗಂಗಮ್ಮನ ಗುಡಿ ರಸ್ತೆ ಹಾಗೂ ಸರ್ ಎಂ ವಿ ರಸ್ತೆಗಳ ಮೂಲಕ ಬೈಕ್ ರಾಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ ರೆಡ್ಡಿ ಅವರು ಕೇವಲ ಪೊಲೀಸರು ದಂಡ ವಿಧಿಸುತ್ತಾರೆ ಎಂದು ಕಣ್ಣುತಪ್ಪಿಸಿಕೊಳ್ಳಲು ಮತ್ತು ದಂಡದಿಂದ ಪಾರಾಗಲು ಹೆಲ್ಮೆಟ್ ಧರಿಸುವುದು ಅಲ್ಲ, ವಾಹನಗಳಲ್ಲಿ ಚಲಿಸುವಾಗ ಆಕಸ್ಮಿಕವಾಗಿ ಉಂಟಾಗುವ ಅಪಘಾತಗಳಂತಹ ಅವಘಡಗಳ ಸಂದರ್ಭಗಳಲ್ಲಿ ನಮ್ಮ ಪ್ರಾಣವನ್ನ ಕಾಪಾಡಿಕೊಳ್ಳಲು ಹೆಲ್ಮೆಟ್ ಕಡ್ಡಾಯ ಒಂದು ಸರಿದಾರಿಯಾಗಿದೆ ನಾವು ನಮ್ಮ ಪ್ರಾಣ ಕಾಪಾಡಿಕೊಳ್ಳುವುದರಿಂದ ನಮ್ಮ ಕುಟುಂಬದಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಮನೆಯಿಂದ ಹೊರಗೆ ಬಂದ ಸಂದರ್ಭದಲ್ಲಿ ಯಾವ ಗಳಿಗೆಯಲ್ಲಿ ಏನು ಆಗುತ್ತದೆಯೋ ಅದು ಯಾರಿಗೂ ತಿಳಿಯದು ಅಚಾತುರ್ಯಗಳಿಂದ ಆಗುವ ಅನಾಹುತಗಳಿಗೆ ಯಾರೂ ಕಾರಣರಲ್ಲ ಇಂತಹ ಸಂದರ್ಭಗಳಲ್ಲಿ ನಮ್ಮ ಪ್ರಾಣವನ್ನು ನಾವು ಕಾಪಾಡಿಕೊಳ್ಳುವುದು ಅಲ್ಲದೆ ಇಂತಹ ಅವಘಡಗಳಿಂದ ಉಂಟಾಗುವ ಇತರರ ಪ್ರಾಣಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ ಈ ಸಲುವಾಗಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಹತ್ತು ಹಲವಾರು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳಲ್ಲಿ ಒಂದಾಗಿ ಇಂತಹ ಸಾಮಾಜಿಕ ಹೊಣೆಗಾರಿಕೆಯ ಕಾರ್ಯವನ್ನುಕಾರ್ಯವನ್ನು ಕೈಗೆತ್ತಿಕೊಂಡು ಹೆಲ್ಮೆಟ್ ಇಲ್ಲದವರಿಗೆ ಹೆಲ್ಮೆಟ್ ನೀಡುವ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದ್ವಿಚಕ್ರ ವಾಹನ ಸವಾರರು ಸಂಚರಿಸುವ ವೇಳೆ ಇದನ್ನ ಧರಿಸಿ ತಮ್ಮ ಪ್ರಾಣವನ್ನ ಉಳಿಸಿಕೊಳ್ಳಬಹುದಾಗಿದೆ ಇದು ಸದ್ವಿನಿಯೋಗ ಆಗಿದ್ದೆ ಆದರೆ ಇಂತಹ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸಂದೀಪ ಬಿ ರೆಡ್ಡಿಯವರ ಅಭಿಮಾನಿಗಳು ಇದ್ದರು.